ಸೆಸ್ಬೇನಿಯಾ (ಅಗಸೆ/ ಚೊಗಚೆ)
| ವೈಜ್ಞಾನಿಕ ಹೆಸರು | ಸೆಸ್ಬೇನಿಯಾ ಗ್ರಾಂಡಿಫ್ಲೋರಾ |
|---|---|
| ಪ್ರಮುಖ ಲಕ್ಷಣಗಳು | ಈ ಮರವು ಕಡಿಮೆ ಫಲವತ್ತಾದ ಮತ್ತು ಲವಣಯುಕ್ತ ಮಣ್ಣಿನಲ್ಲಿಯೂ ವರ್ಷವಿಡೀ ಬೆಳೆಯುತ್ತದೆ, ಬರ ಸಹಿಷ್ಣುವಾಗಿದೆ ಮತ್ತು ಎಲ್ಲಾ ಜಾನುವಾರುಗಳಿಗೆ ಸೂಕ್ತವಾಗಿದೆ. ಆಡು ಮತ್ತು ಕುರಿಗಳಿಗೆ ಹೆಚ್ಚು ಆದ್ಯತೆಯ ಮೇವಾಗಿದೆ. ಇದು ವೇಗವಾಗಿ ಬೆಳೆಯುತ್ತದೆ. ಇದನ್ನು ಮೇವಿನ ಕೇವಲ 8-10% ರಷ್ಟು ತಿನ್ನಿಸಬೇಕು. ಇದರ ಪ್ರೋಟೀನ್ ಅಂಶವು ಸುಮಾರು 25% ರಷ್ಟಿದೆ. |
| ವೈವಿಧ್ಯಗಳು/ ತಳಿಗಳು | ಸ್ಥಳೀಯ ಆಯ್ಕೆ. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಜೂನ್-ಆಗಸ್ಟ್‌ನಲ್ಲಿ ನೆಡುವುದು ಸೂಕ್ತವಾದರೂ, ನೀರಾವರಿ ಪರಿಸ್ಥಿತಿಗಳಲ್ಲಿ ವರ್ಷವಿಡೀ ಬೆಳೆಯುತ್ತದೆ. ಹೆಕ್ಟೇರಿಗೆ ಸುಮಾರು 7.5-8.0 ಕೆಜಿ ಬೀಜವನ್ನು 1 ಮೀ ದೂರದಲ್ಲಿ ಅಥವಾ 1 ಮೀ × 1 ಮೀ ಅಂತರದಲ್ಲಿ ನೆಡಲಾಗುತ್ತದೆ. ಇದನ್ನು ನರ್ಸರಿಯಲ್ಲಿ ಬೆಳೆದ ಸಸಿಗಳೊಂದಿಗೆ ಸಹ ಕಸಿ ಮಾಡಬಹುದು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) |
ನಾಟಿ ಮಾಡುವಾಗ 10 ಕೆಜಿ ಸಾರಜನಕ: 20 ಕೆಜಿ ರಂಜಕ: 12.5 ಕೆಜಿ ಪೊಟ್ಯಾಸಿಯಮ್ ನೀಡಬೇಕು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ 12.5 ಕೆಜಿ ರಂಜಕ ನೀಡಬೇಕು. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ ಮೊದಲು 20-25 ಟನ್. |
| ನೀರಾವರಿ | ನೆಡುವ ಸಮಯದಲ್ಲಿ ಮತ್ತು ಮಣ್ಣಿನ ತೇವಾಂಶವನ್ನು ಅವಲಂಬಿಸಿ ಪ್ರತಿ 15 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು | 5-6 ತಿಂಗಳಲ್ಲಿ ಮೊದಲ ಕಟಾವು ಮತ್ತು ತದನಂತರ 50-60 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ವಾರ್ಷಿಕವಾಗಿ 50-60 ಟನ್. |
ಸುಬಾಬುಲ್
| ವೈಜ್ಞಾನಿಕ ಹೆಸರು | ಲ್ಯುಕೇನಾ ಲ್ಯುಕೋಸೆಫಾಲಾ (ಲ್ಯಾಮ್.) ಡಿ ವಿಟ್ |
|---|---|
| ಪ್ರಮುಖ ಲಕ್ಷಣಗಳು | ಇದು ವೇಗವಾಗಿ ಹರಡುವ ಮೇವಿನ ಮರವಾಗಿದ್ದು, ಅಗಾಧವಾದ ಬೀಜಗಳನ್ನು ಉತ್ಪಾದಿಸುತ್ತದೆ. ಬರಗಾಲ ಪೀಡಿತ ಪ್ರದೇಶಗಳಲ್ಲಿ, ಕೊಯ್ಲು ಪ್ರಾರಂಭಿಸುವ ಮೊದಲು ಆಳವಾದ ಬೇರುಗಳನ್ನು ಭೇದಿಸುವುದನ್ನು ಖಚಿತಪಡಿಸಿಕೊಳ್ಳಲು ಮರವನ್ನು ಎರಡು ವರ್ಷಗಳ ಕಾಲ ಬೆಳೆಯಲು ಬಿಡಿ. ಎಲೆಗಳು ಮಿಮೋಸಿನ್ ಎಂಬ ವಿಷವನ್ನು ಹೊಂದಿರುವುದರಿಂದ, ಇದನ್ನು ಸಣ್ಣ/ ಕಡಿಮೆ ವಯಸ್ಸಿನ ಜಾನುವಾರುಗಳಿಗೆ ನೀಡುವಾಗ ಕಾಳಜಿ ವಹಿಸಬೇಕು. |
