Responsive Image

ಕೊಟ್ಟಿಗೆ ರಚನೆ ಮತ್ತು ಪ್ರಕಾರಗಳು

ಪಾಲನೆ ವ್ಯವಸ್ಥೆಗಳು

ವಸತಿ ನಿರ್ವಹಣೆ

ಉತ್ತಮ ಆರೋಗ್ಯಕರವಾದ ಮತ್ತು ಸೌಕರ್ಯವಿರುವ ಹಾಗೂ ಹವಾಮಾನ ಬದಲಾವಣೆಯಿಂದ ರಕ್ಷಣೆ ನೀಡುವಂತಹ ಕೊಟ್ಟಿಗೆಯಿದ್ದರೆ ರಾಸುಗಳು ಚೆನ್ನಾಗಿ ಹೊಂದಿಕೊಂಡು ಗರಿಷ್ಠ ಪ್ರಮಾಣದಲ್ಲಿ ಹಾಲು ಕರೆಯಲು ಸಾಧ್ಯವಾಗುತ್ತದೆ. ಕೊಟ್ಟಿಗೆಗಾಗಿ ಹೆಚ್ಚು ಖರ್ಚು ಮಾಡದೇ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳನ್ನು ಉಪಯೋಗಿಸಿ ನಿರ್ಮಾಣ ಮಾಡಬಹುದು.

Responsive image

ಕೊಟ್ಟಿಗೆ ನಿರ್ಮಾಣ ಮತ್ತು ನಿರ್ವಹಣೆ

  1. ಕೊಟ್ಟಿಗೆಯಲ್ಲಿ ರಾಸುವಿನಿಂದ ರಾಸುವಿಗೆ 3 ½-4 ಅಡಿ ಅಂತರವಿರಬೇಕು.
  2. ರಾಸು ನಿಲ್ಲುವ ಜಾಗ 6 ರಿಂದ 6 1/2 ಅಡಿ ಉದ್ದವಿರಬೇಕು.
  3. ಗಂಜಲ ಕಾಲುವೆ ಅಗಲ 2 ಅಡಿ ಹಾಗೂ ಮೇವಿನ ದೋಣಿ 2 ಅಡಿ ಇರಬೇಕು.
  4. ಚಲನ ಜಾಗ 4 ಅಡಿ ಇರಬೇಕು.
  5. ಕೊಟ್ಟಿಗೆಯ ವೆಂಟಿಲೇಷನ್ ಶೇ. 35 ಇರಬೇಕು.
  6. ಕೊಟ್ಟಿಗೆಯ ನೆಲ ಜಾರದಂತೆ ಕಲ್ಲಿನ ಚಪ್ಪಡಿ / ಕಾಂಕ್ರಿಟ್‌ನಿಂದ ಮಾಡಿರಬೇಕು.
  7. ಕೊಟ್ಟಿಗೆ ಯಾವಾಗಲೂ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ್ದಾಗಿರಬೇಕು ಹಾಗೂ ಸ್ವಚ್ಛವಾಗಿರಬೇಕು.
  8. ಗಂಜಲ, ಕೊಟ್ಟಿಗೆಯಿಂದ ಸುಮಾರು 20 ಅಡಿ ದೂರದವರೆಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು.
  9. ಪ್ರತಿದಿನ ನೀರಿನಿಂದ ಸ್ವಚ್ಛಗೊಳಿಸಬೇಕು.
  10. ಸಗಣಿಯನ್ನು ಕೊಟ್ಟಿಗೆಯಿಂದ ತಕ್ಷಣವೇ ದೂರ ಹಾಕಬೇಕು.
  11. ಕೊಟ್ಟಿಗೆಯ ಸುತ್ತ ಆಗಿಂದಾಗ್ಗೆ ಸೊಳ್ಳೆ, ನೊಣ ಬಾರದಂತೆ ಕ್ರಿಮಿನಾಶಕ ಸಿಂಪಡಿಸುತ್ತಿರಬೇಕು.
  12. ಕೊಟ್ಟಿಗೆಯ ನೆಲ, ಗೋಡೆ, ಮೇವಿನ ದವಣಿ ಮುಂತಾದವುಗಳಿಗೆ ವರ್ಷಕ್ಕೊಮ್ಮೆ ಸುಣ್ಣ ಹೊಡಿಸಬೇಕು.
  13. ಕೊಟ್ಟಿಗೆಯ ನೆಲ, ಗಂಜಲ ಕಾಲುವೆ ಕಡೆ 1-1 1/2 ಇಂಚು ಇಳಿಜಾರು ಮಾಡಬೇಕು.
  14. ಒಂದು ಹಸುವಿಗೆ 65-70 ಚದರಡಿ ಜಾಗ ಬೇಕಾಗುತ್ತದೆ.
  15. ಸ್ವಚ್ಛವಾದ ಕೊಟ್ಟಿಗೆಯಿಂದ ಕೆಚ್ಚಲು ಬಾವು ನಿಯಂತ್ರಿಸಲು ಸಾಧ್ಯ.

ಕೊಟ್ಟಿಗೆಯ ಪ್ರಕಾರಗಳು

ದನದ ಕೊಟ್ಟಿಗೆಯನ್ನು ಮುಖ್ಯವಾಗಿ ಎರಡು ಪದ್ದತಿಯಲ್ಲಿ ಅಳವಡಿಸಬಹುದು.

1. ಸಾಂಪ್ರದಾಯಿಕ ಕೊಟ್ಟಿಗೆ (ಮನೆಯಲ್ಲಿ ಕಟ್ಟುವ ಪದ್ದತಿ):

ಅನುಕೂಲಗಳು

ಅನಾನುಕೂಲಗಳು

ಏಕ ಸಾಲು ವ್ಯವಸ್ಥೆ:

ಒಂದೇ ಸಾಲು ವ್ಯವಸ್ಥೆಯಲ್ಲಿ, 12-16 ಸಂಖ್ಯೆಯ ಪ್ರಾಣಿಗಳನ್ನು ಸಾಕಬಹುದು.

ಎರಡು ಸಾಲು ವ್ಯವಸ್ಥೆ/ಕೊಟ್ಟಿಗೆ:

1. ಬಾಲ-ಬಾಲ ಪದ್ದತಿ:

2. ಮುಖಾ-ಮುಖಿ/ ತಲೆ-ತಲೆ ಪದ್ದತಿ

ಅನಾನುಕೂಲಗಳು

Responsive image
ಮುಖಾ - ಮುಖಿ ಪದ್ಧತಿ
Responsive image
ಬಾಲಕ್ಕೆ - ಬಾಲ ಪದ್ಧತಿ

2. ತೆರೆದ ಕೊಟ್ಟಿಗೆ (ಬಂಧನ ಮುಕ್ತ ಪದ್ದತಿ) :

Responsive image

ವಿವಿಧ ವರ್ಗದ ಡೈರಿ ಪ್ರಾಣಿಗಳಿಗೆ ನೆಲದ ಜಾಗ (ಚದರ ಮೀ) (ಬಿಐಎಸ್ ಮಾನದಂಡಗಳು)

Responsive image

ಡೈರಿ ಫಾರ್ಮ್‌/ಘಟಕದಲ್ಲಿರುವ ಇತರ ಶೆಡ್‌ಗಳು

ಹಾಲು ಕರೆಯುವ ಕೊಟ್ಟಿಗೆ / ಹಾಲಿನ ಪಾರ್ಲರ್

ಡೌನ್ ಕ್ಯಾಲ್ವರ್ ಶೆಡ್/ಕರು ಹಾಕುವ ಪೆನ್

ಕರುವಿನ ಪೆನ್/ಕೊಠಡಿ

ಮಣಕಗಳ/ಆಕಳುಗಳ ಶೆಡ್

ಬುಲ್ ಶೆಡ್/ ಹೋರಿ ಕೊಠಡಿ

ಐಸೋಲೇಷನ್ ಶೆಡ್

ಕ್ವಾರಂಟೈನ್ ಶೆಡ್