Responsive Image

ಬೇಸಿಗೆಯಲ್ಲಿ ಹೈನುರಾಸುಗಳ ಪಾಲನೆ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಸಮಯದಲ್ಲಿ ತಾಪಮಾನ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ರೈತಬಾಂಧವರು ಜಾನುವಾರುಗಳು ಮುಖ್ಯವಾಗಿ ಆಕಳು (ಹಸು) ಮತ್ತು ಎಮ್ಮೆಗಳ ವಿಶೇಷ ಪಾಲನೆ ಮತ್ತು ಪೋಷಣೆ ಮಾಡಲೇಬೇಕಾಗುತ್ತದೆ. ಬೇಸಿಗೆಯಲ್ಲಿ ಇಳುವರಿ ಶೇ. 20-25 ರಷ್ಟು ಕಡಿಮೆಯಾಗುವ ಸಾಧ್ಯತೆಗಳಿರುವುದರಿಂದ ರೈತರಿಗೆ ಈ ಕುರಿತು ವಿಶೇಷ ಮಾಹಿತಿ ಇರಬೇಕು.

ಆಕಳು (ಹಸು) ಮತ್ತು ಎಮ್ಮೆಗಳು ಬಿಸಿರಕ್ತದ ಪ್ರಾಣಿಗಳಾಗಿರುವುದರಿಂದ ತಮ್ಮ ದೇಹದ ತಾಪಮಾನವನ್ನು ಒಂದೇ ತರಹವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ಬೇಸಿಗೆಯಲ್ಲಿ ವಾತಾವರಣದ ತಾಪಮಾನ ಹೆಚ್ಚುವುದರಿಂದ ರಾಸುಗಳಿಗೆ ತುಂಬ ಕಷ್ಟವಾಗುವದು. ಬೆವರಿನ ಮೂಲಕ ರಾಸುಗಳು ತಮ್ಮ ದೇಹವನ್ನು ತಂಪಾಗಿಸಿಕೊಳ್ಳಬಹುದು. ಆದರೆ ಎಮ್ಮೆಗಳಲ್ಲಿ ಬೆವರಿನ ಗ್ರಂಥಿಗಳು ಕಡಿಮೆಯಿರುವುದರಿಂದ ಅವುಗಳು ಬೇಸಿಗೆಯಲ್ಲಿ ಹೆಚ್ಚಿನ ಕಷ್ಟಪಡುತ್ತವೆ. ಸುಮಾರು 15 ರಿಂದ 320 ಸೆಲ್ಸಿಯಸ್‌ನಲ್ಲಿ ಎಮ್ಮೆಗಳು ಚೆನ್ನಾಗಿ ಉತ್ಪಾದಿಸುತ್ತವೆ. ಆದರೆ ತಾಪಮಾನ ಹೆಚ್ಚಿದಂತೆಲ್ಲ ಅವುಗಳ ಕ್ಷಮತೆ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ದೇಹದ ಇನ್ನೂ ಇತರ ಚಟುವಟಿಕೆಗಳಲ್ಲಿ ತುಂಬಾ ಬದಲಾವಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ:

ಇಂತಹ ಬದಲಾವಣೆ ಮತ್ತು ಸಮಸ್ಯೆಗೆ ಸ್ಪಂದಿಸಲು ಕೆಲವು ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡರೆ, ರಾಸುಗಳು ಆರೋಗ್ಯವಂತವಾಗಿದ್ದು ಹೆಚ್ಚಾಗಿ ಉತ್ಪಾದಿಸುತ್ತವೆ.

ಕೊಟ್ಟಿಗೆ ನಿರ್ವಹಣೆ :

Responsive image

ಆಹಾರ ನಿರ್ವಹಣೆ:

ಆರೋಗ್ಯ ನಿರ್ವಹಣೆ

ಈ ಎಲ್ಲ ಅಂಶಗಳು ಬೇಸಿಗೆಯ ಒತ್ತಡದಿಂದಾಗುವ ನಷ್ಟವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತವೆ. ಈ ಅಂಶಗಳನ್ನು ಪಾಲಿಸುವುದರಿಂದ ಬೇಸಿಗೆಯಲ್ಲಿ ಹೈನುರಾಸುಗಳ ಪಾಲನೆಯನ್ನು ಮಾಡುವುದಷ್ಟೆಯಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸಬಹುದು. ರೈತರು ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಹತ್ತಿರದ ಪಶುವೈದ್ಯರನ್ನು ಅಥವಾ ಪಶುವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Responsive image