Responsive Image

ಪೋಷಣೆ ಮತ್ತು ನಿರ್ವಹಣೆ

ಆಡುಗಳಲ್ಲಿ ಪೋಷಣೆ ಮತ್ತು ನಿರ್ವಹಣೆ

ನವಜಾತ ಮರಿಗಳ ಆರೈಕೆ

ಶಕ್ತಿಯುತ ಮತ್ತು ಆರೋಗ್ಯವಂತ ಆಡುಗಳ ಉತ್ಪಾದನೆಯಲ್ಲಿ ಮರಿಗಳ ನಿರ್ವಹಣೆಯು ಮುಖ್ಯ ಅಂಶವಾಗಿದೆ ದಷ್ಟಪುಷ್ಟವಾಗಿ ಬೆಳೆದ ಮರಿಗಳು ರೋಗ ರುಜಿನಗಳಿಗೆ ಬಲಿಯಾಗುವಿವುದಿಲ್ಲ. ಮರಿಗಳಿಗೆ ಮೂರು ತಿಂಗಳಾಗುವಾಗ ಮೆಲಕು ಚೀಲವು ತನ್ನ ಕಾರ್ಯವನ್ನು ಪ್ರಾರಂಭಿಸಿರುತ್ತದೆ. ಈ ವಯಸ್ಸಿನಲ್ಲಿ ಮೇವನ್ನು ಕೊಡಲಾರಂಭಿಸಬೇಕು. ತದನಂತರ, ಮರಿಗಳನ್ನು ತಾಯಿಯಿಂದ ಬೇರ್ಪಡಿಸಬಹುದು. ಅಲ್ಲಿವರೆಗೆ ಜಾಗರೂಕತೆಯಿಂದ ನಿರ್ವಹಣೆ ಮಾಡುವದರಿಂದ ಆಡುಮರಿಗಳ ಮರಣದ ಪ್ರಮಾಣ ತಗ್ಗಿ ಉದ್ಯಮ ಲಾಭದಾಯಕವಾಗುತ್ತದೆ.

ಮರಿಗಳ ಪೋಷಣೆ :

ಮರಿಗಳು ಹುಟ್ಟಿದಾಗ 1.6 ರಿಂದ ₹ ಕಿ.ಗ್ರಾಂ ದೈಹಿಕ ತೂಕವನ್ನು ಹೊಂದಿರುತ್ತವೆ. ಮರಿಗಳ ತ್ವರಿತ ಬೆಳೆವಣಿಗೆಗೆ ಅಗತ್ಯವಿರುವಷ್ಟು ತಾಯಿಯ ಹಾಲು ಮತ್ತು ಸಮತೋಲನ ಆಹಾರವನ್ನು ಒದಗಿಸವುದು ಬಹಳ ಮುಖ್ಯ. ಮರಿಗಳಿಗೆ ನೀಡಬೇಕಾದ ಹಾಲು, ದಾಣಿ ಮಿಶ್ರಣ ಮತ್ತು ಹುಲ್ಲು ಕೊಡುವ ಪ್ರಮಾಣವನ್ನು ಕೋಷ್ಟಕದಲ್ಲಿ ವಿವರಿಸಲಾಗಿದೆ.

Responsive image

ಮರಿಗಳಿಗೆ ಹಾಲು, ದಾಣಿ ಮಿಶ್ರಣ ಮತ್ತು ಹುಲ್ಲು ಕೊಡುವ ಪ್ರಮಾಣ

ಆಡಿನ ವಯಸ್ಸು ಪ್ರತಿ ದಿನದ ಆಹಾರದ ಪ್ರಮಾಣ (ಪ್ರತಿ ಮರಿಗೆ)
ಹಾಲು (ಮಿ.ಲೀ) ದಾಣಿ ಮಿಶ್ರಣ (ಗ್ರಾಂ) ಹಸಿರು ಹುಲ್ಲು (ಗ್ರಾಂ)
ಹುಟ್ಟಿದ 5 ದಿನಗಳವರೆಗೆ ಗಿಣ್ಣು ಹಾಲು - -
5-30 ದಿನಗಳವರೆಗೆ 300-500 ಸಣ್ಣ ಪ್ರಮಾಣದಲ್ಲಿ ಸಣ್ಣ ಪ್ರಮಾಣದಲ್ಲಿ
30-60 ದಿನಗಳವರೆಗೆ 400-500 50-100 ಸಣ್ಣ ಪ್ರಮಾಣದಲ್ಲಿ
60-90 ದಿನಗಳವರೆಗೆ ಹಾಲುಣಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುತ್ತ ೩ ತಿಂಗಳ ಕೊನೆಗೆ ಪೂರ್ತಿ ನಿಲ್ಲಿಸಬೇಕು 100-150 250
90-120 ದಿನಗಳವರೆಗೆ - 200-250 250
5-6- ತಿಂಗಳವರೆಗೆ _ 250-300 750