| ವೈವಿಧ್ಯಗಳು/ ತಳಿಗಳು | ಹವಾಯಿಯನ್ ಪ್ರಕಾರ (K-341), K-8 (ಸಾಲ್ವಡಾರ್ ಪ್ರಕಾರ), ಸುಬಾಬುಲ್ CO-1 (P), FD 1423. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಜೂನ್-ಆಗಸ್ಟ್‌ನಲ್ಲಿ ನಾಟಿ ಮಾಡುವುದು ಉತ್ತಮ. ರಾತ್ರಿಯಿಡೀ ಬಿಸಿ ನೀರಿನಲ್ಲಿ ನೆನೆಸಿದ ಸುಮಾರು 5-6 ಕೆಜಿ ಬೀಜಗಳು/ಹೆಕ್ಟೇರ್ ಅನ್ನು 1 ಮೀ × 1 ಮೀ ಅಂತರದಲ್ಲಿ ರೈಜೋಬಿಯಂ ಕಲ್ಚರ್ ನೊಂದಿಗೆ ನೆಡಬೇಕು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) | 25 ಕೆಜಿ N: 60 ಕೆಜಿ P: 40 ಕೆಜಿ K. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
ನಾಟಿ ಮಾಡುವ ಮೊದಲು 8-10 ಟನ್ ಮಣ್ಣಿನಲ್ಲಿ ಬೆರೆಸಬೇಕು. |
| ನೀರಾವರಿ | ಹೆಚ್ಚಾಗಿ ಮಳೆಯಾಶ್ರಿತ. ಆದರೆ ಮಣ್ಣಿನ ತೇವಾಂಶವನ್ನು ಅವಲಂಬಿಸಿ, ಪ್ರತಿ 15-20 ದಿನಗಳಿಗೊಮ್ಮೆನೀರುಣಿಸಬೇಕು. |
| ಕೊಯ್ಲು/ ಕಟಾವು ಮಾಡುವುದು |
5-6 ತಿಂಗಳುಗಳಲ್ಲಿ (90-100 ಸೆಂ.ಮೀ.) ಮೊದಲ ಕಟಾವು. ತದನಂತರ 50-60 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ಆರಂಭಿಕ ವರ್ಷದಲ್ಲಿ 12-15 ಟನ್ ಮತ್ತು ತದನಂತರ ವಾರ್ಷಿಕವಾಗಿ 40-50 ಟನ್ ಇಳುವರಿ. |
ಗ್ಲಿರಿಸಿಡಿಯಾ (ಗೊಬ್ಬರ ಗಿಡ)
| ವೈಜ್ಞಾನಿಕ ಹೆಸರು | ಗ್ಲಿರಿಸಿಡಿಯಾ ಸೆಪಿಯಂ |
|---|---|
| ಪ್ರಮುಖ ಲಕ್ಷಣಗಳು | ಇದು ಅರೆ-ಪತನಶೀಲ, ಮಸುಕಾದ ತೊಗಟೆಯನ್ನು ಹೊಂದಿರುವ ಗಿಡ/ಮರವಾಗಿದೆ. ಇದು ವ್ಯಾಪಕ ಶ್ರೇಣಿಯ ಹವಾಮಾನ ಮತ್ತು ಎಡಾಫಿಕ್ (ಭೌತಿಕ) ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತದೆ. ವಾರ್ಷಿಕವಾಗಿ 400-900 ಮಿಮೀ ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯಬಹುದು. ಇದು ಭಾರೀ ಜೇಡಿಮಣ್ಣಿನಲ್ಲಿ ಮತ್ತು ಕಲ್ಲಿನ ಸವೆತದ ಸ್ಥಳಗಳಲ್ಲಿ ಬೆಳೆಯುತ್ತದೆ. ಇದು ನೀರು ನಿಲ್ಲುವ ಪ್ರದೇಶಗಳಲ್ಲಿ ಅಸಹಿಷ್ಣುವಾಗಿರುತ್ತದೆ. ಈ ಸಸ್ಯವನ್ನು ಇಂಧನ, ಪಶು ಆಹಾರ, ಹಸಿರು ಗೊಬ್ಬರ ಇತ್ಯಾದಿಯಾಗಿ ಬಳಸಲಾಗುತ್ತದೆ. |
| ವೈವಿಧ್ಯಗಳು/ ತಳಿಗಳು |
