ಹಟ್ಟಿಯಲ್ಲಿರುವ ಆಡುಗಳನ್ನು ದಿನಂಪ್ರತಿ ಗಮನಿಸುವದರಿಂದ ಅನಾರೋಗ್ಯ ಆಡುಗಳನ್ನು ಸುಲಭವಾಗಿ ಗುರುತಿಸಬಹುದು. ಸಾಮಾನ್ಯವಾಗಿ ಅನಾರೋಗ್ಯ ಪೀಡಿತ ಮೇಕೆ ಹಿಂಡಿನಿಂದ ದೂರ ಉಳಿಯುತ್ತದೆ, ಮಂಕಾಗಿರುತ್ತದೆ, ತಲೆಯನ್ನು ತಗ್ಗಿಸಿರುತ್ತದೆ, ಮೈಗೂದಲು ಉದುರುತ್ತಿರುತ್ತದೆ ಹಾಗೂ ನೈಸರ್ಗಿಕ ದ್ವಾರಗಳಲ್ಲಿ ಸ್ರಾವವಾಗಬಹುದು. ಇನ್ನು ಮೇವು ತಿನ್ನಲು ಆಸಕ್ತಿ ತೋರುವದಿಲ್ಲ, ನೀರು ಕುಡಿಯುವದಿಲ್ಲ ಹಾಗೂ ಮೆಲುಕು ಹಾಕುವದನ್ನು ಕಡಿಮೆ ಮಾಡುತ್ತವೆ. ಇಂತಹ ಲಕ್ಷಣಗಳನ್ನು ತೋರಿಸುವ ಆಡುಗಳನ್ನು ಇತರೇ ಆಡುಗಳಿಂದ ಪ್ರತ್ಯೇಕಿಸಿ ಪ್ರಥಮೋಪಚಾರದ ಕೆಲವು ಸಾಮಾನ್ಯ ಕ್ರಮಗಳನ್ನು ತೆಗೆದುಕೊಂಡು ಸಮೀಪದ ಪಶುವೈದ್ಯರುಗಳನ್ನು ಸಂಪರ್ಕಿಸಬೇಕು.
ಆಡು ಮತ್ತು ಕುರಿಗಳು ಭೂಮಿಗೆ ಅತೀ ಹತ್ತಿರದಲ್ಲಿ ಮೇಯುವುದರಿಂದ ಬಹಳಷ್ಟು ಒಳ ಪರೋಪಜೀವಿಗಳಿಂದ ಬಳಲುತ್ತಿರುತ್ತವೆ. ಇದಲ್ಲದೇ ನಿರ್ವಹಣೆಯಲ್ಲಾಗುವ ಲೋಪಗಳಿಂದ, ಕಲುಷಿತ ನೀರು ಹಾಗೂ ಆಹಾರದಿಂದ ಜಾನುವಾರುಗಳಿಗೆ ಹಲವಾರು ಕಾಯಿಲೆಗಳು ಹರಡುವ ಸಂಭವವಿರುತ್ತದೆ. ಇದರಿಂದ ಆಡುಗಳ ಉತ್ಪಾದನೆ ಕಡಿಮೆಯಾಗಿ ಹಾಗೂ ಮರಣಕ್ಕೆ ತುತ್ತಾಗಿ ರೈತರಿಗೆ ಆರ್ಥಿಕ ಹಾನಿಯನ್ನುಂಟುಮಾಡುತ್ತವೆ. ಆಡುಗಳಲ್ಲಿ ಪ್ರಮುಖವಾಗಿ ಕಂಡುಬರುವ ರೋಗಗಳು ಈ ಕೆಳಗಿನಂತಿವೆ.
ಈ ರೋಗವು ಒಂದು ವೈರಾಣುವಿನಿಂದ ಹರಡಲ್ಪಡುತ್ತದೆ. ಇದು ಒಂದು ಸಾಂಕ್ರಮಿಕ ರೋಗ. ವೈರಾಣುವು ಗಾಳಿ, ಗೊಣ್ಣೆ, ಚರ್ಮದ ಹೊಟ್ಟು (ಬೊಬ್ಬೆ), ಜೊಲ್ಲಿನಿಂದ ಹಾಗೂ ರೋಗಗ್ರಸ್ಥ ಆಡುಗಳ ಸಂಪರ್ಕದ ವಸ್ತುಗಳು ಹಾಗೂ ಜನರಿಂದ ಹರಡುತ್ತದೆ.
ರೋಗಲಕ್ಷಣಗಳು : ರೋಗಗ್ರಸ್ಥ ಆಡುಗಳಲ್ಲಿ ಜ್ವರ, ಕಣ್ಣಲ್ಲಿ ನೀರು ಸೋರುವಿಕೆ, ಮೂಗಲ್ಲಿ ಗೊಣ್ಣೆ ಹಾಗೂ ಬಾಯಲ್ಲಿ ಜೊಲ್ಲು ಸೋರುವಿಕೆ ಕಂಡು ಬರುತ್ತದೆ. ನಂತರ ಬಾಲದ ಬುಡ, ಕಣ್ಣಿನ ಕೆಚ್ಚಲು ತುಟಿಗಳ ಮೇಲೆ ಮತ್ತು ತೊಡೆಗಳ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಬೊಕ್ಕೆಗಳು ನಂತರ ಇತರೆ ಸೋಂಕಿನಿಂದ ಹುಣ್ಣಾಗಿ ಮಾರ್ಪಾಡಾಗುತ್ತವೆ. ಪುಪ್ಪಸ ಹಾಗೂ ಶ್ವಾಸನಾಳಗಳಲ್ಲಿ ಬೊಕ್ಕೆಗಳು ಕಂಡು ಬಂದಲ್ಲಿ ಕೆಮ್ಮು ಕಾಣಿಸಿಕೊಳ್ಳಬಹುದು. ಮರಿಗಳಲ್ಲಿ ರೋಗ ಉಲ್ಪಣ ಹೆಚ್ಚಾಗಿ ಕಂಡು ಬರುತ್ತದೆ. ರೋಗಗ್ರಸ್ಥ ಮಂದೆಗಳಲ್ಲಿ ಶೇಕಡ 50 ಆಡುಗಳು ಸಾಯುತ್ತವೆ. ಗರ್ಭಸ್ಥ ಆಡುಗಳು ಕಂದು ಹಾಕಬಹುದು.
ಚಿಕಿತ್ಸೆ : ರೋಗಗ್ರಸ್ಥ ಆಡುಗಳನ್ನು ಮಂದೆಯಿಂದ ಬೇರ್ಪಡಿಸಬೇಕು. ತಕ್ಷಣ ಪಶವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧೋಪಚಾರ ಮಾಡಿಸಬೇಕು.
ಮುಂಜಾಗ್ರತಾ ಕ್ರಮ: ರೋಗ ತಡೆಗಟ್ಟಲು ಆಡುಗಳಿಗೆ ಬೇಸಿಗೆ ಕಾಲಕ್ಕೆ ಮುಂಚೆಯೇ ಆಡು ಸಿಡುಬು ಲಸಿಕೆ ಹಾಕಿಸಬೇಕು.
ಇದು ವೈರಾಣುಗಳಿಂದ ಬರುವ ಕಾಯಿಲೆ. ಈ ರೋಗ ಎಲ್ಲಾ ಋತುಗಳಲ್ಲೂ ಕಂಡುಬರುವುದು.