ಮರಿಗಳ ಸಮತೋಲನ ಆಹಾರ:

ಮರಿಗಳ ಮಾದರಿ ಆಹಾರ ಮಿಶ್ರಣವನ್ನು ರೈತರು ತಮ್ಮಲ್ಲಿರುವ ಕಚ್ಚಾವಸ್ತುಗಳನ್ನು ಕೋಷ್ಟಕದಲ್ಲಿ ತಿಳಿಸಿದ ಪ್ರಮಾಣದಲ್ಲಿ ಬೆರೆಸಿ ತಯಾರಿಸಿ ಕೊಡಬಹುದು.


ಮರಿಗಳ ಮಾದರಿ ಆಹಾರ ಮಿಶ್ರಣ – 100ಕಿ.ಗ್ರಾ.

ಪದಾರ್ಥ ಪ್ರಮಾಣ
ಮುಸುಕಿನ ಜೋಳದ ನುಚ್ಚು 29
ತೋಕ ಗೋಧಿ/ಓಟ್ಸ 29
ಗೋಧಿ ಬೂಸ 29
ಸೋಯಾ ಕಾಳಿನ ಪುಡಿ 11.50
ಲವಣ ಮಿಶ್ರಣ 0.50
ಡೈ ಕ್ಯಾಲ್ಸಿಯಂ ಫಾಸ್ಫೇಟ್ 0.50
ಜೀವಸತ್ವ ಎ, ಡಿ, ಇ ಮಿಶ್ರಣ 0.50

Responsive image
Responsive image

ಆಡುಗಳಲ್ಲಿ ಲಸಿಕೆ ಹಾಗೂ ಜಂತುನಾಶಕ ಔಷಧೋಪಚಾರದ ವೇಳಾಪಟ್ಟಿ

ಕ್ರ.ಸಂ. ರೋಗ ಲಸಿಕೆ ಹಾಕುವ ವಯಸ್ಸು ಲಸಿಕೆ ಹಾಕುವ ಸಮಯ
1. ಕರುಳು ಬೇನೆ 4 ತಿಂಗಳು ಮೇಲ್ಪಟ್ಟು ವರ್ಷಕ್ಕೆ ಎರಡು ಬಾರಿ
ಜನವರಿ ಮತ್ತು ಜುಲೈ ತಿಂಗಳಲ್ಲಿ
2. ಕಾಲು ಬಾಯಿ ರೋಗ (ಖುರಖತ್) 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೆ ಎರಡು ಬಾರಿ
ಫೆಬ್ರವರಿ-ಮಾರ್ಚ್ & ಅಗಷ್ಟ್-ಸಪ್ಟೆಂಬರ್ ತಿಂಗಳಲ್ಲಿ
3. ಚಪ್ಪೆ ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ
4. ಗAಟಲು ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ
5. ನೇರಡಿ ರೋಗ 6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ (ರೋಗ ಕಂಡುಬAದ ಪ್ರದೇಶದಲ್ಲಿ)
6. ಪಿ.ಪಿ.ಆರ್ 4 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಜೂನ್ – ಜುಲೈ ತಿಂಗಳಲ್ಲಿ
7. ನೀಲಿ ನಾಲಿಗೆ ರೋಗ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಅಗಷ್ಟ್ ತಿಂಗಳಲ್ಲಿ
8. ಸಿಡುಬು ರೋಗ 4 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಡಿಸೆಂಬರ್ ತಿಂಗಳಲ್ಲಿ

ಬೆಳೆಯುವ ಮರಿಗಳ ಆರೈಕೆ ಹಾಗೂ ಪೋಷಣೆ

ಆಡುಗಳ ಮಂದೆಯಲ್ಲಿನ ಮರಿಗಳನ್ನು ಪ್ರತ್ಯೇಕಿಸಿ (ವಿಶೇಷವಾಗಿ ಗಂಡುಮರಿಗಳು) ಅವುಗಳನ್ನು ಕೊಬ್ಬಿಸಿ ಮಾರುವ ಪದ್ದತಿಯನ್ನು ರೈತರು ಕೈಗೊಳ್ಳುತ್ತಾರೆ. ಆ ರೀತಿ ಪ್ರತ್ಯೇಕಿಸಿದ ಮರಿಗಳ ವಿಶೇಷ ಪೋಷಣೆ ನೀಡಿದಾಗ ಮಾತ್ರ ಅವುಗಳು ಕಡಿಮೆ ಸಮಯದಲ್ಲಿ ಹೆಚ್ಚು ಕೊಬ್ಬಿ ಉತ್ತಮ ಲಾಭದಾಯಕವಾಗುತ್ತದೆ.