ಸ್ಥಳೀಯ ಆಯ್ಕೆ. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಜೂನ್-ಆಗಸ್ಟ್‌ನಲ್ಲಿ ನಾಟಿ ಮಾಡುವುದು ಉತ್ತಮ. ನಾಟಿ ಮಾಡುವ ಮೊದಲು ಹೆಕ್ಟೇರ್‌ಗೆ 2 ಕೆಜಿ ಬೀಜವನ್ನು ನೀರಿನಲ್ಲಿ ನೆನೆಸಿ. ಮಳೆಗಾಲದಲ್ಲಿ 1 ಅಡಿ ಉದ್ದದ ಕಾಂಡದ ತುಂಡುಗಳನ್ನು 1 ಮೀ × 1 ಮೀ ಅಂತರದಲ್ಲಿ ನೆಡಬಹುದು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) | 30 ಕೆಜಿ ಪಿ (ರಂಜಕ): 20 ಕೆಜಿ ಕೆ (ಪೊಟ್ಯಾಶಿಯಮ್). |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
1-2 ಟನ್ |
| ನೀರಾವರಿ |
ಹೆಚ್ಚಾಗಿ ಮಳೆಯಾಶ್ರಿತ. ಮಣ್ಣಿನ ತೇವಾಂಶವನ್ನು ಅವಲಂಬಿಸಿ ಪ್ರತಿ 15-20 ದಿನಗಳಿಗೊಮ್ಮೆನೀರುಣಿಸಬಹುದು. |
| ಕೊಯ್ಲು/ ಕಟಾವು ಮಾಡುವುದು |
ಮೊದಲ ಕಟಾವು 12-18 ತಿಂಗಳುಗಳು. ತದನಂತರ 3 ತಿಂಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ಪ್ರತಿ ಮರದಿಂದ ಅದರ ವಯಸ್ಸಿಗೆ ಅನುಗುಣವಾಗಿ 20-25 ಕೆ.ಜಿ. |
ಮೊರಿಂಗಾ (ಡ್ರಮ್ ಸ್ಟಿಕ್/ ನುಗ್ಗೆ)
| ವೈಜ್ಞಾನಿಕ ಹೆಸರು | ಮೊರಿಂಗಾ ಒಲಿಫೆರಾ |
|---|---|
| ಪ್ರಮುಖ ಲಕ್ಷಣಗಳು | ಇದನ್ನು ಮುಖ್ಯವಾಗಿ ತರಕಾರಿಯಾಗಿ ಬಳಸಲಾಗುತ್ತದೆ.ಇದು ಪಶು ಆಹಾರವಾಗಿಯೂ ಸೇರಿದಂತೆ ಹಲವಾರು ಕೈಗಾರಿಕಾ, ಔಷಧೀಯ ಮತ್ತು ಕೃಷಿ ಬಳಕೆಯ ಉಪಯೋಗಗಳನ್ನು ಹೊಂದಿದೆ. ಇದು ಪೌಷ್ಟಿಕ, ವೇಗವಾಗಿ ಬೆಳೆಯುವ, ಬರ ಸಹಿಷ್ಣು ಮತ್ತು ಪಕ್ವತೆಯ ವಿವಿಧ ಹಂತಗಳಲ್ಲಿ ಒಣ ಪದಾರ್ಥದ ಆಧಾರದ ಮೇಲೆ 15-30% ವರೆಗಿನ ಪ್ರೋಟೀನ್ ಅಂಶವನ್ನು ಹೊಂದಿದೆ. |
| ವೈವಿಧ್ಯಗಳು/ ತಳಿಗಳು | ಸ್ಥಳೀಯ ಆಯ್ಕೆ |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಜೂನ್-ಆಗಸ್ಟ್‌ನಲ್ಲಿ ನೆಡುವುದು ಸೂಕ್ತ. ಸುಮಾರು 50-60 ದಿನಗಳ 250-400 ಗ್ರಾಂ/ಹೆ ಸಸಿಗಳನ್ನು 30-50 ಸೆಂ.ಮೀ ಆಳ ಮತ್ತು 20-40 ಸೆಂ.ಮೀ ಅಗಲದ ಗುಂಡಿಗಳಲ್ಲಿ ನೆಡಬೇಕು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) | 50 ಕೆಜಿ N (ಸಾರಜನಕ): 25 ಕೆಜಿ P (ರಂಜಕ). |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
18-22 ಟನ್ಗಳು |
| ನೀರಾವರಿ | ಮಣ್ಣಿನ ತೇವಾಂಶವನ್ನು ಅವಲಂಬಿಸಿ ಪ್ರತಿ 12-15 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು |
ಎಲೆಗಳಿಗಾಗಿ 5-6 ತಿಂಗಳುಗಳಲ್ಲಿ ಮತ್ತು ಬೀಜಕೋಶಗಳಿಗಾಗಿ 8-9 ತಿಂಗಳುಗಳಲ್ಲಿ ಕಟಾವು ಮಾಡಲಾಗುತ್ತದೆ. ತದನಂತರ ಪ್ರತಿ 45 ದಿನಗಳಿಗೊಮ್ಮೆ 1.5 ಮೀ ಎತ್ತರದಲ್ಲಿ ಕತ್ತರಿಸಲಾಗುತ್ತದೆ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ಎಲೆಗಳು: ವಾರ್ಷಿಕವಾಗಿ 6-8 ಟನ್ಗಳು |