Responsive Image

ಹೈನುರಾಸು ಮತ್ತು ಎಮ್ಮೆಗಳ ತಳಿಗಳು

ಹೈನುರಾಸು ಮತ್ತು ಎಮ್ಮೆಗಳ ತಳಿಗಳು

ಸರಿಯಾದ ತಳಿಯನ್ನು ಆರಿಸುವುದು

ಭಾರತದಲ್ಲಿ ಹಾಲು ಉತ್ಪಾದನೆಗೆ ಪ್ರಸಿದ್ಧವಾದ ಕೆಲವು ಹೈನು ತಳಿಗಳಿವೆ. ಹೊರದೇಶದ ಹೈನು ತಳಿಗಳಿಗೆ ಹೋಲಿಸಿದರೆ ನಮ್ಮ ದೇಶದ ತಳಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಮತ್ತು ಇವುಗಳು ಹೊರಪರಾವಲಂಬಿ ಹಾಗೂ ಒಳಪರಾವಲಂಬಿ ಜೀವಿಗಳಿಂದಾಗುವ ತೊಂದರೆಯನ್ನು ಹೆಚ್ಚು ತಡೆದುಕೊಳ್ಳುತ್ತವೆ.

ಹೈನುರಾಸು ತಳಿಗಳನ್ನು ಪ್ರಮುಖವಾಗಿ 3 ಗುಂಪುಗಳಾಗಿ ವಿಂಗಡಿಸಲಾಗಿದೆ.

  1. ದೇಶಿಯ ತಳಿಗಳು
  2. ವಿದೇಶಿಯ ತಳಿಗಳು
  3. ಮಿಶ್ರ ತಳಿಗಳು

ದೇಶಿಯ ತಳಿಗಳು:

ವಿದೇಶಿಯ ತಳಿಗಳು:

ಮಿಶ್ರ ತಳಿಗಳು:

ಜವಾರಿ/ದೇಶಿ ಆಕಳ ತಳಿಗಳನ್ನು ಮಿಶ್ರತಳಿಗೊಳಿಸುವುದು:

ಎರಡು ಅಥವಾ ಹೆಚ್ಚು ಶುದ್ಧ ತಳಿಗಳ ಸಂಕರಣದಿಂದ ಹುಟ್ಟಿದ ಪೀಳಿಗೆಗೆ ಮಿಶ್ರ ತಳಿ ಹಸು ಎನ್ನುವರು. ನಮ್ಮ ಜವಾರಿ ಹಸುಗಳ ಹಾಲಿನ ಉತ್ಪಾದನಾ ಸಾಮರ್ಥ್ಯ ಬಹಳ ಕಡಿಮೆ ಇರುವುದು. ಆದ್ದರಿಂದ, ಜವಾರಿ ಆಕಳುಗಳ ಹಾಲು ಕೊಡುವ ಸಾಮರ್ಥ್ಯವನ್ನು ಹೆಚ್ಚಿಸಲು, ಅಧಿಕ ಹಾಲು ಉತ್ಪಾದನೆಗೆ ಹೆಸರಾದಂಥ ವಿದೇಶಿ ತಳಿಗಳಾದ ಜರ್ಸಿ ಮತ್ತು ಹೋಲಸ್ಟಿನ್ ಫ್ರೀಜಿಯನ್ ತಳಿಯ ಹೋರಿಗಳ ವೀರ್ಯವನ್ನು ಕೃತಕ ಗರ್ಭಧಾರಣೆ ಮೂಲಕ ಮಿಶ್ರ ತಳಿ ಕರುಗಳನ್ನು ಪಡೆಯಲಾಗುತ್ತದೆ.

ಮಿಶ್ರ ತಳಿಗಳ ವಿಶೇಷ ಗುಣಗಳು:

  1. ಕರುವಿನ ಬೆಳವಣಿಗೆ ಶೀಘ್ರವಾಗುತ್ತದೆ.
  2. ಕರುವಿನ ಹುಟ್ಟು ತೂಕ ಹೆಚ್ಚಿರುತ್ತದೆ.
  3. ಮಣಕಗಳು ಸುಮಾರು 12-18 ತಿಂಗಳಲ್ಲಿ ಬೆದೆಗೆ ಬಂದು ಕಟ್ಟುತ್ತವೆ.
  4. ಸರಾಸರಿ 24 ತಿಂಗಳ ವಯಸ್ಸಿಗೆ ಕರು ಹಾಕುತ್ತವೆ (ಈಯುತ್ತವೆ).
  5. ಮಿಶ್ರ ತಳಿ ಹಸುಗಳು ಪ್ರತಿ 12-15 ತಿಂಗಳಿಗೊಮ್ಮೆ ಕರು ಹಾಕುತ್ತವೆ.
  6. ಹಸುಗಳು ಹೆಚ್ಚು ಹಾಲುಕೊಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.
  7. ಸರಾಸರಿ 2 ವರ್ಷ ವಯಸ್ಸಿನಿಂದ 14 ವರ್ಷ ವಯಸ್ಸಿನವರೆಗೆ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ. ಈ 12 ವರ್ಷ ಉತ್ಪಾದನಾ ಅವಧಿಯಲ್ಲಿ ಒಂದು ರಾಸು ಸುಮಾರು ೦8 ಕರುಗಳನ್ನು ಈಯುತ್ತದೆ.
  8. ಹಾಲು ಹಿಂಡುವ ಹಸುಗಳಲ್ಲಿ ಗರ್ಭ ಧರಿಸಿದ ಮೇಲೆ ಹಾಲಿನ ಪ್ರಮಾಣ ಜವಾರಿ ಹಸುಗಳಂತೆ ಒಮ್ಮೆಯೇ ಕಡಿಮೆ ಆಗುವುದಿಲ್ಲ.
  9. ಸೂಲಿನ ಅವಧಿ ಸುಮಾರು 10 ತಿಂಗಳಿರುತ್ತದೆ.
  10. ಕರು ಹಾಕಿದ ನಂತರ 45-90 ದಿನಗಳಲ್ಲಿ ಮತ್ತೆ ಬೆದೆಗೆ ಬರುತ್ತವೆ.
  11. ಹಸುಗಳು ತಮ್ಮ ಜೀವಿತ ಅವಧಿಯಲ್ಲಿ ಹೆಚ್ಚು ಕರುಗಳನ್ನು ಹಾಗೂ ಹೆಚ್ಚು ಹಾಲನ್ನು ಕೊಡುತ್ತವೆ.
  12. ವಿದೇಶಿ ತಳಿಗಳಿಗಿಂತ ಮಿಶ್ರ ತಳಿಗಳು ನಮ್ಮ ದೇಶದ ಹವಾಮಾನಕ್ಕೆ ಬೇಗ ಹೊಂದಿಕೊಳ್ಳುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇರುತ್ತದೆ.
  13. ಮಿಶ್ರತಳಿ ಹೋರಿಗಳನ್ನು ಕಸಿ ಮಾಡಿ ಕೃಷಿ ಕೆಲಸಗಳಿಗೆ ಜವಾರಿ ಎತ್ತಿನಂತೆ ಉಪಯೋಗಿಸಬಹುದು.
  14. ರಾಸುಗಳು ಹೆಚ್ಚು ಹಾಲು ಕರೆಯುವ ಶಕ್ತಿ ಹೊಂದಿರುತ್ತವೆ. ರಾಸುಗಳು ಹೆಚ್ಚು ಮೇವು ತಿಂದು ಜೀರ್ಣಿಸಿಕೊಳ್ಳುತ್ತವೆ.
  15. ನಮ್ಮ ಕೃಷಿ ಸಂಪನ್ಮೂಲಗಳಿಗೆ ಹೊಂದಿಕೊಳ್ಳುವಂತೆ ಸಾಕಷ್ಟು ಚೈತನ್ಯ ಪಡೆದಿರುತ್ತವೆ. ಉಷ್ಣವಲಯದ ಉಷ್ಣತೆ ಮತ್ತು ರೋಗಗಳನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಸಾಕಷ್ಟು ಉಳಿದಿರುತ್ತದೆ.
Responsive image

ಆಕಳಿನ ತಳಿಗಳು:

ಹೈನು ತಳಿಗಳು

ಗಿರ್ :

Responsive image

ಕೆಂಪು ಸಿಂಧಿ:

Responsive image

ಸಾಹಿವಾಲ್‌ :

Responsive image

ರಾಥಿ:

Responsive image

ಶ್ವೇತಾ ಕಪಿಲಾ:

Responsive image

ಕರಡು ತಳಿಗಳು/ ಕೃಷಿಗಾಗಿ ಪ್ರಾಮುಖ್ಯ

ಹಳ್ಳಿಕಾರ್:

Responsive image

ಅಮೃತಮಹಲ್‌ ( ದೊಡ್ಡ ದನ, ಜವಾರಿ ದನ):

Responsive image

ಖಿಲ್ಲಾರಿ (ಮಂದೇಶಿ, ಶಿಕಾರಿ, ತಿಲ್ಲರ್):

Responsive image

ಕಂಗಾಯಂ:

ಬರಗೂರು

ಅಂಬ್ಲಚೇರಿ:

ಪುಲಿಕುಲಂ:

ಈ ಉದ್ದೇಶದ ಭಾರತದಲ್ಲಿನ ಇನ್ನೀತರ ತಳಿಗಳು
ತಳಿ ಸಂತಾನೋತ್ಪತ್ತಿಯ ಪ್ರದೇಶ ಪ್ರಮುಖ ವೈಶಿಷ್ಟ್ಯಗಳು
ಬಚೌರ್ (ಭುಟಿಯಾ) ