Responsive Image

ಸಂತಾನೋತ್ಪತ್ತಿ

ಸಂತಾನೋತ್ಪತ್ತಿ

ಕುರಿ ಸಾಕಾಣಿಕೆಯು ಲಾಭದಾಯಕವಾಗಬೇಕಾದರೆ ಕುರಿಗಳ ಉತ್ತಮ ಸಂತಾನೋತ್ಪತ್ತಿ ಪ್ರಕ್ರಿಯೆ ಅತ್ಯವಶ್ಯಕ. ಸಂತಾನೋತ್ಪತ್ತಿಯಲ್ಲಿ ಉಪಯೋಗಿಸುವ ಗಂಡು ಕುರಿ/ ಟಗರು ಹಾಗೂ ಹೆಣ್ಣು ಕುರಿಗಳನ್ನು ಸುಧಾರಿಸಿದ ತಳಿ ಹಾಗೂ ಹಿಂಡುಗಳಿಂದ ಆಯ್ಕೆ ಮಾಡಿಕೊಳ್ಳಬೇಕು. ಈ ಕುರಿಗಳು ಅನುವಂಶೀಯ ರೋಗಗಳಿಂದ ಮುಕ್ತವಾಗಿರಬೇಕು. ಸಾಮಾನ್ಯವಾಗಿ ಹೆಣ್ಣು ಕುರಿಗಳನ್ನು ಅವುಗಳ ಸಾಮರ್ಥ್ಯ ಹಾಗೂ ತಂದೆ ತಾಯಿಯ ವಂಶಾವಳಿಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ.

ಕುರಿಗಳನ್ನು ಸಂತಾನೋತ್ಪಾದನೆಗೆ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು

ಗಂಡು ಕುರಿ/ ಟಗರು

Responsive image

ಹೆಣ್ಣು ಕುರಿ

Responsive image

ಸಂತಾನೋತ್ಪಾದನೆಗೆ ತೊಡಗಿಸುವ ಕುರಿಗಳ ದೈಹಿಕ ಸ್ಥಿತಿಯು ಉತ್ತಮವಾಗಿದ್ದು ಆರೋಗ್ಯ ಪೂರ್ಣವಾಗಿರಬೇಕು. ಒಂದು ಹೆಣ್ಣು ಕುರಿ ಬೆಳೆದು ಮಿಲನಕ್ಕೆ ಪಕ್ವವಾದಾಗ ಮೊದಲನೇ ಬಾರಿಗೆ ಬೆದೆಯ ಲಕ್ಷಣಗಳನ್ನು ತೋರಿಸುತ್ತದೆ. ಈ ಪ್ರಾಯಕ್ಕೆ ಅಥವಾ ಪ್ರೌಢಾವಸ್ಥೆಗೆ ತಲುಪಲು ಕುರಿಗಳ ವಯಸ್ಸು, ತಳಿ, ಅನುವಂಶೀಯ ಗುಣ, ದೇಹದ ಗಾತ್ರ, ಆಹಾರ, ಪೋಷಣೆ, ಹಾಗೂ ಹುಟ್ಟಿದ ಋತುವಿನ ಮೇಲೆ ಪ್ರಭಾವಿತ ಗೊಂಡಿರುತ್ತದೆ.

ಕುರಿಗಳು ಹಗಲಿನ ಅವಧಿಯು ಕಡಿಮೆ ಇರುವ ಸಮಯದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಮಾಡುತ್ತವೆ, ಆದ್ದರಿಂದ ಕುರಿಗಳನ್ನು “ವಿಂಟರ್ ಬ್ರೀಡರ್” ಅಥವಾ “ಶಾರ್ಟ್ ಡೇ ಬ್ರೀಡರ್” ಎಂದು ಕರೆಯುತ್ತಾರೆ. ಚಳಿಗಾಲದ ತಿಂಗಳುಗಳಲ್ಲಿ ದೀರ್ಘ ರಾತ್ರಿಗಳು ಮೆದುಳಿನಲ್ಲಿರುವ ಪಿನಿಯಲ್ ಗ್ರಂಥಿಯಿಂದ ಮೆಲೆಟೋನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಮೆಲಿಟೋನಿನ್ ನಂತರ ಹೈಪೋತಲಮಸ್ ನಿಂದ ಜಿಎನ್ಆರ್ಎಚ್ ಹಾರ್ಮೋನನ್ನು ಉತ್ತೇಜಿಸುವುದರಿಂದ ಕುರಿಗಳು ಬೆದೆಗೆ ಬರಲು ಸಹಕಾರಿಯಾಗುತ್ತದೆ. ವಸಂತ ಋತುವಿನಲ್ಲಿ ಅಥವಾ ಆಹಾರ ಲಭ್ಯತೆ ಇರುವ ಋತುವಿನಲ್ಲಿ ಜನಿಸಿದ ಹೆಣ್ಣು ಕುರಿಗಳು ಬೇಗನೆ ಪ್ರಾಯಕ್ಕೆ ಬರಲು ಪೂರಕವಾಗಿರುತ್ತದೆ. ಸಾಮಾನ್ಯವಾಗಿ ಕುರಿಗಳು 8 ರಿಂದ 12 ತಿಂಗಳಲ್ಲಿ ಪ್ರೌಡಾವಸ್ಥೆಗೆ ತಲುಪಿ ಬೆದೆ ಚಕ್ರ ಆರಂಭಗೊಳ್ಳುತ್ತದೆ. ಆನಂತರ ಪ್ರತಿ 15 -19 ದಿನಗಳಿಗೊಮ್ಮೆ ಬೆದೆಗೆ ಬರುತ್ತದೆ.

