ಮಾನವನು ಜಾನುವಾರುಗಳನ್ನು ಸಾಕುವದಕ್ಕೆ ಆರಂಭಿಸಿದಾಗಿನಿಂದ ಅವುಗಳ ವಸತಿ ಪದ್ದತ್ತಿಗಳಲ್ಲಿಯೂ ಸಾಕಷ್ಟು ಬೆಳವಣಿಗೆಗಳು ಆಗಿವೆ. ಮೇಕೆ ಸಾಕುಪ್ರಾಣಿಗಳಲ್ಲಿ ಹೆಚ್ಚು ಸಹಿಷ್ಣುತೆಯ ಗುಣವನ್ನು ಹೊಂದಿದೆ. ಮೇಕೆಯ ಶರೀರವು ಎಮ್ಮೆ ಮತ್ತು ಆಕಳುಗಳ ಶರೀರಕ್ಕಿಂತ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳಿಗೆ ಬೇಕಾದ ಜಾಗವೂ ಕಡಿಮೆ. ಸಾಮಾನ್ಯವಾಗಿ ಮೇಕೆಗಳಿಗೆ ವಸತಿ ಸೌಕರ್ಯಕ್ಕಾಗಿ ಹೆಚ್ಚು ಖರ್ಚಿನಿಂದ ಕಟ್ಟಿದ ಪಕ್ಕಾ ಮನೆಗಳು ಬೇಕಿಲ್ಲ, ಆದರೂ ಸಹಿತ ಉತ್ತಮ ಆಡೊಂದು ತನ್ನ ಅನುವಂಶಿಕ ಗುಣಗಳಿಗನುಗುಣವಾಗಿ ಉತ್ಪಾದಿಸಲು ಅದರ ಆಹಾರ ನಿರ್ವಹಣೆಯಷ್ಟೇ ಮುಖ್ಯವಾಗಿ ಆರಾಮದಾಯಕವಾದ ವೈಜ್ಞಾನಿಕ ವಸತಿ ವ್ಯವಸೆಯ ಅವಶ್ಯಕತೆ ಇರುತ್ತದೆ. ಮೇಕೆಗಳಿಗೆ ವಸತಿ ವದಗಿಸುವಾಗ ಮುಖ್ಯವಾಗಿ ಎರಡು ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ. ಒಂದು ವಸತಿಯ ಖರ್ಚು ಕಡಿಮೆಯಾಗಿರಬೇಕು ಹಾಗೂ ಅದು ವೈಜ್ಞಾನಿಕ ವಸತಿಯಾಗಿರಬೇಕು.
ಸಾಮಾನ್ಯವಾಗಿ ಆಡು ಸಾಕುವವರು ತಮ್ಮ ಲಭ್ಯ ಬಂಡವಾಳದ ಪ್ರಕಾರ ಹಾಗೂ ಮಂದೆಗಳ ಗಾತ್ರದ ಪ್ರಕಾರ ಹಲವಾರು ವಿಧಾನದ ವಸತಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅವುಗಳನ್ನು ಪ್ರಮುಖವಾಗಿ ಈ ಕೆಳಕಂಡ ನಾಲ್ಕು ವಿಧಾನಗಳಲ್ಲಿ ಗುರುತಿಸಬಹುದು.
ಇಂತಹ ವಿಧಾನವನ್ನು ಸಾಮಾನ್ಯವಾಗಿ ದೊಡ್ಡಮಂದೆಗಳಿರುವಲ್ಲಿ ಒದಗಿಸಲಾಗುತ್ತದೆ. ಸುತ್ತಲೂ ಮುಳ್ಳು ಬೇಲಿ ಹಾಕಿ ಸಾಮಾನ್ಯವಾಗಿ ಮರದ ಕೆಳಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ವಿಧಾನವು ಇಂದಿಗೂ ಬಹಳಷ್ಟು ಕಡೆ ಇದ್ದು, ಇಲ್ಲಿ ಪ್ರತಿಕೂಲ ವಾತಾವರಣ ಹಾಗೂ ಕ್ರೂರ ಪ್ರಾಣಿಗಳಿಂದ ರಕ್ಷಣೆ ಸಿಗುವುದಿಲ್ಲ.
