Responsive Image

ಇನ್ನೀತರ ಮೇವಿನ ಮೂಲಗಳು

ಹೊಲ ಗದ್ದೆಗಳು ಮತ್ತು ಅವನತಿ ಹೊಂದಿದ ಭೂಮಿಯ ಮೇಲಿನ ಮೇವಿನ ಮೂಲಗಳು :

Responsive Image

ಅಕೇಶಿಯ (ಬಬೂಲ್/ಜಾಲಿ)

ವೈಜ್ಞಾನಿಕ ಹೆಸರು ಅಕೇಶಿಯ ನಿಲೋಟಿಕಾ
ಇತರ ಹೆಸರುಗಳು ಮುಳ್ಳಿನ ಅಕೇಶಿಯ, ಅರೇಬಿಕಾ ಗಮ್ ಮರ
ಪ್ರಮುಖ ಲಕ್ಷಣಗಳು ಇದು ಮಧ್ಯಮ ಗಾತ್ರದ, ಮುಳ್ಳುಗಳಿಂದ ಕೂಡಿದ, ಬಹುತೇಕ ನಿತ್ಯಹರಿದ್ವರ್ಣ ಮರವಾಗಿದ್ದು, ಮೇವಿನ ಕೊರತೆಯ ಅವಧಿಯಲ್ಲಿ ಒಣ ಪ್ರದೇಶಗಳಲ್ಲಿ ಉಪಯುಕ್ತ ಮೇವಿನ ಮೂಲವಾಗಿದೆ. ಕಳಪೆ ಬೆಳವಣಿಗೆಯ ಪರಿಸ್ಥಿತಿಗಳಲ್ಲಿ ಇದು ಪೊದೆಯಾಗಿ ಉಳಿಯಬಹುದು. ಇದರ ಎಲೆಗಳು ಮತ್ತು ಬೀಜಗಳನ್ನು ವಿವಿಧ ರೀತಿಯ ಜಾನುವಾರುಗಳು ವಿಭಿನ್ನ ಅವಧಿಗಳಲ್ಲಿ ಬಳಸುತ್ತವೆ. ಈ ಮರಗಳು ಕೃಷಿ ಅರಣ್ಯ ವ್ಯವಸ್ಥೆಗಳಲ್ಲಿ ಹೆಚ್ಚು ಸೂಕ್ತವಾಗಿವೆ. ಎಲೆಗಳ ಕಚ್ಚಾ ಪ್ರೋಟೀನ್ ಅಂಶವು 14-20% ಮತ್ತು ಹೆಚ್ಚು ರುಚಿಕರವಾದ ಬೀಜಗಳಿಗೆ 11-16%. ಇದರ ಬೀಜಕೋಶಗಳು, ಕೋಸುಗಳು ಮತ್ತು ಚಿಗುರುಗಳು ಮೇಕೆಗಳು ಮತ್ತು ಕುರಿಗಳ ಮುಖ್ಯ ಆಹಾರವಾಗಿವೆ. ಹಾಗೆಯೇ, ಇದರ ಬೀಜಗಳು ಅಮೂಲ್ಯವಾದ ಜಾನುವಾರು ಆಹಾರವಾಗಿದೆ.
ಯಾವಾಗ ಮತ್ತು ಹೇಗೆ ನೆಡಬೇಕು ಇದು ಜಾನುವಾರುಗಳ ಹಿಕ್ಕೆಗಳ ಮೂಲಕ ಹರಡುತ್ತದೆ ಅಥವಾ ನೇರ ಬಿತ್ತನೆಯನ್ನೂ ಮಾಡಬಹುದು. 5 ಮೀ ದೂರದಲ್ಲಿ ಬದುಗಳು ಮತ್ತು ಹೊಲಗಳಲ್ಲಿ 4-6 ಕೆಜಿ ಬೀಜ/ಹೆಕ್ಟೇರ್‌ನಲ್ಲಿ ನಾಟಿ ಮಾಡಬಹುದು. ಉತ್ತಮ ಮೊಳಕೆಯೊಡೆಯಲು, ನಾಟಿ ಮಾಡುವ 48 ಗಂಟೆಗಳಿಗಿಂತ ಮೊದಲು ಬೀಜಗಳನ್ನು ನೀರಿನಲ್ಲಿ ನೆನೆಸಿಡಿ.
ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) 50 ಕೆಜಿ P (ರಂಜಕ) ಮತ್ತು 25 ಕೆಜಿ K (ಪೊಟ್ಯಾಶಿಯಮ್)‌ ಅನ್ನು ಮೂಲ ಪ್ರಮಾಣದಲ್ಲಿ ನೀಡಬೇಕು.
ಕೊಟ್ಟಿಗೆ ಗೊಬ್ಬರ
(ಟನ್/ಹೆ)
ಸ್ಪಾಟ್ ಅಪ್ಲಿಕೇಶನ್ ಆಗಿ 2-3 ಟನ್.
ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) ಈ ಮರಗಳು 4-6 ವರ್ಷಗಳಲ್ಲಿ ಕಟಾವಿಗೆ ಬರುತ್ತವೆ. ವರ್ಷಕ್ಕೆ 15-18 ಕೆಜಿ ಬೀಜಕೋಶ (ಪಾಡ್‌) ಗಳನ್ನು ನೀಡುತ್ತವೆ. ಎಲೆಗಳ ಇಳುವರಿ ವರ್ಷಕ್ಕೆ ೦.2-2.೦ ಟನ್/ಹೆ ಇದೆ.
Responsive Image

ಮೆಲಿಯಾ ಅಜಾಡಿರಕ್ಟಾ (ಬೇವು)

ವೈಜ್ಞಾನಿಕ ಹೆಸರು ಮೆಲಿಯಾ ಅಜಾಡಿರಕ್ಟಾ (ಮೆಲಿಯಾ ಅಜೆಡಾರಾಚ್) ಎಲ್.
ಇತರ ಹೆಸರುಗಳು ಮಣಿ ಮರ, ಭಾರತದ ಹೆಮ್ಮೆ, ಮಹಾ ಬೇವು, ಬೇವು
ಪ್ರಮುಖ ಲಕ್ಷಣಗಳು ಮೆಲಿಯಾ ಭಾರತಕ್ಕೆ ಸ್ಥಳೀಯವಾಗಿ ಹೆಚ್ಚು ಹೊಂದಿಕೊಳ್ಳುವ ಮರವಾಗಿದ್ದು, ಇದರ ಎಲೆಗಳನ್ನು ಮೇವಿಗಾಗಿ ಕತ್ತರಿಸಲಾಗುತ್ತದೆ ಮತ್ತು ಹೆಚ್ಚು ಪೌಷ್ಟಿಕವಾಗಿದೆ. ಇದು ವೇಗವಾಗಿ ಬೆಳೆಯುವ, ಪತನಶೀಲ ಮರವಾಗಿದ್ದು, ಸುಮಾರು 10-45 ಮೀ ಎತ್ತರವನ್ನು ತಲುಪಬಹುದು. ಇದು ಬರಿದುಹೋದ ಮಣ್ಣಿನಲ್ಲಿ ಮತ್ತು ಬಿಸಿಯಾದ ಒಣ ಪರಿಸ್ಥಿತಿಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಆಳವಿಲ್ಲದ ಮಣ್ಣು, ಲವಣಯುಕ್ತ, ಕ್ಷಾರೀಯ ಮಣ್ಣು ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಕಳಪೆ ಬೆಳವಣಿಗೆಯ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತದೆ. ಮೇಲಿನ ಭಾಗದ ಕಚ್ಚಾ ಪ್ರೋಟೀನ್ ಮತ್ತು ಕಚ್ಚಾ ನಾರಿನ ಅಂಶವು ಕ್ರಮವಾಗಿ 14-20% ಮತ್ತು 12-14% ಇದೆ.
ಯಾವಾಗ ಮತ್ತು ಹೇಗೆ ನೆಡಬೇಕು 5 ಮೀ ದೂರದಲ್ಲಿ ಬದುಗಳು ಮತ್ತು ಹೊಲಗಳಲ್ಲಿ 3-5 ಕೆಜಿ ಬೀಜ/ಹೆಕ್ಟೇರ್‌ನಂತೆ ನಾಟಿ ಮಾಡಬಹುದು.
ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) 20 ಕೆಜಿ N (ಸಾರಜನಕ): 40 ಕೆಜಿ P (ರಂಜಕ) : 20 ಕೆಜಿ K (ಪೊಟ್ಯಾಶಿಯಮ್)‌ ಅನ್ನು ಸ್ಪಾಟಗಳ ಮೇಲೆ ಹಾಕಲಾಗುತ್ತದೆ.
ಕೊಟ್ಟಿಗೆ ಗೊಬ್ಬರ
(ಟನ್/ಹೆ)
1-2 ಟನ್ ಸ್ಪಾಟ್ ಅಪ್ಲಿಕೇಶನ್.
ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) ಮರಗಳು 5-6 ವರ್ಷ ವಯಸ್ಸಾದಾಗ ಹೂ ಬಿಡಲು ಪ್ರಾರಂಭಿಸುತ್ತವೆ. ಒಂದು ಪ್ರೌಢ ಮರವು ವಾರ್ಷಿಕವಾಗಿ ಸುಮಾರು 300-500 ಕೆಜಿ ಎಲೆಗಳನ್ನು ಉತ್ಪಾದಿಸುತ್ತದೆ.
Responsive Image

ಮುಳ್ಳುರಹಿತ ಪಾಪಸ ಕಳ್ಳಿ (ಕ್ಯಾಕ್ಟಸ್)

ವೈಜ್ಞಾನಿಕ ಹೆಸರು ಒಪುನ್ಷಿಯಾ ಫಿಕಸ್-ಇಂಡಿಕಾ
ಪ್ರಮುಖ ಲಕ್ಷಣಗಳು ಸಾಮಾನ್ಯವಾಗಿ ಮುಳ್ಳು ಪೇರಳೆ ಎಂದು ಕರೆಯಲ್ಪಡುವ ಇದು ಭಾರತದ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ, ತೀವ್ರವಾಗಿ ಕ್ಷೀಣಿಸಿದ ಮಣ್ಣಿನಲ್ಲಿ ಮತ್ತು ತೀವ್ರ ಶುಷ್ಕ ಪರಿಸ್ಥಿತಿಗಳಲ್ಲಿ ಬದುಕುಳಿಯುತ್ತದೆ ಮತ್ತು ಚೆನ್ನಾಗಿ ಹರಡುತ್ತದೆ. ಇದು ಯಾವುದೇ ಸಾಂಪ್ರದಾಯಿಕ ಮೇವು ಬೆಳೆಯಿಂದ ಉತ್ತಮ ನೀರಿನ ಬಳಕೆಯ ದಕ್ಷತೆ (267 ಕೆಜಿ ನೀರು/ಕೆಜಿ ಒಣ ವಸ್ತು) ಮತ್ತು ಮಳೆ ಬಳಕೆ ದಕ್ಷತೆ (40 ಕೆಜಿ DM/ಮಿಮೀ/ವರ್ಷ) ಹೊಂದಿರುತ್ತದೆ.

ಸಸ್ಯದ ಭಾಗಗಳನ್ನು ಮಾನವ ಬಳಕೆಗಾಗಿ ಹಣ್ಣು ಮತ್ತು ತರಕಾರಿಯಾಗಿ, ಜಾನುವಾರುಗಳಿಗೆ ಮೇವಾಗಿ ಮತ್ತು ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿ ಬಳಸಬಹುದು. ಕ್ಯಾಕ್ಟಿ ಕ್ಲಾಡೋಡ್‌ಗಳ ಪೌಷ್ಟಿಕಾಂಶದ ಗುಣಮಟ್ಟವು ಸಸ್ಯಗಳ ಪ್ರಕಾರ (ಜಾತಿಗಳು, ಪ್ರಭೇದಗಳು), ಕ್ಲಾಡೋಡ್ ವಯಸ್ಸು, ಕೃಷಿ ಪರಿಸ್ಥಿತಿಗಳು (ಮಣ್ಣಿನ ಪ್ರಕಾರ, ಹವಾಮಾನ ಮತ್ತು ಬೆಳೆಯುವ ಪರಿಸ್ಥಿತಿಗಳು) ಇತ್ಯಾದಿಗಳ ಮೇಲೆ ಅವಲಂಬಿಸಿರುತ್ತದೆ. ಕ್ಲಾಡೋಡ್‌ಗಳು ಪೋಷಕಾಂಶದ ದೃಷ್ಟಿಯಿಂದ ಅಸಮತೋಲಿತ ಆಹಾರವಾಗಿರುವುದರಿಂದ, ಕ್ಯಾಕ್ಟಸ್ ಹೊಂದಿರುವ ಆಹಾರಗಳಿಗೆ ಸೂಕ್ತವಾದ ಅಂಶವನ್ನು ಪೂರಕವಾಗಿ ನೀಡಿ ಸಮತೋಲನಗೊಳಿಸಬೇಕು. ಇದು ತಾಜಾ ತೂಕದ ಆಧಾರದ ಮೇಲೆ 90% ನೀರು, 5-12% ಕಚ್ಚಾ ಪ್ರೋಟೀನ್ ಮತ್ತು ಸುಮಾರು 10% ಒಣ ತೂಕದ ನಾರಿನಿಂದ ಕೂಡಿದೆ. ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊಂದಿರುವುದರಿಂದ (ತಾಜಾವಾಗಿದ್ದಾಗ 95% ವರೆಗೆ), ಜಾನುವಾರುಗಳಿಗೆ ನೀರಿನ ಅಗತ್ಯವನ್ನು 40-100% ರಷ್ಟು ಕಡಿಮೆ ಮಾಡಬಹುದು. ಹಸು/ಎಮ್ಮೆಗಳು ದಿನಕ್ಕೆ 50-70 ಕೆಜಿ ತಾಜಾ ಕ್ಲಾಡೋಡ್‌ಗಳನ್ನು ಸೇವಿಸಿದರೆ, ಮೇಕೆ ಮತ್ತು ಕುರಿಗಳು ದಿನಕ್ಕೆ 6-8 ಕೆಜಿ ತಾಜಾ ಕ್ಲಾಡೋಡ್‌ಗಳನ್ನು ಸೇವಿಸಬಹುದು. ಕ್ಲಾಡೋಡ್‌ಗಳ ಶಕ್ತಿಯ ಅಂಶವು ಪ್ರತಿ ಕಿಲೋ ಒಣ ಪದಾರ್ಥಕ್ಕೆ ಸುಮಾರು 3,500 ರಿಂದ 4,000 ಕಿ. ಕ್ಯಾಲೋರಿ ಇದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳಿಂದ ಬರುತ್ತದೆ.
ಯಾವಾಗ ಮತ್ತು ಹೇಗೆ ನೆಡಬೇಕು ಇದನ್ನು ಮುಖ್ಯವಾಗಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಮಳೆಗಾಲದ ನಂತರದ ಅವಧಿಯಲ್ಲಿ ಕತ್ತರಿಸಿ ಅಥವಾ ಕಸಿ ಮಾಡುವ ಮೂಲಕ ನೆಡಬಹುದು. ಒಂದು ವರ್ಷದ ತಾಜಾ, ಪ್ರೌಢ ಕ್ಲಾಡೋಡ್‌ಗಳನ್ನು ತಾಯಿ ಸಸ್ಯದಿಂದ ತೆಗೆದು, ನೆಡುವ ಮೊದಲು 15 ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ. ಒಳ್ಳೆಯ ಪುನರುತ್ಪಾದನೆಗಾಗಿ 18-30°C ವರೆಗಿನ ತಾಪಮಾನವಿರಬೇಕು. ಬೇರಿನ ಉತ್ತಮ ಬೆಳವಣಿಗೆಗೆ ಸುಮಾರು 22°C ಮಣ್ಣಿನ ತಾಪಮಾನವು ಇರಬೇಕು.
ರಾಸಾಯನಿಕ ಗೊಬ್ಬರ (ಕೆಜಿ/ಹೆಕ್ಟೇರ್‌ಗೆ) ನಾಟಿ ಮಾಡುವಾಗ 60 ಕೆಜಿ ಸಾರಜನಕ (N): 30 ಕೆಜಿ ರಂಜಕ(P):: 30 ಕೆಜಿ ಪೊಟ್ಯಾಸಿಯಮ್(K).

ಹೆಚ್ಚಿನ ಉತ್ಪಾದನೆಯನ್ನು ಪಡೆಯಲು ಪ್ರತಿ ಕಟಾವಿನ ನಂತರ 20 ಕೆಜಿ ಸಾರಜನಕವನ್ನು ಬಳಸುವುದರಿಂದ ಒಳ್ಳೆಯ ಮೊಳಕೆ ಬರುತ್ತದೆ.
ಕೊಟ್ಟಿಗೆ ಗೊಬ್ಬರ
(ಟನ್/ಹೆ)
5-6 ಟನ್
ನೀರಾವರಿ ಹೆಚ್ಚಾಗಿ ಮಳೆಯಾಶ್ರಿತ.
ಹಸಿರು ಮೇವಿನ ಇಳುವರಿ (ಟನ್‌ಗಳು/ಹೆಕ್ಟೇರ್) ಪ್ರೌಢ ಕ್ಲಾಡೋಡ್‌ಗಳನ್ನು ಒಂದು ವರ್ಷದ ವಯಸ್ಸಿನಲ್ಲಿ ಕಟಾವು ಮಾಡಬಹುದು. ಜೀವರಾಶಿ ಇಳುವರಿ ಪ್ರತಿ ಗಿಡಕ್ಕೆ ಸುಮಾರು 15-20 ಕೆಜಿ ಮತ್ತು 80-100 ಟನ್/ಹೆಕ್ಟೇರ್ ಕ್ಲಾಡೋಡ್‌ಗಳು. ನಂತರದ ವರ್ಷಗಳಲ್ಲಿ ಜೀವರಾಶಿ ಇಳುವರಿ ಹೆಚ್ಚಾಗುತ್ತದೆ. ಹೊಸದಾಗಿ ಕೊಯ್ಲು ಮಾಡಿದ ಮುಳ್ಳಿಲ್ಲದ ಕ್ಲಾಡೋಡ್‌ಗಳನ್ನು ಮೇಕೆ/ಕುರಿ/ದನಗಳಿಗೆ ಇತರ ಹಸಿರು ಮೇವಿಗೆ 30% ಬದಲಿಯಾಗಿ ನೀಡಬಹುದು.