ಬೆದೆ ಚಕ್ರ

ಕುರಿಗಳಲ್ಲಿ ಬೆದೆ ಚಕ್ರವು ಸುಮಾರು 15 ರಿಂದ 19 ದಿನಗಳವರೆಗೆ ಇದ್ದು ಸರಾಸರಿ 17 ದಿನಗಳಾಗಿರುತ್ತವೆ. ಬೆದೆಯ ಅವಧಿಯು ಸುಮಾರು 24 ರಿಂದ 36 ಗಂಟೆಗಳು ಇದ್ದು ಆ ಸಮಯದಲ್ಲಿ ಟಗರಿನ ಸಂಪರ್ಕ ದೊರೆತಾಗ ಮಿಲನ ಹೊಂದಲು ಸೂಕ್ತವಾಗಿರುತ್ತದೆ. ಕುರಿಗಳಲ್ಲಿ ಅಂಡಾಣುಗಳು ಬೆದೆಯ ಮಧ್ಯದಲ್ಲಿ ಬಿಡುಗಡೆಯಾಗುತ್ತದೆ.

ಬೆದೆಯ ಲಕ್ಷಣಗಳು

ಬೆದೆಯಲ್ಲಿರುವ ಹೆಣ್ಣು ಕುರಿಗಳಲ್ಲಿ ಗಮನಿಸಬೇಕಾದ ಲಕ್ಷಣಗಳು

Responsive image
Responsive image
Responsive image

ಗಂಡು ಕುರಿಗಳ ಪರಿಚಯ

ಗಂಡು ಕುರಿಗಳನ್ನು ಹೆಣ್ಣು ಕುರಿಗಳ ಜೊತೆ ಬಿಡುವುದರಿಂದ ಹೆಣ್ಣು ಕುರಿಗಳು ಬೇಗ ಬೆದೆಗೆ ಬರುತ್ತದೆ ಇದನ್ನು ರ‍್ಯಾಮ್ ಎಫೆಕ್ಟ್” ಎಂದು ಕರೆಯುತ್ತಾರೆ. ಗಂಡು ಕುರಿಗಳ ಪರಿಚಯದ ಮೂರರಿಂದ ನಾಲ್ಕು ದಿನಗಳ ನಂತರ ಅಂಡಾಣುಗಳ ಉತ್ಪತ್ತಿ ಸಂಭವಿಸುತ್ತವೆ. ಗಂಡು ಕುರಿ ಮತ್ತು ಹೆಣ್ಣು ಕುರಿಗಳನ್ನು ಕನಿಷ್ಠ್ ಆರು ವಾರಗಳ ಕಾಲ ಯಾವುದೇ ಸಂಪರ್ಕಕ್ಕೆ (ದೃಷ್ಟಿ, ದ್ವನಿ, ಮತ್ತು ವಾಸನೆ) ಬಾರದಿದ್ದರೆ ಮಾತ್ರ ಗಂಡು ಕುರಿಗಳ ಪರಿಚಯ ಪರಿಣಾಮಕಾರಿಯಾಗುತ್ತದೆ. ಗಂಡು ಕುರಿಗಳನ್ನು ಒಂದರಿಂದ ಎರಡು ಕಿಲೋಮೀಟರ್ ಅಂತರದ ದೂರದಲ್ಲಿ ಹೆಣ್ಣು ಕುರಿಗಳಿಂದ ಬೇರ್ಪಡಿಸಬೇಕು.

