Responsive Image

ಆರೋಗ್ಯ ರಕ್ಷಣೆ

ಆರೋಗ್ಯ ರಕ್ಷಣೆ

ಸಾಂಕ್ರಾಮಿಕ ರೋಗಗಳಿಂದ ಕುರಿ ಸಾಕಣೆದಾರರಿಗೆ ಅಪಾರ ಆರ್ಥಿಕ ಹಾನಿಯುಂಟಾಗುತ್ತದೆ. ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲುಕುರಿ ಸಾಕಣೆದಾರರು ತಪ್ಪದೆ ಈ ಮುಂದಿನ ಕ್ರಮಗಳನ್ನು ಅನುಸರಿಸಬೇಕು:

  1. ಕುರಿಗಳಿಗೆ ಬರುವಂತಹ ಎಲ್ಲ ಸಾಂಕ್ರಾಮಿಕ ರೋಗಗಳಿಗೆ ಮುಂಗಾರು ಮಳೆ ಬೀಳುವ ಮುನ್ನವೇ ಆಯಾ ರೋಗದ ಲಸಿಕೆಯನ್ನು 15 ದಿನಗಳ ಮುಂಚಿತವಾಗಿ ಪರಿಣಿತ ಪಶುಪಾಲಕರು ಇಲ್ಲವೇ ಪಶುವೈದ್ಯರಿಂದ ಹಾಕಿಸಬೇಕು.
  2. ಕುರಿಗಳನ್ನು ರೋಗಭಾಧೆಗಳಿಂದ ಮುಕ್ತವಿರುವ ಪ್ರದೇಶದಲ್ಲಿ ಮೇಯಿಸಬೇಕು. ಯಾವಾಗಲೂ ಹರಿಯುವ ನೀರನ್ನು ಕುಡಿಸಬೇಕು. ಎಲ್ಲಾ ವರ್ಗದ ಕುರಿಗಳಿಗೆ ದಾಣಿ ಮಿಶ್ರಣ ಕೊಡುವುದನ್ನು ರೂಢಿ ಮಾಡಬೇಕು.
  3. ರೋಗಗ್ರಸ್ತ ಕುರಿಗಳನ್ನು ಬೇರ್ಪಡಿಸಿ ಚಿಕಿತ್ಸೆ ಮಾಡಿಸಬೇಕು.
  4. ಕುರಿಗಳನ್ನು ಆದಷ್ಟೂ ವಾತಾವರಣದ ಏರುಪೇರುಗಳಿಂದ ಸಂರಕ್ಷಿಸಬೇಕು.
  5. ಕುರಿಗಳಿಗೆ ವರ್ಷಕ್ಕೆ 2-3 ಸಲ ಜಂತುನಾಶಕ ಔಷಧಿ ಹಾಕಿಸುವುದು ಸೂಕ್ತ.

1. ನೆರಡಿರೋಗ (ಆಂಥ್ರಾಕ್ಸ್)

ರೋಗ ಲಕ್ಷಣಗಳು:

ನಿವಾರಣೋಪಾಯಗಳು:
ಬ್ಯಾಸಿಲ್ಲಸ್ ಆಂತ್ರಾಸಿಸ್ ಜೈವಿಕ ಲಸಿಕೆಯನ್ನು ಹಾಕಿಸಬೇಕು.

2. ಕರುಳು ಬೇನೆ

ರೋಗ ಹರಡಲು ನೆರವಾಗುವ ಅಂಶಗಳು

  1. ಹಾಲು ಕುಡಿಯುವ ಕುರಿಮರಿಗಳು.
  2. ಇಬ್ಬನಿ ಅಥವಾ ಮಂಜುಕೂಡಿದ ಪ್ರದೇಶದಲ್ಲಿ ಮೇಯುವಿಕೆ.
  3. ಆಸೆ ಬುರುಕುತನದಿಂದ ಆಹಾರ ತಿನ್ನುವ ಮತ್ತು ಹೆಚ್ಚು ಕೊಬ್ಬಿದ ಕುರಿಗಳು.
  4. ಅತಿ ಹೆಚ್ಚು ಜೋಳವನ್ನು ಮೇಯಿಸಿದಾಗ ಮತ್ತು ಆಹಾರವನ್ನು ಬದಲಿಸಿದಾಗ ಈ ರೋಗ ಕಂಡು ಬರುತ್ತದೆ.