ರೋಗಲಕ್ಷಣಗಳು: ರೋಗಗ್ರಸ್ಥ ಆಡುಗಳಲ್ಲಿ ಅತಿಯಾದ ಜ್ವರವಿದ್ದು, ಕಣ್ಣು ಕೆಂಪಾಗಿ ನೀರು ಸೋರುತ್ತದೆ. ನಂತರ ಗೀಜು ಕಟ್ಟುವಿಕೆ ಕಂಡು ಬರುತ್ತದೆ. ಬಾಯಲ್ಲಿ ಹುಣ್ಣಾಗಿ ನೊರೆಯುಕ್ತ ಜೊಲ್ಲನ್ನು ಸುರಿಸುತ್ತಿರುತ್ತವೆ. ಆಡುಗಳು ಮೇವು ಬಿಟ್ಟು ನಿಶ್ಯಕ್ತಿಯಿಂದ ಮಂಕಾಗುತ್ತವೆ. ಪುಪ್ಪುಸ ರೋಗದಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಜ್ವರ ಕಡಿಮೆಯಾಗುತ್ತಿದ್ದಂತೆ ಬೇಧಿ ಅಥವಾ ಅಮಶಂಕೆ ಕಾಣಿಸಿ ನಿತ್ರಾಣಗೊಂಡು ಸಾಯುತ್ತವೆ.
ಚಿಕಿತ್ಸೆ ಮತ್ತು ನಿಯಂತ್ರಣ: ರೋಗ್ರಗಸ್ಥ ಪ್ರಾಣಿಗಳು ಕಂಡು ಬಂದರೆ ಅವುಗಳನ್ನು ಪ್ರತ್ಯೇಕಿಸಿ ಪಶುವೈದ್ಯರ ಸಲಹೆ ಪಡೆಯಬೇಕು. ಮುಂಜಾಗ್ರತಾ ಕ್ರಮವಾಗಿ ಪಿಪಿಆರ್ ರೋಗದ ಲಸಿಕೆಯನ್ನು ಎಲ್ಲಾ ಆಡುಗಳಿಗೆ ನೀಡಿದಲ್ಲಿ ಈ ರೋಗವನ್ನು ತಡೆಗಟ್ಟಬಹುದು.
ಇದು ವೈರಾಣುವಿನಿಂದ ಹರಡಲ್ಪಡುವ ಸಾಂಕ್ರಾಮಿಕ ರೋಗ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಬರುವ ರೋಗ. ಎಲ್ಲಾ ವಯಸ್ಸಿನ, ಎಲ್ಲಾ ಜಾತಿಯ ಆಡುಗಳಲ್ಲಿ ಕಂಡು ಬರುತ್ತದೆ.
ಈ ರೋಗವು ಕೀಟಾಣು (ಬ್ಯಾಕ್ಟೀರಿಯಾ)ಗಳಿಂದ ಹರಡಲ್ಪಡುವ ಒಂದು ಸಾಂಕ್ರಾಮಿಕ ರೋಗ.
ಈ ರೋಗವು ಕ್ಲಾಸ್ಟಿಡಿಯಂ ಜಾತಿಗೆ ಸೇರಿದ ಬ್ಯಾಕ್ಟೀರಿಯಾದಿಂದ ಹರಡುತ್ತದೆ.
ಈ ರೋಗವು ಆಡುಗಳಲ್ಲಿ ಬ್ರುಸೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ.
ಗರ್ಭಾವಧಿಯ ಉತ್ತರ ಭಾಗದಲ್ಲಿ ಈ ಸಮಸ್ಯೆಯು ಕಂಡುಬರುತ್ತದೆ...
ಗರ್ಭಪಾತಕ್ಕೆ ಮುಖ್ಯ ಕಾರಣಗಳೆಂದರೆ ಪೋಷಕಾಂಶಗಳ ಕೊರತೆ ಮತ್ತು ಕೆಲವು ಸೋಂಕು ರೋಗಗಳು...
ಗರ್ಭಾವಧಿಯ ಕೊನೆಯ 2 ತಿಂಗಳುಗಳಲ್ಲಿ ಈ ಸೋಂಕು ಗರ್ಭಪಾತಕ್ಕೆ ಕಾರಣವಾಗುತ್ತದೆ...
ಸಾಮಾನ್ಯವಾಗಿ ಈ ಸೋಂಕು ಬೆಕ್ಕುಗಳಲ್ಲಿ ಕಂಡುಬರುತ್ತದೆ...
ಕಾಕ್ಸಿಯೆಲ್ಲಾ ಬರ್ನೆಟ್ಟಿ ಎಂಬ ಸೂಕ್ಷಣುಜೀವಿಗಳು...
ಬ್ರುಸೆಲ್ಲಾ ಮೆಲಿಟೆನ್ಸಿಸ್ ಎಂಬ ರೋಗಾಣುಗಳು...
ಲಿಸ್ಟೀರಿಯಾ ಮಾನೋಸೈಟೊಜೆನಿಸ್ ಎಂಬ ರೋಗಾಣುಗಳು...
ಮರಿಗಳಿಗೆ ಜನ್ಮವಿತ್ತ ನಂತರ 12 ರಿಂದ 18 ಘಂಟೆಗಳೊಳಗಾಗಿ ಮಾಸು ಹೊರಬೀಳುತ್ತದೆ...
ಪ್ರಸವದ ವೇಳೆಯಲ್ಲಿ ಮರಿಗಳ ಜನನಕ್ಕೆ ತಡೆಯುಂಟಾದರೆ...
ಕರಾವಿನ ಪ್ರಾರಂಭದಲ್ಲಿ ಹಾಲಿನ ಉತ್ಪಾದನೆಗೆ ಬೇಕಾಗುವ ಕ್ಯಾಲ್ಸಿಯಂ...
ಗೋಧಿ ಅಥವಾ ಬಾರ್ಲಿಯಂತಹ ಹೆಚ್ಚಿನ ಅಪಾಯದ ಧಾನ್ಯಗಳ ಅತಿಯಾದ ಸೇವನೆ...
ಇವು ಕೇವಲ ಮೇಕೆ ಅಥವಾ ಕುರಿಗಳನ್ನು ಬೇರೆ ರೋಗಕ್ಕೆ ಸರಳವಾಗಿ ತುತ್ತಾಗಿಸುವುದಲ್ಲದೇ...
ಆಡುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜಂತು ಹುಳುಗಳು : ಅ) ದುಂಡು ಜಂತುಹುಳು ಆ) ಲಾಡಿ ಹುಳು ಇ) ಕಾರಲು ಹುಳು ಈ) ಆಂಫಿಸ್ಟೋಮ್ ಹುಳುಗಳು
ಸ್ಟ್ರಾಂಗೈಲ್ ಜಾತಿಗೆ ಸೇರಿದ ದುಂಡು ಹುಳುಗಳು...
ಚಿಕಿತ್ಸೆ ಮುಂಜಾಗ್ರತಾ ಕ್ರಮ : ಆಡುಗಳಿಗೆ 2-3 ತಿಂಗಳಿಗೊಮ್ಮೆ ಪಶುವೈದ್ಯರ ಸಲಹೆಯಂತೆ ಎಲ್ಲಾ ಆಡುಗಳಿಗೆ ಜಂತುಹುಳುವಿನ ಔಷಧಿ ಕೊಡಿಸಬೇಕು.
ಈ ಹುಳುಗಳು ಕರುಳಿನಲ್ಲಿ ವಾಸಿಸುತ್ತವೆ. ಇವುಗಳು ಅರಬ್ಯಾಟಿಡ್ ನುಸಿಗಳಿಂದ ಹರಡಲ್ಪಡುತ್ತವೆ. ಸಾಮಾನ್ಯವಾಗಿ ಮರಿಗಳಲ್ಲಿ ಹೆಚ್ಚು ತೊಂದರೆಯಾಗುತ್ತದೆ. ನಿಶ್ಯಕ್ತಿ ಅಜೀರ್ಣ ಕಂಡು ಬಂದು ಮರಿಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ.
ಚಿಕಿತ್ಸೆ : ಮರಿಗಳಿಗೆ ಲಾಡಿ ಹುಳುವಿನ ಔಷಧಿಯನ್ನು 1 ವರ್ಷದೊಳೆಗೆ ಎರಡು ಬಾರಿ ಕೊಡಿಸಬೇಕು. ಲಾಡಿ ಹುಳು ಕಂಡು ಬಂದ ವಯಸ್ಕ ಆಡುಗಳಿಗೆ ಸೂಕ್ತ ಔಷಧಿ ಕೊಡಿಸಬೇಕು.
ಈ ಹುಳುಗಳು ಆಡುಗಳ ಪಿತ್ತ ನಾಳಗಳಲ್ಲಾಗಲಿ ಅಥವಾ ಯಕೃತ್ತಿನಲ್ಲಾಗಲೀ ವಾಸಿಸುತ್ತವೆ. ಈ ಹುಳುಗಳು ಬಸವನ ಹುಳುವಿನ ಸಂಪರ್ಕದಿಂದ ಹರಡಲ್ಲಡುವುವು. ಈ ಬಸವನ ಹುಳುಗಳು ಸಾಮಾನ್ಯವಾಗಿ ಕೊಳಚೆ ನೀರಿನ ಅಥವಾ ಜೌಗು ಪ್ರದೇಶಗಳಲ್ಲಿ ವಿಶೇಷವಾಗಿರುತ್ತವೆ. ಕಾರಲು ಹುಳುವಿನಿಂದ ನರಳುತ್ತಿರುವ ಆಡುಗಳಲ್ಲಿ ರಕ್ತಹೀನತೆ, ಗದ್ದ, ಕಾಲುಗಳಲ್ಲಿ ಬಾವು ಕಂಡು ಬರುತ್ತದೆ. ಕೆಲವೊಮ್ಮೆ ಬೇಧಿ ಕಂಡು ಬರುತ್ತದೆ. ಅಥವಾ ಹುಳುಗಳು ಹೆಚ್ಚಾಗಿದ್ದರೆ ಆಡುಗಳು ಸಾಯಲೂಬಹುದು. ಈ ಕಾಯಿಲೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬರುವುದು.
ಚಿಕಿತ್ಸೆ ಮುಂಜಾಗ್ರತಾ ಕ್ರಮ : ಪಶುವೈದ್ಯರ ಸಲಹೆ ಪಡೆದು ಸೂಕ್ತ ಜಂತು ಹುಳುವಿಕೆ ಔಷಧಿ 3-4 ತಿಂಗಳಿಗೊಮ್ಮೆ ಕೊಡಿಸಬೇಕು ಹಾಗೂ ಜೌಗು ಪ್ರದೇಶದಲ್ಲಿ ಆಡುಗಳನ್ನು ಮೇಯಿಸಬಾರದು.
ಈ ಹುಳುಗಳು ಸಾಮಾನ್ಯವಾಗಿ ದೊಮ್ಮೆಯಲ್ಲಿ ವಾಸಿಸುತ್ತವೆ. ಕಾರಲು ಹುಳುಗಳಂತೆ ಇವೂ ಕೂಡ ಬಸವನ ಹುಳುಗಳಿಂದ ಹರಡಲ್ಪಡುತ್ತವೆ. ಈ ಹುಳುಗಳ ಮರಿಗಳು ಆಡುಗಳ ದೇಹ ಪ್ರವೇಶಿಸಿದ ನಂತರ ಕರುಳಿನಲ್ಲಿ ಹೆಚ್ಚಾಗಿ ತೊಂದರೆಯುಂಟು ಮಾಡಿ ಬೇಧಿ ಕಂಡು ಬರುತ್ತದೆ. ನಂತರ ವಯಸ್ಕ ಹುಳುಗಳು ದೊಮ್ಮೆಯಲ್ಲಿ ಕಂಡು ಬರುತ್ತವೆ.
ಚಿಕಿತ್ಸೆ ಮುಂಜಾಗ್ರತಾ ಕ್ರಮ: ಪಶುವೈದ್ಯರ ಸಲಹೆ ಪಡೆದು ಜಂತು ಹುಳುವಿನ ಔಷಧಿ 3-4 ತಿಂಗಳಿಗೊಮ್ಮೆ ಕೊಡಿಸಬೇಕು ಹಾಗೂ ಜೌಗು ಪ್ರದೇಶದಲ್ಲಿ ಆಡುಗಳನ್ನು ಮೇಯಿಸಬಾರದು.
ಒಟ್ಟಿನಲ್ಲಿ ಪರೋಪ ಜೀವಿಗಳಿಂದಾಗುವ ಹಾನಿ ಅಪಾರ. ಜೊತೆಗೆ ಇವುಗಳಿಗೆ ಲಸಿಕೆ ಇಲ್ಲದಿರುವುದರಿಂದ 2-3 ತಿಂಗಳಿಗೊಮ್ಮೆ ಸೂಕ್ತ ಜಂತುಹುಳುವಿಗೆ ಔಷಧಿ ಕೊಡಿಸುವುದರಿಂದ ಆಡುಗಳಿಗಾಗುವ ಹಾನಿಯನ್ನು ತಪ್ಪಿಸಬಹುದು.
ಇವು ದೇಹಾಂಗ ಕಾರ್ಯಗಳಿಗೆ ಹಾನಿಕಾರಕ. ಇವು ತಮ್ಮ ಚಲನವಲನ ಸಾಮರ್ಥ್ಯದಿಂದ ದೇಹದಲ್ಲಿ ಪ್ರವೇಶ ಮಾರ್ಗಗಳನ್ನು ಕಲ್ಪಿಸಿಕೊಂಡು ಬೇಕಾದ ಜಾಗಕ್ಕೆ ಅನಾಯಾಸವಾಗಿ ಹೋಗಬಲ್ಲವು. ಸದೃಡ ದೇಹದಲ್ಲಿ ಈ ಪರಾವಲಂಬಿಗಳು ನಿರಾತಂಕವಾಗಿ ಜೀವಿಸಲಾರವು. ಆದರೆ ದೇಹ ಶಕ್ತಿಯು ಕ್ಷೀಣಿಸಿದಂತೆ ಇವುಗಳ ಬೆಳವಣಿಗೆ ಹೆಚ್ಚಾಗಿ ವಿನಾಶ ಕಾರ್ಯವು ಹೆಚ್ಚು ತ್ವರಿತವಾಗಿ ಸಾಗುತ್ತದೆ. ರೋಗಗ್ರಸ್ಥ ಆಡುಗಳಲ್ಲಿ ಮೈಹಿಡಿಯದೆ ಮಾಂಸದ ಪ್ರಮಾಣ ಕಮ್ಮಿಯಾಗುತ್ತದೆ.
ಆಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪರಾವಲಂಬಿ ಜೀವಿಗಳೆಂದರೆ
೧. ಉಣ್ಣೆ ೨. ನುಸಿ ೩. ಹೇನು ೪. ಚಿಗಟ
ಈ ಪರಾವಲಂಬಿ ಜೀವಿಗಳು ಆಡುಗಳ ಚರ್ಮಕ್ಕೆ ಹಾನಿಯುಂಟುಮಾಡುತ್ತವೆ. ಕೆಲವು ವೈರಾಣು ಹಾಗೂ ಸೂಕ್ಷ್ಮಾಣು ಜೀವಿಗಳ ಕಾಯಿಲೆಗಳನ್ನು ಕೂಡ ಉಣ್ಣೆಗಳು ಆಡುಗಳಿಗೆ ಹರಡುತ್ತವೆ. ಈ ಹೊರ ಪರಾವಲಂಬಿ ಪೀಡಿತ ಆಡುಗಳಲ್ಲಿ ಚರ್ಮರೋಗದ ಜೊತೆಗೆ ನಿಶ್ಯಕ್ತಿ ಕಂಡು ಬರುತ್ತದೆ. ಇವುಗಳನ್ನು ಹತೋಟಿಗೆ ತರಲು ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಕೀಟನಾಶಕ ಔಷಧಿಯನ್ನು ಉಪಯೋಗಿಸಬೇಕು.