ಕೃತಕ ಗರ್ಭಧಾರಣೆ
- ಸಂವರ್ಧನೆಯಲ್ಲಿ ಉಪಯೋಗಿಸುವಂತಹ ಹೆಣ್ಣು ಹಾಗು ಗಂಡು ಕುರಿಗಳು ಒಂದೇ ವಂಶಾವಳಿಯಿಂದ ಬಂದಿರಬಾರದು ಹಾಗೂ ಒಳ ಅಥವಾ ಅಂತರ ಸಂಕರಣ ಸಂವರ್ಧನೆಯನ್ನು ಯಾವ ಕಾರಣಕ್ಕೂ ಅನುಸರಿಸಬಾರದು.
- ಶರೀರದ ವಿವಿಧ ಅಂಗಗಳ ರಚನೆ ಹಾಗೂ ಮೈಕಟ್ಟು ಮೂಲತಳಿಯ ಗುಣಕ್ಕೆ ತಕ್ಕಂತೆ ಹೋಲಬೇಕು. ಸಾಮಾನ್ಯವಾಗಿ ಹೆಣ್ಣು ಕುರಿಗಳನ್ನು ಅವುಗಳ ಸಾಮರ್ಥ್ಯ ಹಾಗೂ ತಂದೆ ತಾಯಿಯ ವಂಶಾವಳಿಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ ಮತ್ತು ಶೀಘ್ರವಾಗಿ ಬೆಳೆದು ಚಿಕ್ಕವಯಸ್ಸಿನಲ್ಲಿಯೇ ಬೆದೆಗೆ ಬಂದು ಮರಿ ಹಾಕುವ ವಿಶೇಷ ಗುಣಗಳನ್ನು ಹೊಂದಿರಬೇಕು.
- ಅತ್ಯುತ್ತಮ ಮಟ್ಟದಲ್ಲಿ ಆಹಾರ ಪಚನವಾಗಿಸುವಿಕೆ, ಆಹಾರವನ್ನು ಮಾಂಸ ಇಲ್ಲವೇ ಉಣ್ಣೆಯಾಗಿ ಪರಿವರ್ತಿಸುವಿಕೆ ಮತ್ತು ಅಧಿಕ ಇಳುವರಿ ಕೊಡುವ ಗುಣಗಳನ್ನು ಹೊಂದಿರಬೇಕು. ಹೆಣ್ಣು ಮತ್ತು ಗಂಡು ಕುರಿಗಳನ್ನು ಬೇರೆ ಬೇರೆ ಹಿಂಡುಗಳಿಂದ ಆಯ್ಕೆ ಮಾಡಿ ಸಂವರ್ಧನೆ ಮಾಡಿಸಬೇಕು.
- ಈ ಕುರಿಗಳು ಅನುವಂಶೀಯ ರೋಗಗಳು ಹಾಗೂ ಇತರೆ ಕಾಯಿಲೆಗಳಿಂದ ಮುಕ್ತವಾಗಿರಬೇಕು. ಸಂವರ್ಧನೆ ಕಾರ್ಯವನ್ನು ಕೃತಕ ಗರ್ಭಧಾರಣೆ (ಯೋನಿಯ ಮೂಲಕ ಅಥವಾ ಲ್ಯಾಪರೊಸ್ಕೋಪಿಕ್) ಮೂಲಕ ಮಾಡಬಹುದು ಅಥವಾ ಟಗರನ್ನು ಹೆಣ್ಣು ಕುರಿಯೊಂದಿಗೆ ಸಂತಾನೋತ್ಪತ್ತಿಗೆ ಬಿಡಬಹುದು. ಸಂವರ್ಧನೆಗೆ ಸಾಮಾನ್ಯವಾಗಿ 39 ರಿಂದ 40 ಹೆಣ್ಣು ಕುರಿಗಳಿಗೆ ಒಂದು ಬೀಜದ ಟಗರು ಬೇಕಾಗುತ್ತದೆ.
ಆಡು/ಮೇಕೆಗಳಲ್ಲಿ ಕೃತಕ ಗಭ9ಧಾರಣೆಯ ಕುರಿತು ವಿಡಿಯೊ: (142) Artificial Insemination in Sheep and Goats#kannada#step by step#vch bengaluru# dept of extension - YouTube