ಇಲ್ಲಿ ಹೆಚ್ಚು ಬಂಡವಾಳದ ಅವಶ್ಯಕತೆ ಇದ್ದು ಚಿಕ್ಕ ಗಾತ್ರದ ಮಂದೆಗಳಿಗೆ ಬಳಸುತ್ತಾರೆ. ಇತ್ತೀಚಗೆ ಆಧುನಿಕ ಮೇಕೆ ಸಾಕಾಣಿಕೆಯತ್ತ ಒಲವು ತೋರುತ್ತಿರುವ ರೈತರು ಈ ಪದ್ದತಿ ಅಳವಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇಲ್ಲಿ ಪ್ರತಿಕೂಲ ವಾತಾವರಣ ಮತ್ತು ಕ್ರೂರ ಪ್ರಾಣಿಗಳಿಂದ ರಕ್ಷಣೆ ದೊರಕುತ್ತದೆ.
ಈ ವಿಧಾನದ ವಸತಿಯು ಹೆಚ್ಚು ತೇವಾಂಶ ಹಾಗೂ ಮಳೆ ಪ್ರದೇಶಗಳಿಗೆ ಯೊಗ್ಯವಾಗಿದ್ದು ನೆಲದಿಂದ ಒಂದು ಮೀಟರ್ ಎತ್ತರದಲ್ಲಿ ಮರದ ಪಟ್ಟಿಗಳ ಹಾಸುಗಳನ್ನು ಹಾಕಲಾಗುತ್ತದೆ. ಮೇಕೆಗಳ ಹೆಕ್ಕೆ ಮತ್ತು ಮೂತ್ರ ನೆಲದ ಮೇಲೆ ಬಿಳುವುದಕ್ಕೆ ಅನುಕೂಲವಾಗುವಂತೆ ಈ ತರದ ಪಟ್ಟಿಗಳ ನಡುವೆ 1 ಸೆ. ಮೀ. ಜಾಗ ಬಿಡಲಾಗುತ್ತದೆ. ಈ ವಿಧಾನದಲ್ಲಿ ನೆಲವನ್ನು ಸ್ವಚ್ಚವಾಗಿಡಲು ಸಾಕಷ್ಟು ಸ್ಥಳಾವಕಾಶ ದೊರೆಯುತ್ತದೆ.
ಇಂತಹ ವಸತಿ ಹಟ್ಟಿಗಳನ್ನು ತೀವ್ರ ಶೀತ (ಚಳಿಗಾಲದ) ವಲಯಗಳಲ್ಲಿ ಚಳಿಯಿಂದ ರಕ್ಷಣೆ ನೀಡಲು ಸದಾಕಾಲ ಬೆಚ್ಚಗೆ ಇರುವಂತೆ ಮಾಡಲು ನಿರ್ಮಿಸುತ್ತಾರೆ. ಸಾಮಾನ್ಯವಾಗಿ ಈ ಪದ್ಧತಿಯು ಕರ್ನಾಟಕದಂತಹ ಉಷ್ಣ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ.
ಮೇಕೆಗಳ ವಸತಿ ಕಟ್ಟಡಕ್ಕೆ ನಮ್ಮ ಪ್ರದೇಶದಲ್ಲಿ ಸಾಮಾನ್ಯವಾಗಿ ಹಟ್ಟಿ ಅಥವಾ ಕೊಟ್ಟಿಗೆಯಂತಲೂ ಕರೆಯುತ್ತಾರೆ. ಹಟ್ಟಿಯ ನಿರ್ಮಾಣದ ಉದ್ದೇಶವು ವಾತಾವರಣದ ವೈಪರಿತ್ಯದಿಂದ ರಕ್ಷಣೆಯನ್ನು ಒದಗಿಸುವುದಾಗಿದೆ. ಸಾಮಾನ್ಯವಾಗಿ ಹಟ್ಟಿಯನ್ನು ಪೂರ್ವ ಪಶ್ಚಿಮ ದಿಕ್ಕಿಗಿರುವಂತೆ ನಿರ್ಮಿಸಬೇಕು. ಸ್ಧಳೀಯವಾಗಿ ದೊರೆಯುವ ಸಾಮಗ್ರಿಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ವೆಚ್ಚವನ್ನು ಕಡಿಮೆ ಮಾಡಬೇಕು. ಮೇಲ್ಛಾವಣಿಗೆ ಹಂಚುಗಳನ್ನು ಹೊಂದಿಸಬಹುದು. ನೆಲವು