ರೋಗ ಲಕ್ಷಣಗಳು:

ನಿವಾರಣೆ:

  1. ಪದೇ ಪದೇ ಮೇವನ್ನು ಬದಲಿಸಬಾರದು
  2. ಹೆಚ್ಚಾಗಿ ಪಿಷ್ಟ ಪದಾರ್ಥಗಳನ್ನು ತಿನ್ನಲು ಬಿಡಬಾರದು
  3. ರೋಗ ನಿವಾರಣೆಗೆ 3 ತಿಂಗಳ ಮೇಲ್ಪಟ್ಟ ಮರಿಗಳಿಗೆ 21 ದಿನಗಳ ಅಂತರದಲ್ಲಿ 2 ಬಾರಿ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು

3. ಗಳಲೆ ರೋಗ (ಪಾಶ್ಚುರೆಲ್ಲೊಸಿಸ್)

ರೋಗ ಪ್ರಸಾರ:

  1. ಕುರಿಗಳನ್ನು ಬಹಳ ದೂರದವರೆಗೆ ಸಾಗಿಸುವುದು.
  2. ಮಳೆ ಮತ್ತು ಬದಲಾದ ವಾತಾವರಣದಲ್ಲಿ ಕುರಿಗಳನ್ನು ಒಂದೆಡೆಕೂಡಿ ಹಾಕುವುದು.
  3. ಹೆಚ್ಚು ಕುರಿಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಕೂಡುವುದು
  4. ಕಲುಷಿತ ಮೇವು ಅಥವಾ ನೀರುಕುಡಿಸುವುದು.

ರೋಗ ಲಕ್ಷಣಗಳು:

ರೋಗ ಗುರುತಿಸುವಿಕೆ:

  1. ಈ ರೋಗವು ಕೆಲವು ಪ್ರದೇಶಗಳಲ್ಲಿ ಆಗಾಗ ಕಂಡುಬರುವುದು. ಅಂತಹ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
  2. ಇರುವ ಕುರಿಗಳ ಜೊತೆಗೆ ಹೊಸದಾಗಿ ಬಂದ ಕುರಿಗಳ ಸೇರ್ಪಡೆಯನ್ನು ಗಮನಿಸುವುದು.

ನಿವಾರಣಾ ಚಿಕಿತ್ಸೆ:

4. ಚಪ್ಪೆರೋಗ

ರೋಗ ಲಕ್ಷಣಗಳು:

ನಿವಾರಣೋಪಾಯಗಳು: ಚಪ್ಪೆರೋಗದ ಲಸಿಕೆಯನ್ನು ಮುಂಗಾರು ಮಳೆ ಬೀಳುವ ಮುನ್ನ ಹಾಕಿಸಬೇಕು.

5. ನೀಲಿ ನಾಲಿಗೆ ರೋಗ

ರೋಗ ಲಕ್ಷಣಗಳು:

Responsive image

ನಿವಾರಣೆ :

6. ಕಾಲುಬಾಯಿ ಜ್ವರ

ಈ ರೋಗವು ಪ್ರಮುಖವಾಗಿ ಮೆಲಕುಹಾಕುವ ಪ್ರಾಣಿಗಳಲ್ಲಿ ಹರಡುವ ಒಂದು ಸಾಂಕ್ರಮಿಕರೋಗ, ಗೊರಸು ಇರುವ ಎಲ್ಲಾ ಪ್ರಾಣಿಗಳಲ್ಲಿಯೂ ಸಹ ಈ ರೋಗವು ಕಂಡುಬರುತ್ತದೆ.

ರೋಗ ಲಕ್ಷಣಗಳು:

Responsive image

ರೋಗ ಪ್ರಸಾರ:

7. ಕುರಿ ಸಿಡುಬು (ಕುರಿ ಮೈಲಿ, ದೇವಿ, ಅಮ್ಮ)

ಇದೊಂದು ಸಾಂಕ್ರಾಮಿಕ ರೋಗ, ಸಣ್ಣ ವಯಸ್ಸಿನ ಮರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನುಂಟುಮಾಡುತ್ತದೆ.

ರೋಗಕಾರಕಗಳು: ಈ ರೋಗವು ಪಾಕ್ಸ್ (Pox) ಎಂಬ ವೈರಸನಿಂದ ಉಂಟಾಗುತ್ತದೆ.

ರೋಗ ಪ್ರಸಾರ: ಈ ರೋಗದ ವೈರಸಗಳು ಗಾಳಿ, ಗೊಣ್ಣೆ, ಚರ್ಮದ ಹೊಟ್ಟು (ಬೊಬ್ಬೆ), ಜೊಲ್ಲು ಹಾಗೂ ರೊಗಗ್ರಸ್ತ ಕುರಿಗಳ ಸಂಪರ್ಕ ಪಡೆದ ವಸ್ತುಗಳು ಮತ್ತು ಜನರಿಂದ ಹರಡುತ್ತವೆ.

ರೋಗ ಲಕ್ಷಣಗಳು:

Responsive image

ನಿವಾರಣೆ :

ರೋಗ ತಡೆಗಟ್ಟಲು ಕುರಿಗಳಿಗೆ ಬೇಸಿಗೆ ಕಾಲಕ್ಕೆ ಮುಂಚೆಯೇ ಕುರಿ ಸಿಡುಬು ಲಸಿಕೆ ಹಾಕಿಸಬೇಕು.

ಕುರಿಗಳಲ್ಲಿ ಲಸಿಕೆ ಹಾಗೂ ಜಂತುನಾಶಕ ಔಷಧೋಪಚಾರದ ವೇಳಾಪಟ್ಟಿ

ಕ್ರ.ಸಂ. ರೋಗ ಲಸಿಕೆ ಹಾಕುವ ವಯಸ್ಸು ಲಸಿಕೆ ಹಾಕುವ ಸಮಯ
1. ಕರುಳು ಬೇನೆ 4 ತಿಂಗಳು ಮೇಲ್ಪಟ್ಟು ವರ್ಷಕ್ಕೆ ಎರಡು ಬಾರಿ
ಜನೆವರಿ ಮತ್ತು ಜುಲೈ ತಿಂಗಳಲ್ಲಿ
2. ಕಾಲು ಬಾಯಿ ರೋಗ (ಖುರಖತ್) 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೆ ಎರಡು ಬಾರಿ
ಫೆಬ್ರವರಿ-ಮಾರ್ಚ್ & ಅಗಷ್ಟ್-ಸಪ್ಟೆಂಬರ್ ತಿಂಗಳಲ್ಲಿ
3. ಚಪ್ಪೆ ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ
4. ಗಂಟಲು ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ
5. ನರಡಿ ರೋಗ 6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ (ರೋಗ ಕಂಡುಬಂದ ಪ್ರದೇಶದಲ್ಲಿ)
6. ಪಿ.ಪಿ.ಆರ್ 4 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಜೂನ್ – ಜುಲೈ ತಿಂಗಳಲ್ಲಿ
7. ನೀಲಿ ನಾಲಿಗೆ ರೋಗ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಅಗಷ್ಟ್ ತಿಂಗಳಲ್ಲಿ
8. ಸಿಡುಬು ರೋಗ 4 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಡಿಸೆಂಬರ್ ತಿಂಗಳಲ್ಲಿ