ಮೆಕ್ಕೆ ಜೋಳ
| ವೈಜ್ಞಾನಿಕ ಹೆಸರು | ಜಿಯಾ ಮೇಸ್ ಎಲ್. |
|---|---|
| ಪ್ರಮುಖ ಲಕ್ಷಣಗಳು | ಇತರ ಬೆಳೆಗಳೊಂದಿಗೆ ಸಂಯೋಜಿಸಲು ಸೂಕ್ತವಾದ ಈ ಅಲ್ಪಾವಧಿಯ ಬೆಳೆಯನ್ನು ಹಿಂಗಾರು ಮತ್ತು ಮುಂಗಾರು (ಖರಿಫ್, ರಬಿ ಮತ್ತು ಝೈದ್) ಸಮಯದಲ್ಲಿ ಬೆಳೆಯಬಹುದು. ಹೆಚ್ಚಿನ ಇಳುವರಿ ಮತ್ತು ಪ್ರೋಟೀನ್ ಅಂಶಕ್ಕಾಗಿ ಹಾಲ್ಗಾಳು ಹಂತಕ್ಕೆ ಆದ್ಯತೆ ನೀಡಲಾಗುತ್ತದೆ. |
| ವೈವಿಧ್ಯಗಳು/ ತಳಿಗಳು | ಆಫ್ರಿಕನ್ ಟಾಲ್, APFM-8, ಪ್ರತಾಪ್ ಮಕ್ಕಾ ಚಾರಿ 6, ಗಂಗಾ-4, J-1006. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಇದನ್ನು ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಅಥವಾ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ, 40-50 ಕೆಜಿ ಬೀಜ/ಹೆಕ್ಟೇರಿಗೆ 5 ಸೆಂ.ಮೀ ಆಳದಲ್ಲಿ 60 ಸೆಂ.ಮೀ ಸಾಲಿನಿಂದ ಸಾಲು ಅಂತರ ಮತ್ತು ಬೆಳೆಗಳ ನಡುವೆ 10 ಸೆಂ.ಮೀ ಅಂತರದಲ್ಲಿ ನೆಡುವುದು ಸೂಕ್ತ. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) | 15-30 ಕೆಜಿ ಸಾರಜನಕ (N): 40-60 ಕೆಜಿ ರಂಜಕ (P): ನಾಟಿ ಮಾಡುವ ಮೊದಲು 40 ಕೆಜಿ ಪೊಟ್ಯಾಸಿಯಮ್ (K) ಮತ್ತು 20 ಕೆಜಿ ಸತು ಸಲ್ಫೇಟ್ ಮತ್ತು ಬೆಳೆಯು 50-60 ಸೆಂ.ಮೀ ಎತ್ತರಕ್ಕೆ ಬಂದಾಗ 60-90 ಕೆಜಿ ಸಾರಜನಕ. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) | ನಾಟಿ ಮಾಡುವ ಒಂದು ತಿಂಗಳ ಮೊದಲು 15.0 ಟನ್ ಹಾಕುವುದು |
| ನೀರಾವರಿ | ಮಳೆಗಾಲದಲ್ಲಿ ಪ್ರತಿ 15-20 ದಿನಗಳಿಗೊಮ್ಮೆ ಮತ್ತು ಬೇಸಿಗೆಯಲ್ಲಿ ಪ್ರತಿ 10-12 ದಿನಗಳಿಗೊಮ್ಮೆ. |
| ಕೊಯ್ಲು/ ಕಟಾವು ಮಾಡುವುದು | ಹಾಲಿನ ಹಂತ (60-75 ದಿನಗಳು); ಸೈಲೇಜ್ ತಯಾರಿಕೆಗೆ ಇನ್ನೂ 10 ದಿನಗಳು ಹೆಚ್ಚು ಬೇಕು. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ನೀರಾವರಿ: 40-50 ಟನ್; ಮಳೆಯಾಶ್ರಿತ: 30-40 ಟನ್. |
ಮೇವಿನ ಜೋಳ
| ವೈಜ್ಞಾನಿಕ ಹೆಸರು | ಸೋರ್ಗಮ್ ಬೈಕಲರ್ (ಎಲ್.) ಮೊಯೆಂಚ್ |