ಸಿಮೆಂಟ್ ಕಾಂಕ್ರಿಟದಾಗಿದ್ದು ಇಳಿಜಾರಾಗಿರಬೇಕು ಮತ್ತು ಜಾರುವಂತಿರಬಾರದು. ವಯಸ್ಸಿಗನುಗುಣವಾಗಿ ಆಡುಗಳಿಗೆ ಸ್ಧಳವಕಾಶವನ್ನು ದೊರಕಿಸುವುದು ಹಟ್ಟಿ ನಿರ್ಮಾಣದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶ. ಆಡುಗಳಿಗೆ ಸಾಮಾನ್ಯವಾಗಿ ವಸತಿ ಸೌಕರ್ಯಕ್ಕಾಗಿ ಹೆಚ್ಚು ಖರ್ಚಿನಿಂದ ಕಟ್ಟಿದ ಪಕ್ಕಾ ಮನೆಗಳು ಬೇಕಿಲ್ಲ. ಹಳ್ಳಿಗಳಲ್ಲಿ ಸಿಗುವ ಬಿದಿರುಗಳ ಸಹಾಯದಿಂದ ಚಪ್ಪರ ಅಥವಾ ಹುಲ್ಲಿನ ಜೋಪಡಿಗಳನ್ನು ಕಡಿಮೆ ಖರ್ಚಿನಲ್ಲಿ ನಿರ್ಮಿಸಬಹುದು. ಮಣ್ಣಿನ ಗೋಡೆಗಳನ್ನು ಕಟ್ಟಿ ಅದರ ಮೇಲೆ ಛಾವಿಯಾಗಿ ಒಣಗಿದ ಹುಲ್ಲನ್ನು ಹೊದಿಸಿ ಅಡುಗಳ ವಸತಿಯನ್ನು ನಿರ್ಮಿಸಬಹುದು. ಮೇಕೆಗಳಿಗೆ ವಸತಿ ಕುರಿತು ವಿಶ್ಲೇಷಿಸುವಾಗ ಈ ಕೆಳಕಂಡ ಅಂಶಗಳನ್ನು ಸಾಮಾನ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
ಮೇಕೆಗಳ ಹಟ್ಟಿ ಅಥವಾ ವಸತಿಗೆ ಹೊಂದಿಕೊಂಡಂತೆ ಆಹಾರ, ಮೇವು, ಔಷಧಿ ಮತ್ತು ಇತರೆ ಉಪಕರಣಗಳ ಸಂಗ್ರಹ ಕೊಠಡಿಗಳನ್ನು ನಿಮಿ೯ಸಿದರೆ ಅವುಗಳ ನಿರ್ವಹಣೆ ಇನ್ನಷ್ಟು ಸರಳವಾಗುತ್ತದೆ. ಆಡುಗಳನ್ನು ತೂಕ ಮಾಡಲು ಸೂಕ್ತವಾದ ತಕ್ಕಡಿ, ಮೇವನ್ನು ಕತ್ತರಿಸುವ ಯಂತ್ರ ಹಾಗೂ ಇತರೆ ಅವಶ್ಯ ಸೌಲಭ್ಯಗಳು ಹಟ್ಟಿಯಲ್ಲಿ ಲಭ್ಯವಿರಬೇಕು.
| ವಯಸ್ಸು | ಮುಚ್ಚಲ್ಪಟ್ಟ ಸ್ಥಳ (ಚ. ಮೀ) | ತೆರೆದ ಸ್ಥಳ (ಚ. ಮೀ) |
|---|---|---|
| 3 ತಿಂಗಳವರೆಗೆ | 0.2-0.25 | 0.4-0.5 |
| 3-6 ತಿಂಗಳವರೆಗೆ | 0.5-0.75 | 1.0-1.5 |
| 6 - 12 ತಿಂಗಳವರೆಗೆ | 0.75-1.0 | 1.5-2.0 |
| ವಯಸ್ಕ ಪ್ರಾಣಿ | 1.5 | 3.0 |
| ಹೋತ, ಗಬ್ಬದ ಆಡು | 1.5-2.0 | 3.0-4.0 |
ಆಡುಗಳಿಗೆ ವಸತಿಗಾಗಿ ಈ ಕೆಳಗಿನ ರೀತಿಯ ಶೆಡ್‌ಗಳು ಅಗತ್ಯವಿದೆ: