Responsive Image

ಹಂದಿ ವಸತಿ

ವಸತಿ:

Responsive Image

ಕಡಿಮೆ ವೆಚ್ಚದ ಹಂದಿ ಶೆಡ್‌ಗಳ ನಿರ್ಮಾಣ

  1. ಉದ್ಯಾನ ಅಥವಾ ಕೃಷಿಭೂಮಿಯಲ್ಲಿ ಎತ್ತರದ ಸ್ಥಳದಲ್ಲಿ ಹಂದಿ ಶೆಡ್‌ಗಳನ್ನು ನಿರ್ಮಿಸಬಹುದು. ನೆಲಹಾಸು ಮತ್ತು ಪಕ್ಕದ ಗೋಡೆಗಳನ್ನು ಕಲ್ಲಿನ ಚಪ್ಪಡಿಗಳನ್ನು ಬಳಸಿ ನಿರ್ಮಿಸಬೇಕು ಮತ್ತು ಮರದ ಕಟ್ಟಿಗೆಯನ್ನು ಛಾವಣಿಯ ನಿರ್ಮಾಣಕ್ಕೆ ಬಳಸಬಹುದು, ಇದು ಆರ್ಥಿಕವಾಗಿರುತ್ತದೆ.
  2. ವಿಶೇಷವಾಗಿ ಗರ್ಭಿಣಿ ಹಂದಿಗಳು ಆಕಸ್ಮಿಕವಾಗಿ ಬೀಳುವುದನ್ನು ತಡೆಯಲು ನೆಲವು ಒರಟಾಗಿರಬೇಕು ಮತ್ತು ಜಾರುವಂತಿರಬಾರದು.
  3. ತೊಳೆದ ನೀರು, ಸಗಣಿ ಮತ್ತು ಮೂತ್ರದ ಸುಲಭ ಹರಿವಿಗೆ ಸಾಕಷ್ಟು ಇಳಿಜಾರು ಒದಗಿಸಬೇಕು. ಇದು ಗೊಬ್ಬರವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
  4. ಉತ್ತಮ ಬೆಳವಣಿಗೆಗೆ ಎಲ್ಲಾ ಸಮಯದಲ್ಲೂ ಶುದ್ಧ ನೀರು ಲಭ್ಯವಿರಬೇಕು. ನೀರಿನ ತೊಟ್ಟಿ ಆಹಾರ ತೊಟ್ಟಿಯ ಪಕ್ಕದಲ್ಲಿರಬೇಕು. ಇದಲ್ಲದೆ, ಕಲ್ಲಿನ ಚಪ್ಪಡಿ ಮತ್ತು ಸಿಮೆಂಟ್ ಬಳಸಿ 1x1x1 ಮೀ (LBH) ಆಯಾಮದೊಂದಿಗೆ ಈಜಾಡಲು ಸಣ್ಣ ನೀರಿನ ತೊಟ್ಟಿಯನ್ನು ನಿರ್ಮಿಸಬಹುದು. ಬೇಸಿಗೆಯಲ್ಲಿ ಹಂದಿಗಳು ತಮ್ಮ ದೇಹವನ್ನು ತಂಪಾಗಿಡಲು ನೀರಿನ ತೊಟ್ಟಿ ಸ್ನಾನದ ತೊಟ್ಟಿಯಾಗಿ ಕಾರ್ಯನಿರ್ವಹಿಸುತ್ತದೆ.
  5. ಬಳಸಿದ ನೀರನ್ನು ಕೃಷಿ ಭೂಮಿಗೆ ಬಿಡಬಹುದು, ಇದು ಗೊಬ್ಬರವಾಗಿ ಮೌಲ್ಯವನ್ನು ಹೆಚ್ಚಿಸುತ್ತದೆ.
  6. Responsive Image

  7. ಗಂಡು ಹಂದಿಗಳು, ಗರ್ಭಿಣಿ ಹಂದಿಗಳು, ಹಾಲುಣಿಸುವ ಹಂದಿಗಳು ಮತ್ತು ಹಂದಿಮರಿಗಳಿಗೆ ಪ್ರತ್ಯೇಕ ಶೆಡ್ ವ್ಯವಸ್ಥೆ ಮಾಡಬೇಕು.
  8. ಪ್ರತಿಯೊಂದು ಶೆಡ್‌ನಲ್ಲಿ ಮೇವಿನ ತೊಟ್ಟಿ ಮತ್ತು 24 ಗಂಟೆಗಳ ನೀರು ಸರಬರಾಜು ಮಾಡುವ ನೀರಿನ ತೊಟ್ಟಿಯನ್ನು ಒದಗಿಸಬೇಕು.
  9. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಆಹಾರವನ್ನು ನೀಡಬೇಕು.
  10. ಗರ್ಭಿಣಿ ಹಂದಿಗಳ ಶೆಡ್‌ನಲ್ಲಿ ಗೋಡೆಯಿಂದ ಮತ್ತು ನೆಲದಿಂದ 10” ದೂರದಲ್ಲಿ ಕಬ್ಬಿಣದ ಗಾರ್ಡ್ ಹಳಿಗಳು ಮತ್ತು ಉಕ್ಕಿನ ಪೈಪಗಳನ್ನು ಒದಗಿಸಬೇಕು. ಈ ಕಾವಲು ಹಳಿಗಳು ತಾಯಿ ಹಂದಿಯನ್ನು ಹಂದಿಮರಿಗಳ ಮೇಲೆ ಆಕಸ್ಮಿಕವಾಗಿ ಮಲಗುವುದನ್ನು ತಡೆಗಟ್ಟಿ ಮರಿಗಳ ಆಕಸ್ಮಿಕ ಮರಣವನ್ನು ತಡೆಗಟ್ಟುತ್ತವೆ.
  11. ನೆಲದ ಸ್ಥಳದ ಅವಶ್ಯಕತೆ: 6-12 ತಿಂಗಳ ವಯಸ್ಸಿನ ಹಂದಿಗಳಿಗೆ ಪ್ರತಿ ಹಂದಿಗೆ 1.25 ಚದರ ಮೀ. ಸ್ಥಳಾವಕಾಶದ ಅಗತ್ಯವಿದೆ. ಇದಲ್ಲದೆ, ವಯಸ್ಕ ಬೆಳೆದ ಹಂದಿಗಳಿಗೆ ಪ್ರತಿ ಹಂದಿಗೆ 1.5 ಚದರ ಮೀ. ಸ್ಥಳಾವಕಾಶದ ಅಗತ್ಯವಿದೆ. ಇದಲ್ಲದೆ, ಪ್ರಾಣಿಗಳ ಸುಲಭ ಚಲನೆಗೆ ಅನುಕೂಲವಾಗುವಂತೆ ತನ್ನ ಸಹ ಹಂದಿಗಳಿಗೆ ಅವಕಾಶ ಕಲ್ಪಿಸಲು ಸಾಮಾಜಿಕ ಸ್ಥಳಾವಕಾಶದ ಅಗತ್ಯವಿದೆ.
  12. ಬೇಸಿಗೆಯಲ್ಲಿ ಉತ್ತಮ ಬೆಳವಣಿಗೆ ಮತ್ತು ಕಾರ್ಯಕ್ಷಮತೆಗಾಗಿ ಹಂದಿ ಶೆಡ್ ಸುತ್ತಲೂ ದೊಡ್ಡ ಮರಗಳನ್ನು ಬೆಳೆಸುವುದು ತಂಪಾದ ವಾತಾವರಣವನ್ನು ಒದಗಿಸುತ್ತದೆ.
Responsive Image

ಗಂಡು ಹಂದಿಗಳ ವಾಸಸ್ಥಳ

ಹಂದಿಗಳ ಮನೆ 6.25-7.5 ಚದರ ಮೀ. ವಿಸ್ತೀರ್ಣ ಮತ್ತು ವ್ಯಾಯಾಮಕ್ಕಾಗಿ 8.8-12 ಚದರ ಮೀ. ತೆರೆದ ಪ್ರದೇಶವನ್ನು ಒಳಗೊಂಡಿರಬೇಕು. ಗೋಡೆಗಳು ಕನಿಷ್ಠ 1.5 ಮೀ. ಎತ್ತರವನ್ನು ಹೊಂದಿರಬೇಕು.

ಹೆಣ್ಣು ಹಂದಿಗಳ ವಾಸಸ್ಥಳ

ಗಂಡು ಹಂದಿಗಳಂತೆ ಭಾಗಶಃ ಛಾವಣಿಯೊಂದಿಗೆ ತೆರೆದ ಅಂಗಳ ಮಾದರಿಯ ವಸತಿ ಒದಗಿಸಬಹುದು. ಒಟ್ಟು 10-15 ಹೆಣ್ಣು ಹಂದಿಗಳ ಗುಂಪು ಒಂದು ಮನೆಯಲ್ಲಿ ಇರಿಸಬಹುದು. ಪ್ರತಿ ಹಂದಿಗೆ 2 ಚದರ ಮೀ. ವಿಸ್ತೀರ್ಣವನ್ನು ಒದಗಿಸಬಹುದು.

Responsive Image
Responsive Image


ಫಾರೋಯಿಂಗ್ (ಹೆರಿಗೆಯಲ್ಲಿರುವ) ಹಂದಿಗಳ ವಸತಿ

ಹೆರಿಗೆಯಲ್ಲಿರುವ ಹಂದಿಗಳನ್ನು 2.5 x 4.0 = 10.0 ಚದರ ಮೀ. ವಿಸ್ತೀರ್ಣದ ಫಾರೋಯಿಂಗ್ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬಹುದು, ಇದರಲ್ಲಿ ಕಾವಲು ಹಳಿಗಳು, ತೆವಳುವ ಪ್ರದೇಶ, ಮೇವು ಮತ್ತು ನೀರಿನ ತೊಟ್ಟಿಗಳ ಲಭ್ಯತೆ ಒದಗಿಸಬೇಕು.



ಹಂದಿಗಳಿಗೆ ಸ್ಥಳಾವಕಾಶದ ಅವಶ್ಯಕತೆಗಳು

ಪ್ರಾಣಿಗಳ ಪ್ರಕಾರ ನೆಲದ ಜಾಗದ ಅವಶ್ಯಕತೆ (ಪ್ರತಿ ಹಂದಿಗೆ ಚದರ ಮೀ) ಪ್ರತಿ ಪೆನ್‌ಗೆ ಗರಿಷ್ಠ ಸಂಖ್ಯೆಯ ಹಂದಿಗಳು
ಆವರಿಸಿದ ಪ್ರದೇಶ ತೆರೆದ ಪ್ರದೇಶ
ಗಂಡು ಹಂದಿ 6.0-7.0 8.8-12.0 ವೈಯಕ್ತಿಕ ಮನೆ
ಫಾರೋಯಿಂಗ್ ಮನೆ (ಗಭಿ೯ಣಿ ಮನೆ) 7.0-9.0 8.8-12.0 ವೈಯಕ್ತಿಕ ಮನೆ
ಮಾಂಸಕ್ಕಾಗಿ ಕೊಬ್ಬಿಸಿದ ಹಂದಿ (3-5 ತಿಂಗಳ ವಯಸ್ಸು) 0.9-1.2 0.9-1.2 30
ಮಾಂಸಕ್ಕಾಗಿ ಕೊಬ್ಬಿಸಿದ ಹಂದಿ (ಐದು ತಿಂಗಳಿಗಿಂತ ಹೆಚ್ಚು) 1.3-1.8 1.3.1.8 30
ಹೆಣ್ಣು ಹಂದಿ/ಗಿಲ್ಟ 1.8-2.7 1.4-1.8 3-10

ಬೆಳೆಯುವ ಮತ್ತು ಮಾರಾಟಕ್ಕಿರುವ ಹಂದಿಗಳ ವಸತಿ

ಮುಂಭಾಗದಲ್ಲಿ ವಿಶ್ರಾಂತಿಗಾಗಿ ಮುಚ್ಚಿದ ಕಾಂಕ್ರೀಟ್ ಅಂಗಳದ ಜೊತೆ ಮೇವು ಮತ್ತು ನೀರಿನ ತೊಟ್ಟಿಗಳು ಹಾಗೂ ಹಿಂಭಾಗದಲ್ಲಿ ತೆರೆದ ಅಂಗಳವನ್ನು ಒದಗಿಸಬೇಕು. ಪ್ರತಿ ಬೆಳೆಯುವ/ಕೊಬ್ಬಿಸುವ(ಮಾಂಸದ) ಹಂದಿಗೆ ಒಟ್ಟು ಸ್ಥಳಾವಕಾಶ 2 ಚದರ ಮೀ. ಆಗಿರಬೇಕು.

ಹಂದಿಮರಿಗಳಿಗೆ ವಸತಿ

Responsive Image

ನೈರ್ಮಲ್ಯ ಮತ್ತು ಸ್ವಚ್ಛತೆ