|---|---|
| ಪ್ರಮುಖ ಲಕ್ಷಣಗಳು | ಇದು ಬರ ನಿರೋಧಕವಾಗಿದ್ದು, ಕಡಿಮೆ ಫಲವತ್ತಾದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಲ್ಲದು; ತ್ವರಿತ ಬೆಳವಣಿಗೆ, ಹೆಚ್ಚಿನ ಸಂಗ್ರಹಣೆ ಮತ್ತು ಒಣ ಪದಾರ್ಥದ ಅಂಶವನ್ನು ಹೊದಿದೆ; ಬೆಳೆಯು 45-50 ದಿನಗಳವರೆಗೆ ವಿಷಕಾರಿ ಹೈಡ್ರೋಜನ್ ಸೈನೈಡ್ (HCN) ಅನ್ನು ಹೊಂದಿರುತ್ತದೆ. |
| ವೈವಿಧ್ಯಗಳು/ ತಳಿಗಳು |
ಒಂದು/ಏಕ ಕಟಾವು: ಪುಸಾ ಚಾರಿ-1, ಪುಸಾ ಚಾರಿ-6, ಎಂಪಿ ಚಾರಿ, ಯುಪಿ ಚಾರಿ-1. ಬಹು ಕಟಾವು: CoFS 29, CoFS 31, ಪುಸಾ ಚಾರಿ-615. ಡ್ಯುಯಲ್ ಪರ್ಪಸ್: SPV 669, K-11; SSG 988, CSH 24 MF. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಇದನ್ನು ಮಾರ್ಚ್ ಅಥವಾ ಜುಲೈನಲ್ಲಿ ನೆಡಲಾಗುತ್ತದೆ, ಒಂದು/ಏಕ ಕಟಾವು ಬೆಳೆಗಳಿಗೆ ಹೆಕ್ಟೇರಿಗೆ 10 ಕೆಜಿ ಬೀಜ ಮತ್ತು ಬಹು ಕಟಾವು ಬೆಳೆಗಳಿಗೆ ಹೆಕ್ಟೇರಿಗೆ 10-15 ಕೆಜಿ ಬೀಜ |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) |
ಏಕ ಕಟಾವು: 80 ಕೆಜಿ ಸಾರಜನಕ ಮತ್ತು 40 ಕೆಜಿ ರಂಜಕ ಬಹು ಕಟಾವು: ಬಿತ್ತನೆ ಸಮಯದಲ್ಲಿ 100 ಕೆಜಿ ಸಾರಜನಕ: 60 ಕೆಜಿ ರಂಜಕ ಮತ್ತು 30 ದಿನಗಳ ನಂತರ ಪುನರಾವರ್ತಿಸಿ.; ಪ್ರತಿ ಕಟಾವಿನ ನಂತರ 50 ಕೆಜಿ ಸಾರಜನಕ. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
ನೀರಾವರಿ: 25.0 ಟನ್; ಮಳೆಯಾಶ್ರಿತ: ನಾಟಿ ಮಾಡುವ 20-25 ದಿನಗಳ ಮೊದಲು 10 ಟನ್. |
| ನೀರಾವರಿ |
ಮಳೆಗಾಲದಲ್ಲಿ ಪ್ರತಿ 25-30 ದಿನಗಳಿಗೊಮ್ಮೆ ಮತ್ತು ಬೇಸಿಗೆಯಲ್ಲಿ ಪ್ರತಿ 10-15 ದಿನಗಳಿಗೊಮ್ಮೆ; ಉತ್ತಮ ಮಳೆಯ ಸಂದರ್ಭದಲ್ಲಿ ಅಗತ್ಯವಿಲ್ಲ. |
| ಕೊಯ್ಲು/ ಕಟಾವು ಮಾಡುವುದು |
ಏಕ ಕಟಾವು: ಹೂಬಿಡುವ ಹಂತ (60-75 ದಿನಗಳು); ಬಹು ಕಟಾವು: 50-55 ದಿನಗಳ ನಂತರ ಮೊದಲ ಕಟಾವು ಮತ್ತು ತದನಂತರ 40-45 ದಿನಗಳಿಗೊಮ್ಮೆ |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) |
ಏಕ ಕಟಾವು: 35-40 ಟನ್; ಬಹು ಕಟಾವು: 100-150 ಟನ್; |
ಸಜ್ಜೆ
| ವೈಜ್ಞಾನಿಕ ಹೆಸರು | ಪೆನ್ನಿಸೆಟಮ್ ಗ್ಲಾಕಮ್ ಎಲ್. |
|---|---|
| ಪ್ರಮುಖ ಲಕ್ಷಣಗಳು | ಕಡಿಮೆ ಫಲವತ್ತಾದ ಮತ್ತು ನೀರಿನ ಕೊರತೆಯಿರುವ ಮಣ್ಣಿನಲ್ಲಿ ಬೆಳೆಯುತ್ತದೆ, ಹೆಚ್ಚು ಬರ ಸಹಿಷ್ಣುವಾಗಿರುತ್ತದೆ. ಸುಮಾರು 25-75 ಸೆಂ.ಮೀ ಮಳೆಯಾಗುವ ಪ್ರದೇಶಗಳಲ್ಲಿಯೂ ಸಹ ಖಚಿತವಾಗಿ ಬೆಳೆಯುತ್ತದೆ. |
| ವೈವಿಧ್ಯಗಳು/ ತಳಿಗಳು | ಅವಿಕಾ ಬಾಜ್ರಾ ಚಾರಿ (AVKB - 19), ಜೈಂಟ್ ಬಾಜ್ರಾ, CO-8, ಬೈಫ್ ಬಾಜ್ರಾ -1. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) |
ಮಳೆಯಾಶ್ರಿತ ಪ್ರದೇಶಗಳಲ್ಲಿ ಮಾನ್ಸೂನ್ ಆರಂಭದೊಂದಿಗೆ ಮಾರ್ಚ್-ಏಪ್ರಿಲ್/ಜುಲೈ/ಅಕ್ಟೋಬರ್-ನವೆಂಬರ್; 6-8 ಕೆಜಿ ಬೀಜ/ಹೆಕ್ಟೇರ್‌ಗೆ ಬೇಕಾಗುವುದು; ಸಾಲುಗಳ ನಡುವೆ 30-45 ಸೆಂ.ಮೀ ಅಂತರ. |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) |
ನೀರಾವರಿ: 100 ಕೆಜಿ ಸಾರಜನಕ: 60 ಕೆಜಿ ರಂಜಕ: 40 ಕೆಜಿ ಪೋಟ್ಯಾಶಿಯಮ್; ಮಳೆಯಾಶ್ರಿತ: 60 ಕೆಜಿ ಸಾರಜನಕ: 40 ಕೆಜಿ ರಂಜಕ: 20 ಕೆಜಿ ಪೋಟ್ಯಾಶಿಯಮ್; |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
ನೀರಾವರಿ: 10-12 ಟನ್ ಮಳೆಯಾಶ್ರಿತ: 5-6 ಟನ್. ನಾಟಿ ಮಾಡುವ 15-21 ದಿನಗಳ ಮೊದಲು |
| ನೀರಾವರಿ | ನೀರಾವರಿ ಪರಿಸ್ಥಿತಿಗಳಲ್ಲಿ ಪ್ರತಿ 8-12 ದಿನಗಳಿಗೊಮ್ಮೆ ; ಉತ್ತಮ ಮಳೆಯಾಗುವ ಸಂದರ್ಭಗಳಲ್ಲಿ ಮಳೆ ಆಧಾರಿತ. |
| ಕೊಯ್ಲು/ ಕಟಾವು ಮಾಡುವುದು |
ಏಕ ಕಟಾವು: 50-60 ದಿನಗಳು. ಬಹು ಕಟಾವು: 40-45 ದಿನಗಳಲ್ಲಿ ಮೊದಲ ಕಟಾವು ಮತ್ತು ತದನಂತರ 30 ದಿನಗಳಿಗೊಮ್ಮೆ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) |
ನೀರಾವರಿ: 35-40 ಟನ್. ಮಳೆಯಾಶ್ರಿತ: 25-30 ಟನ್. |
ಓಟ್
| ವೈಜ್ಞಾನಿಕ ಹೆಸರು | ಅವೆನಾ ಸಟಿವಾ ಎಲ್. |
|---|---|