ಫ್ಲಶಿಂಗ್

ಸಂತಾನೋತ್ಪತ್ತಿ ಪ್ರಕ್ರಿಯೆ ಮೇಲೆ ಪೌಷ್ಟಿಕಾಂಶವು ನೇರವಾದ ಪ್ರಭಾವವನ್ನು ಹೊಂದಿದೆ. ಸಂತಾನ ಅಭಿವೃದ್ಧಿ ಋತುವಿನ ಆರಂಭದ ಸಮಯದಲ್ಲಿ ಒಂದರಿಂದ ಎರಡು ತಿಂಗಳ ಮುಂಚಿತವಾಗಿ ಕುರಿಗಳನ್ನು ಸಂಕರಣಕ್ಕೆ ತಯಾರಿಸಬೇಕು. ಪ್ರತಿ ಕುರಿಗೆ ಹಸಿರುಮೇವಿನ ಜೊತೆಗೆ 200 ಗ್ರಾಂ ಹಿಂಡಿ ಅಥವಾ ದಾಣಿ ಮಿಶ್ರಣ ಕೊಡುವುದರಿಂದ ಹೆಚ್ಚಿನ ಅಂಡಾಣುಗಳು ಬಿಡುಗಡೆಗೊಳ್ಳುತ್ತವೆ ಹಾಗೂ ಎರಡರಿಂದ ಮೂರು ಮರಿಗಳನ್ನು ಹಾಕುತ್ತವೆ, ಈ ಪದ್ದತಿಗೆ “ಫ್ಲಶಿಂಗ್”ಎಂದು ಕರೆಯುತ್ತಾರೆ. ಫ್ಲಶ್ಸಿಂಗ್ ಪ್ರಕ್ರಿಯೆಯಲ್ಲಿ ಧಾನ್ಯವನ್ನು ಕ್ರಮೇಣವಾಗಿ ಸೇರಿಸಬೇಕು. ಕುರಿಗಳ ಸಂತಾನೋತ್ಪತ್ತಿ ಋತುವಿನ ಯಶಸ್ಸಿಗೆ ಪೌಷ್ಟಿಕಾಂಶದ ಫ್ಲಶ್ಸಿಂಗ್ ಪ್ರಮುಖ ಅಂಶವಾಗಿದೆ.

ಕುರಿ ಸಂವರ್ಧನೆಯಲ್ಲಿ ಪಾಲಿಸಬೇಕಾದ ಕ್ರಮಗಳು

ಕುರಿಗಳಲ್ಲಿ ಗರ್ಭಧಾರಣೆಯ ಕಾಲ ಮಾರ್ಚ್ ನಿಂದ ಏಪ್ರಿಲ್ ತಿಂಗಳು ಇಲ್ಲವೇ ಜುಲೈ ಇಂದ ಆಗಸ್ಟ್ ತಿಂಗಳ ಅಂತ್ಯದವರೆಗೆ ಇರುತ್ತದೆ. ಈ ಸಮಯದಲ್ಲಿ ಕುರಿಗಳಿಗೆ ಗರ್ಭ ಕಟ್ಟಿಸಿದರೆ ಅಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ಹಾಗೂ ಡಿಸೆಂಬರ್‌ನಿಂದ ಜನವರಿ ತಿಂಗಳವರೆಗೂ ಮರಿ ಹಾಕುತ್ತವೆ. ಸಾಮಾನ್ಯವಾಗಿ ಕುರಿಗಳು ಅಗಸ್ಟ್ನಿಂದ ಜನವರಿ ತಿಂಗಳವರೆಗೆ ಮರಿ ಹಾಕುತ್ತವೆ. ವಷ೯ದಲ್ಲಿ ಎರಡು ಸಾರಿ ಮರಿ ಹಾಕುವುದನ್ನು ನಿರೀಕ್ಷಿಸುವುದು ಕಷ್ಟ ಆದರೆ ಎರಡು ವಷ೯ದ ಅವಧಿಯಲ್ಲಿ ಮೂರು ಬಾರಿ ಮರಿಗಳನ್ನು ಪಡೆಯಬಹುದು.

ಗಭ೯ ತಪಾಸಣೆ

ಹೆಣ್ಣು ಕುರಿಯು ಟಗರಿನೊಂದಿಗೆ ಮಿಲನ ಹೊಂದಿದ ನಂತರ ಸುಮಾರು 30 ದಿನಗಳಲ್ಲಿ ಭ್ರೂಣವು ಗರ್ಭಾಶಯದಲ್ಲಿ ಸೇರಿ ಬೇರೂರುವುದರಿಂದ ಈ ಅವಧಿಯಲ್ಲಿ ಸೂಕ್ಷ್ಮವಾಗಿ ಕುರಿಗಳನ್ನು ನಿರ್ವಹಿಸಬೇಕಾಗುತ್ತದೆ. 30 ದಿನಗಳ ನಂತರ ಯಾವ ಸಮಯದಲ್ಲಿ ಬೇಕಾದರೂ ಕುರಿಗಳಲ್ಲಿ ಗರ್ಭ ಪರೀಕ್ಷೆಯನ್ನು ಮಾಡಿಸಬಹುದು. ಕುರಿಗಳಲ್ಲಿ ಗರ್ಭಧಾರಣೆಯ ಅವಧಿಯು ಸುಮಾರು 145 ರಿಂದ 150 ದಿನಗಳು ಐದು ತಿಂಗಳು ಆಗಿರುತ್ತದೆ.

Responsive image

ಕುರಿಗಳಲ್ಲಿ ಗರ್ಭಧಾರಣೆಯನ್ನು ಪತ್ತೆಹಚ್ಚಲು ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ.

ಗರ್ಭಧರಿಸಿದ ಕುರಿಗಳ ಪಾಲನೆ

ಮರಿಗಳ ಪಾಲನೆ

Responsive image
Responsive image