ಬೆಳೆಯು ಮರಿಗಳ ಮಾದರಿ ಆಹಾರ – 100ಕಿ.ಗ್ರಾ

ಪದಾರ್ಥ ಪ್ರಮಾಣ
ಮುಸುಕಿನ ಜೋಳದ ನುಚ್ಚು50
ಕುದರೆಮಂತೆ ಸೊಪ್ಪಿನ ಪುಡಿ15
ಓಟ್ಸ17
ಸೋಯಾ ಅವರೆ ಪುಡಿ12
ಕಾಕಂಬಿ3
ಲವಣ ಮಿಶ್ರಣ1
ಜೀವಸತ್ವ ಎ,ಡಿ, ಇ ಮಿಶ್ರಣ1
ಡೈ ಕ್ಯಾಲ್ಸಿಯಂ ಫಾಸ್ಫೇಟ್0.50
ಸುಣ್ಣದ ಕಲ್ಲು0.50

ಗರ್ಭ ಧರಿಸಿದ ಆಡಿನ ಜೋಪಾನ

ಗರ್ಭದರಿಸಿದ ಮೇಕೆಗಳ ಪಾಲನೆ ಹಾಗೂ ಪೋಷಣೆಗೆ ಸಂಬಂದಿಸಿದಂತೆ ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನದಲ್ಲಿಡಬೇಕು.

Responsive image

ಗಬ್ಬದ ಆಡುಗಳ ಪೋಷಣೆ:

ಗಬ್ಬದ ಆಡುಗಳಲ್ಲಿ ಗರ್ಭಾವಧಿಯ 100 ದಿನಗಳ ನಂತರ ಭ್ರೂಣದ ಬೆಳವಣಿಗೆಯು ತ್ವರಿತಗತಿಯಲ್ಲಿರುತ್ತದೆ. ಅದ್ದರಿಂದ, ಹೆಚ್ಚುವರಿ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸಬೇಕು. ಅಗತ್ಯಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಒದಗಿಸದಿದ್ದರೆ, ಆಡಿನ ಶರೀರವು ಕ್ಷೀಣಿಸತೊಡಗುತ್ತದೆ. ಸಾಕಷ್ಟು ಹಸಿರು ಮೇವಿನೊಂದಿಗೆ ದಿನಕ್ಕೆ ಎರಡು ಹೊತ್ತಿನಂತೆ 250 ರಿಂದ 300 ಗ್ರಾಂ ಸಿದ್ದಾಹಾರ ಮಿಶ್ರಣವನ್ನು ಕೊಡಬೇಕು. ಲವಣಾಂಶ ಮಿಶ್ರಣವು ಹೇರಳವಾಗಿ ದೊರೆಯುವಂತಿರಬೇಕು. ಗಬ್ಬದ ಆಡುಗಳಿಗೆ ಬೇಕಾದ ದಾಣಿ ಮಿಶ್ರಣವನ್ನು ಕೋಷ್ಟಕದಲ್ಲಿ ತಿಳಿಸಿರುವಂತೆ ವಿವಿಧ ಪದಾರ್ಥಗಳನ್ನು ಬೆರೆಸಿ ತಯಾರಿಸಬಹುದು.

Responsive image
Responsive image
ಘಟಕಗಳ ಪ್ರಮಾಣ ( 100ಕಿ.ಗ್ರಾ) ಸಸಾರಜನಕ ಶೇ
ಮಾದರಿ 1 ಮಾದರಿ 2 ಮಾದರಿ 3
ಮುಸುಕಿನ ಜೋಳದ ನುಚ್ಚು 37 35 32
ತೋಕ ಗೋಧಿ/ಓಟ್ಸ 34 32 29
ಗೋಧಿ ಬೂಸ 16 14 15
ಎಣ್ಣೆಕಾಳು ಹಿಂಡಿ 9 15 20
ಕಾಕಂಬಿ 2.5 2.5 2.5
ಲವಣ ಮಿಶ್ರಣ 0.50 0.50 0.50
ಡೈ ಕ್ಯಾಲ್ಸಿಯಂ ಫಾಸ್ಫೇಟ್ 0.50 0.50 0.50
ಜೀವಸತ್ವ ಎ, ಡಿ, ಇ ಮಿಶ್ರಣ 0.50 0.50 0.50