| ಪ್ರಮುಖ ಲಕ್ಷಣಗಳು | ಹಿಂಗಾರುವಿನ (ರಬಿ ಋತು) ಪ್ರಮುಖ ಏಕದಳ ಮೇವಿನ ಬೆಳೆಯಾಗಿದ್ದು, ಮೃದು ಮತ್ತು ರುಚಿಕರವಾಗಿದೆ. ಈ ಮೇವು ಸಮೃದ್ಧವಾಗಿರುವ ಕಚ್ಚಾ ಪ್ರೋಟೀನ್ (10-12%) ಹೊಂದಿದೆ. ಹೆಚ್ಚಿನ ಕೊಬ್ಬು, ಪ್ರೋಟೀನ್ ಮತ್ತು ಖನಿಜಯುಕ್ತ ಅಂಶ ಹೊಂದಿರುವುದರಿಂದ ಇದು ಕುದುರೆ, ಕುರಿ ಮತ್ತು ಕೋಳಿಗಳಿಗೆ ಉತ್ತಮ ಮೇವಾಗಿದೆ. |
| ವೈವಿಧ್ಯಗಳು/ ತಳಿಗಳು |
ಏಕ ಕಟಾವು: HFO-114, JHO-2001-3, JHO-2000-4, OS-377. ಡಬಲ್ ಕಟ್: JHO-851, JHO-822, HO-8, UPO-212, UPO-94, RO-19. |
| ಯಾವಾಗ ಮತ್ತು ಹೇಗೆ ನೆಡಬೇಕು (ಬಿತ್ತನೆ) | ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ 80-100 ಕೆಜಿ ಬೀಜ/ ಹೆಕ್ಟೇರ್‌ನಂತೆ 20-30 ಸೆಂ.ಮೀ ಸಾಲು ಅಂತರದಲ್ಲಿ |
| ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) |
ಏಕ ಕಟಾವು: 80 ಕೆಜಿ ಸಾರಜನಕ: 60 ಕೆಜಿ ರಂಜಕ: 40 ಕೆಜಿ ಪೋಟ್ಯಾಶಿಯಮ್; ಡಬಲ್ ಕಟ್: 120 ಕೆಜಿ ಸಾರಜನಕ: 40 ಕೆಜಿ ಪೋಟ್ಯಾಶಿಯಮ್; ಡಬಲ್ ಕಟ್ ಪ್ರಭೇದಗಳಲ್ಲಿ ಪ್ರತಿ ಕಟಾವಿನ ನಂತರ 40 ಕೆಜಿ ಸಾರಜನಕ ನೀಡಬೇಕು. |
| ಕೊಟ್ಟಿಗೆ ಗೊಬ್ಬರ (ಟನ್/ಹೆ) |
ನಾಟಿ ಮಾಡುವ 10-15 ದಿನಗಳ ಮುಂಚೆ 12-15 ಟನ್. |
| ನೀರಾವರಿ |
ಮಣ್ಣಿನ ಪ್ರಕಾರವನ್ನು ಅವಲಂಬಿಸಿ ನಾಟಿ ಮಾಡುವ ಮೊದಲಿನ ನೀರಾವರಿ ಸೇರಿದಂತೆ 3-5 ಬಾರಿ ನೀರುಣಿಸಬೇಕು. ಮಣ್ಣು ಒಣಗಿದ್ದರೆ, ಬೀಜದ ಮಡಿಯನ್ನು ಸಿದ್ಧಪಡಿಸುವ ಮೊದಲು ಮೊದಲ ನೀರಾವರಿ ನೀಡಲಾಗುತ್ತದೆ. ನಾಟಿ ಮಾಡಿದ 20-25 ದಿನಗಳ ನಂತರ ಮುಂದಿನ ನೀರಾವರಿ ಮಾಡಬಹುದು. |
| ಕೊಯ್ಲು/ ಕಟಾವು ಮಾಡುವುದು |
ಏಕ ಕಟಾವು ಪ್ರಭೇದಗಳು: 50% ಹೂಬಿಡುವಿಕೆಯೊಂದಿಗೆ ಡಬಲ್ ಕಟ್ ಪ್ರಭೇದಗಳು: ಮೊದಲ ಕಟಾವು 60-70 ದಿನಗಳಲ್ಲಿ; ತದನಂತರ 40-45 ದಿನಗಳಿಗೊಮ್ಮೆ. ಒಳ್ಳೆಯ ಮರು-ಬೆಳವಣಿಗೆಗಾಗಿ ಸಸ್ಯವು 10-12 ಸೆಂ.ಮೀ ಎತ್ತರವಾದಾಗ ಮೊದಲ ಕಟಾವು ಮಾಡುವುದು ಉತ್ತಮ. |
| ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) | ಏಕ ಕಟಾವು: 30-45 ಟನ್ ಡಬಲ್ ಕಟ್: 40-55 ಟನ್. |