Responsive Image

ಶುದ್ಧ ಹಾಲಿನ ಉತ್ಪಾದನೆ ಹಾಗೂ ನಿರ್ವಹಣೆ

ಹಾಲು ಸರ್ವರೂ ಸೇವಿಸುವ ಸಂಪೂರ್ಣ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ. ಮಾನವನು ಆರೋಗ್ಯದಿಂದ ಇರಲು ಬೇಕಾಗುವ ಎಲ್ಲಾ ಪೌಷ್ಠಿಕಾಂಶಗಳನ್ನು ಹಾಗೂ ಖನಿಜಾಂಶಗಳನ್ನು ಹಾಲು ಒಳಗೊಂಡಿದೆ. ಕರೆದ ಹಾಲು ಕರೆದಂತೆಯೇ ಇದ್ದರೇ, ಅದರಿಂದ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಸಹಾಯಕವಾಗುತ್ತದೆ. ಹಾಗೆಯೇ ಬಳಕೆದಾರರಿಗೆ ಆರೋಗ್ಯ ರಕ್ಷಣೆ ಒದಗಿಸುವುದರ ಜೊತೆಗೆ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯಕವಾಗುತ್ತದೆ.

ಶುದ್ಧ ಹಾಲು ಎಂದರೇನು?

ಹಾಲಿನಲ್ಲಿ ಸಹಜವಾಗಿ ಇರಬೇಕಾದ ಅಂದರೆ ಶರ್ಕರ ಪಿಷ್ಟ, ಸಾರಜನಕ, ಮೆದಸ್ಸು, ವಿಟಮಿನ್, ಲವಣಾಂಶ, ನೀರು ಇತ್ಯಾದಿ ಪೋಷಕಾಂಶಗಳನ್ನು ಹೊರತುಪಡಿಸಿ ಬೇರಾವುದೇ ತರಹದ ಬಾಹ್ಯ ವಸ್ತುಗಳು ಉದಾಹರಣೆಗೆ ಕಲ್ಮಶಗಳು, ರಾಸಾಯನಿಕ ಪದಾರ್ಥಗಳು, ಹಾನಿಕಾರಕ ಸೂಕ್ಷ್ಮ ಜೀವಿಗಳು ಇತ್ಯಾದಿ ಇರದೇ ಇದ್ದಲ್ಲಿ ಅಂತಹ ಹಾಲನ್ನು ಶುದ್ಧ ಹಾಲೆಂದು ಪರಿಗಣಿಸಬಹುದು.

ಶುದ್ಧ ಹಾಲಿನ ಉತ್ಪಾದನೆಯ ಮಹತ್ವ

  1. ಶುದ್ಧ ಹಾಲು ಬೇಗನೆ ಕೆಡುವುದಿಲ್ಲ ಮತ್ತು ಬಹಳ ಹೊತ್ತಿನವರೆಗೆ ಮೂಲ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.
  2. ಶುದ್ಧ ಹಾಲು ಉತ್ತಮ ಸಂಸ್ಕರಣೆಯ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ಅದರಿಂದ ತಯಾರಿಸುವಂತಹ ಉತ್ಪನ್ನಗಳು ಹೆಚ್ಚಿನ ಗುಣಮಟ್ಟವನ್ನು ಹೊಂದಿರುತ್ತದೆ.
  3. ಶುದ್ಧ ಹಾಲು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಶುದ್ಧ ಹಾಲು ಉತ್ಪಾದನೆಗಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.

ಶುದ್ಧ ಹಾಲಿನ ಉತ್ಪಾದನೆಯ ವಿಡಿಯೊ: Click Here For YouTube Video

Responsive image