ಹೈಬ್ರಿಡ್ ನೇಪಿಯರ್
| ವೈಜ್ಞಾನಿಕ ಹೆಸರು | ಪೆನ್ನಿಸೆಟಮ್ ಪರ್ಪ್ಯೂರಿಯಮ್ x ಪೆನ್ನಿಸೆಟಮ್ ಗ್ಲಾಕಮ್ |
|---|---|
| ಪ್ರಮುಖ ಲಕ್ಷಣಗಳು | ನೇಪಿಯರ್ ಹುಲ್ಲು ಮತ್ತು ಮೇವಿನ ಸಜ್ಜೆ ನಡುವಿನ ಮಿಶ್ರತಳಿಯಾದ ಇದು, 3-4 ವರ್ಷಗಳವರೆಗೆ ಮೇವನ್ನು ನೀಡುವ ಬಹು-ಕಟಾವು ಪ್ರಭೇದವಾಗಿದೆ. ಇದರ ಆಳವಾದ ಬೇರಿನ ವ್ಯವಸ್ಥೆಯು ಬರಗಾಲದಲ್ಲಿ ಬದುಕುಳಿಯಲು ಅನುವು ಮಾಡಿಕೊಡುತ್ತದೆ. ಇದನ್ನು ಹೊಲಗಳ ಕಟ್ಟೆಗಳ ಮೇಲೆ ಮತ್ತು ನೀರಿನ ಕಾಲುವೆಗಳ ಉದ್ದಕ್ಕೂ ಬೆಳೆಸಬಹುದು. ಕಚ್ಚಾ ಪ್ರೋಟೀನ್ 8-11% ವರೆಗೆ ಇರುತ್ತದೆ ಮತ್ತು ಅಪಕ್ವವಾದ ಬೆಳೆಯಲ್ಲಿ ಆಕ್ಸಲೇಟ್ಗಳು ಎಂಬ ವಿಷಕಾರಿ ಅಂಶವಿರುತ್ತದೆ. |
| ವೈವಿಧ್ಯಗಳು/ ತಳಿಗಳು | DHN-6, ಯಶವಂತ್, NB 21, Co-4, IGFRI-7, BNH-10, APBN-1.ಸೂಪರ ನೇಪಿಯರ್, ರೆಡ್ ನೇಪಿಯರ್ |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಫೆಬ್ರವರಿ ಮಧ್ಯದಿಂದ ಜುಲೈ ವರೆಗೆ ನೆಡುವುದು ಸೂಕ್ತ; ಕಣ್ಣುಗಳಿರುವ 30,000 ಕಾಂಡಗಳನ್ನು ಪ್ರತಿ ಹೆಕ್ಟೇರ್ ಗೆ 60 ಸೆಂ.ಮೀ × 60 ಸೆಂ.ಮೀ ಅಂತರದಲ್ಲಿ ನೆಡಬಹುದು. ನೀರಾವರಿ ಪರಿಸ್ಥಿತಿಗಳಲ್ಲಿ ವರ್ಷವಿಡೀ ನೆಡಬಹುದು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್ಗೆ) |
ನಾಟಿ ಮಾಡುವಾಗ 50 ಕೆಜಿ ಸಾರಜನಕ: 50 ಕೆಜಿ ರಂಜಕ: 40 ಕೆಜಿ ಪೋಟ್ಯಾಶಿಯಮ್ ನೀಡಬೇಕು. ಪ್ರತಿ ಕಟಾವಿನ ನಂತರ 50 ಕೆಜಿ ಸಾರಜನಕ. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ 20-25 ದಿನಗಳ ಮುಂಚೆ 25-30 ಟನ್. |
| ನೀರಾವರಿ | ಮಳೆಗಾಲದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮತ್ತು ಬೇಸಿಗೆಯಲ್ಲಿ ಪ್ರತಿ 7-10 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು | 60-75 ದಿನಗಳ ನಂತರ ಮೊದಲ ಕಟಾವು ಮತ್ತು ತದನಂತರ 45-60 ದಿನಗಳಿಗೊಮ್ಮೆ ಕತ್ತರಿಸುವುದು. |
| ಹಸಿರು ಮೇವಿನ ಇಳುವರಿ (ಟನ್ಗಳು/ಹೆಕ್ಟೇರ್) | 6-8 ಕಟಾವುಗಳಿಂದ ವಾರ್ಷಿಕವಾಗಿ 250-300 ಟನ್. |
ಗಿನಿ ಹುಲ್ಲು
| ವೈಜ್ಞಾನಿಕ ಹೆಸರು | ಪ್ಯಾನಿಕಮ್ ಮ್ಯಾಕ್ಸಿಮಮ್ ಜಾಕ್. |
|---|---|
| ಪ್ರಮುಖ ಲಕ್ಷಣಗಳು |
ಇದು ಎತ್ತರವಾಗಿ (1-4.5 ಮೀ), ಗಡ್ಡೆಯಾಗಿ, ವೇಗವಾಗಿ ಬೆಳೆಯುವ ಮತ್ತು ಹೆಚ್ಚು ರುಚಿಕರವಾದ ದೀರ್ಘಕಾಲಿಕ ಹುಲ್ಲು. ಬಹು-ಕಟಾವಿನ ಪ್ರಭೇದಗಳು 3-4 ವರ್ಷಗಳವರೆಗೆ ಮೇವನ್ನು ನೀಡಬಲ್ಲವು ಮತ್ತು ತೋಟಗಾರಿಕಾ ಬೆಳೆಗಳೊಂದಿಗೆ ಸಂಯೋಜಿಸಬಹುದು. ಅವು ತ್ಯಾಜ್ಯ ನೀರು ಮತ್ತು ಜೌಗು ಭೂಮಿಯಲ್ಲಿ ಬೆಳೆಯಬಹುದು. ಇವುಗಳಲ್ಲಿ ಕಚ್ಚಾ ಪ್ರೋಟೀನ್ 8-13% ರಷ್ಟಿದೆ. |
| ವೈವಿಧ್ಯಗಳು/ ತಳಿಗಳು | ಬುಂದೆಲ್ ಗಿನಿ-1, ಬುಂದೆಲ್ ಗಿನಿ –2, ಧಾರವಾಡ ಗಿನಿ ಹುಲ್ಲು-1, ರಿವರ್ಸ್ಡೇಲ್, ಹ್ಯಾಮಿಲ್. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಫೆಬ್ರವರಿ ಮಧ್ಯದಿಂದ ಜುಲೈ ವರೆಗೆ ನರ್ಸರಿ/ಕಾಂಡದ ಕತ್ತರಿಸಿದ ಭಾಗಗಳಿಂದ ಬಿತ್ತನೆ; ಹೆಕ್ಟೇರಿಗೆ 3-5 ಕೆಜಿ ಬೀಜ ಅಥವಾ 30,000 ಕತ್ತರಿಸಿದ ಕಾಂಡಗಳನ್ನು 60 × 60 ಸೆಂ.ಮೀ ಅಂತರದಲ್ಲಿ ನೆಡುವುದು ಸೂಕ್ತ. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್ಗೆ) | ನಾಟಿ ಮಾಡುವಾಗ 50 ಕೆಜಿ ಸಾರಜನಕ: 50 ಕೆಜಿ ಪೊಟ್ಯಾಸಿಯಮ್: 40 ಕೆಜಿ ಕ್ಯಾಲ್ಸಿಯಂ ಮತ್ತು ಪ್ರತಿ ಕತ್ತರಿಸಿದ ನಂತರ 50 ಕೆಜಿ ಸಾರಜನಕ. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ 30 ದಿನಗಳ ಮೊದಲು 20-25 ಟನ್. |
| ನೀರಾವರಿ | ಮಳೆಗಾಲದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮತ್ತು ಬೇಸಿಗೆಯಲ್ಲಿ ಪ್ರತಿ 7-10 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು | 70-75 ದಿನಗಳ ನಂತರ ಮೊದಲ ಕಟಾವು ಮತ್ತು ತದನಂತರ 40-45 ದಿನಗಳಿಗೊಮ್ಮೆ |
| ಹಸಿರು ಮೇವಿನ ಇಳುವರಿ (ಟನ್ಗಳು/ಹೆಕ್ಟೇರ್) | 7-8 ಕಟಾವುಗಳಿಂದ ವಾರ್ಷಿಕವಾಗಿ 180-220 ಟನ್. |
ರೋಡ್ಸ್ ಹುಲ್ಲು
| ವೈಜ್ಞಾನಿಕ ಹೆಸರು | ಕ್ಲೋರಿಸ್ ಗಯಾನಾ ಎಲ್. |
|---|---|
| ಪ್ರಮುಖ ಲಕ್ಷಣಗಳು | ಕಡಿಮೆ ನೀರನ್ನು ಬಳಸಿ, ಹುಲ್ಲು ಅಥವಾ ಹುಲ್ಲುಗಾವಲು ಆಗಿ ಬೆಳೆಸಬಹುದಾದ ಬಹು-ಕಟಾವಿನ ಮೇವಿನ ಬೆಳೆ. ಇದು ಚಿಕ್ಕದಾಗಿದ್ದಾಗ ಉತ್ತಮ ಗುಣಮಟ್ಟದ ಮೇವನ್ನು (DM ಆಧಾರದ ಮೇಲೆ 15% ಕ್ಕಿಂತ ಹೆಚ್ಚು ಪ್ರೋಟೀನ್) ಉತ್ಪಾದಿಸುತ್ತದೆ. ಇದರ ಪೌಷ್ಟಿಕಾಂಶದ ಗುಣಮಟ್ಟ (ಎಲೆಗಳಿಗೆ ಹೋಲಿಸಿದರೆ ಕಾಂಡಗಳಿಗೆ ಕಡಿಮೆ) ಪಕ್ವತೆಯೊಂದಿಗೆ ತೀವ್ರವಾಗಿ ಕಡಿಮೆಯಾಗುತ್ತದೆ. ಇದು ಲವಣಯುಕ್ತ ಮತ್ತು ಕ್ಷಾರೀಯ ಮಣ್ಣುಗಳಿಗೆ ಸೂಕ್ತವಾಗಿದೆ. |
| ವೈವಿಧ್ಯಗಳು/ ತಳಿಗಳು | ರೋಡ್ಸ್ 10. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಜೂನ್-ಜುಲೈನಲ್ಲಿ ನೆಡಲಾಗುತ್ತದೆ. ಮಳೆಯಾಶ್ರಿತ: 5 ಕೆಜಿ ಬೀಜ/ಹೆ. ನೀರಾವರಿ: 10 ಕೆಜಿ ಬೀಜ/ಹೆ. ಅಥವಾ 40,000 ಬೇರುಗಳು. ಸೂಕ್ತ ನಾಟಿ ಅಂತರ 45 × 45 ಸೆಂ.ಮೀ. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್ಗೆ) |
ನಾಟಿ ಮಾಡುವಾಗ 30 ಕೆಜಿ ಫಾಸ್ಫೇಟ್; ಮೂರು ವಾರಗಳ ನಂತರ ಮತ್ತು ಪ್ರತಿ ಕಟಾವಿನ ನಂತರ 20 ಕೆಜಿ ಸಾರಜನಕ. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ 15 ದಿನಗಳ ಮೊದಲು 10-15 ಟನ್. |
| ನೀರಾವರಿ | ಮಳೆಗಾಲದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮತ್ತು ಬೇಸಿಗೆಯಲ್ಲಿ ಪ್ರತಿ 7-10 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು | ಬೀಜ ನೆಟ್ಟಿರುವುದಾದರೆ ದಿನಗಳ ನಂತರ ಮೊದಲ ಕಟಾವು; ಮತ್ತು ಬೇರು ಕಾಂಡಗಳಿಂದ ನೆಟ್ಟಿರುವುದಾದರೆ 60 ದಿನಗಳ ನಂತರ; ತದನಂತರ 30-35 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್ಗಳು/ ಹೆಕ್ಟೇರ್) | ನೀರಾವರಿ: 7-8 ಕಟಾವುಗಳಿಂದ ವಾರ್ಷಿಕವಾಗಿ 80-120 ಟನ್. ಮಳೆಯಾಶ್ರಿತ: 40-50 ಟನ್. |
ಪ್ಯಾರಾ ಗ್ರಾಸ್
| ವೈಜ್ಞಾನಿಕ ಹೆಸರು | ಬ್ರಾಚಿಯೇರಿಯಾ ಮ್ಯೂಟಿಕಾ ಎಲ್. |
|---|---|
| ಪ್ರಮುಖ ಲಕ್ಷಣಗಳು | ಇದನ್ನು ಕಾಲೋಚಿತವಾಗಿ ಪ್ರವಾಹ ಬರುವ ಕಣಿವೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ನೀರಿನ ನಿಶ್ಚಲತೆ ಮತ್ತು ದೀರ್ಘಾವಧಿಯ ಪ್ರವಾಹವನ್ನು ತಡೆದುಕೊಳ್ಳಬಲ್ಲದು. ಇದನ್ನು ಶುಷ್ಕ ಅಥವಾ ಅರೆ-ಶುಷ್ಕ ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಇದರ ಪ್ರೋಟೀನ್ ಅಂಶವು ಒಣ ವಸ್ತುವಿನ ಆಧಾರದ ಮೇಲೆ 7-10% ರಂತೆ ಬದಲಾಗುತ್ತದೆ. |
| ವೈವಿಧ್ಯಗಳು/ ತಳಿಗಳು | ಪ್ಯಾರಾ ಹುಲ್ಲು (ಸ್ಥಳೀಯ ತಳಿ). |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಮೇ-ಜುಲೈನಲ್ಲಿ ನೆಡುವುದು ಸೂಕ್ತ. 2-3 ಗಂಟುಗಳನ್ನು ಹೊಂದಿರುವ ಬೇರು ಸಸಿಗಳನ್ನು ತೇವಾಂಶವುಳ್ಳ ಮಣ್ಣಿನಲ್ಲಿ 45-60 × 45-60 ಸೆಂ.ಮೀ ಅಂತರದಲ್ಲಿ, ಹೆಕ್ಟೇರಿಗೆ 40,000 ರಂತೆ ಬೇರು ಸಸಿಗಳನ್ನು ನೆಡಬೇಕು. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್ಗೆ) | 60 ಕೆಜಿ ಸಾರಜನಕ: 40 ಕೆಜಿ ರಂಜಕ: 40 ಕೆಜಿ ಪೊಟ್ಯಾಸಿಯಮ್ ಅನ್ನು ನಾಟಿ ಮಾಡುವಾಗ ಮತ್ತು ಮೊದಲ ಮತ್ತು ಎರಡನೇ ಕಟಾವು ಸಮಯದಲ್ಲಿ ಏಕರೂಪವಾಗಿ ಹಾಕಬೇಕು. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ 8-10 ದಿನಗಳ ಮೊದಲು 8-10 ಟನ್ |
| ನೀರಾವರಿ | ಹೆಚ್ಚಾಗಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತದೆ, ಅಗತ್ಯವಿದ್ದರೆ ಪ್ರತಿ 12-15 ದಿನಗಳಿಗೊಮ್ಮೆ ನೀರು ಹಾಕಲಾಗುತ್ತದೆ. |
| ಕೊಯ್ಲು/ ಕಟಾವು ಮಾಡುವುದು | 70-80 ದಿನಗಳ ನಂತರ ಮೊದಲ ಕಟಾವು ಮತ್ತು ತದನಂತರ 40-45 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್ಗಳು/ಹೆಕ್ಟೇರ್) | 6-8 ಕಟಾವುಗಳಿಂದ ವಾರ್ಷಿಕವಾಗಿ 80-120 ಟನ್ |
ಅಂಜನ್ ಹುಲ್ಲು (ಬಫಲ್ ಹುಲ್ಲು)
| ವೈಜ್ಞಾನಿಕ ಹೆಸರು | ಸೆಂಕ್ರಸ್ ಸಿಲಿಯಾರಿಸ್ ಎಲ್. |
|---|---|
| ಪ್ರಮುಖ ಲಕ್ಷಣಗಳು | ಬರ ಸಹಿಷ್ಣು ಮತ್ತು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ದೀರ್ಘಕಾಲಿಕ ಹುಲ್ಲು. ಇದು ಹಗುರವಾದ ರಚನೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬರಿದಾದ ಮತ್ತು ಕಡಿಮೆ pH ಹೊಂದಿರುವ ಮಣ್ಣಿನಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಮಳೆಯಾಶ್ರಿತ ಪರಿಸ್ಥಿತಿಗಳಲ್ಲಿ ಇದು ಹೆಚ್ಚು ಸೂಕ್ತವಾಗಿದೆ. ವಾರ್ಷಿಕ ಮತ್ತು ದೀರ್ಘಕಾಲಿಕ ಅಂಜನ್ ಹುಲ್ಲು ಘನ ಕಾಂಡಗಳು ಮತ್ತು ನಾರಿನ ಬೇರುಗಳು ಎರಡನ್ನೂ ಹೊಂದಿರುತ್ತವೆ. |
| ವೈವಿಧ್ಯಗಳು/ ತಳಿಗಳು | ಬುಂದೇಲ್ ಅಂಜನ್ 1, ಬುಂದೇಲ್ ಅಂಜನ್ 3, ಕೋ-1, ಮಾರ್ವಾರ್ ಅಂಜನ್. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಮಳೆಗಾಲದಲ್ಲಿ ಪ್ರತಿ ಹೆಕ್ಟೇರ್ಗೆ 6-8 ಕೆಜಿ ಬೀಜದ ದರದಲ್ಲಿ ನಾಟಿ ಮಾಡುವುದು ಉತ್ತಮ. ಬೀಜಗಳು 6-18 ತಿಂಗಳುಗಳಷ್ಟು ಹಳೆಯದಾಗಿರಬೇಕು. ಏಕೆಂದರೆ ತಾಜಾ ಬೀಜಗಳು (0-6 ತಿಂಗಳುಗಳು) ಹೆಚ್ಚಾಗಿ ಸುಪ್ತ (ಡಾಮ೯0ಟ್) ಆಗಿರುತ್ತವೆ. 6-7 ವಾರಗಳ ಸಸಿಗಳನ್ನು ತುಂತುರು ಮಳೆ ಬಂದಾಗ, 45-60 × 45-60 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬಹುದು. ಪ್ರತಿ ಹೆಕ್ಟೇರ್ಗೆ ಸುಮಾರು 30,000-40,000 ಸಸಿಗಳು ಬೇಕಾಗುತ್ತವೆ. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್ಗೆ) |
ಆರಂಭಿಕವಾಗಿ 40 ಕೆಜಿ ಸಾರಜನಕ ಮತ್ತು 20 ಕೆಜಿ ರಂಜಕವನ್ನು ಮಣ್ಣಿನಲ್ಲಿ ಪ್ರಾಥಮಿಕ ಡೋಸ್ ಆಗಿ ಬೆರೆಸಿ. ಒಂದು ತಿಂಗಳ ಬೆಳೆಗೆ 20 ಕೆಜಿ ಸಾರಜನಕವನ್ನು ಹಾಕಿ. ನಂತರದ ವರ್ಷಗಳಲ್ಲಿ, ಮಳೆಗಾಲದ ಆರಂಭದಲ್ಲಿ 40 ಕೆಜಿ ಸಾರಜನಕ ಮತ್ತು 20 ಕೆಜಿ ರಂಜಕವನ್ನು ಗೊಬ್ಬರವಾಗಿ ನೀಡಬೇಕು. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ ಮೊದಲು 5 ಟನ್ ಮಣ್ಣಿನಲ್ಲಿ ಬೆರೆಸಿ ಹಾಕಿ. |
| ನೀರಾವರಿ | ಹೆಚ್ಚಾಗಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತದೆ. ಅಗತ್ಯವಿದ್ದರೆ ಪ್ರತಿ 12-15 ದಿನಗಳಿಗೊಮ್ಮೆ ನೀರುಹಾಕುವುದು ಅಗತ್ಯವಾಗಿರುತ್ತದೆ. |
| ಕೊಯ್ಲು/ ಕಟಾವು ಮಾಡುವುದು |
ನಾಟಿ ಮಾಡಿದ 70-75 ದಿನಗಳ ನಂತರ ಮೊದಲ ಕೊಯ್ಲು. ತದನಂತರ 50-60 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್ಗಳು/ಹೆಕ್ಟೇರ್) | ಬೆಳವಣಿಗೆಯನ್ನು ಅವಲಂಬಿಸಿ ವರ್ಷಕ್ಕೆ 3-4 ಕಟಾವುಗಳಲ್ಲಿ 30-40 ಟನ್. |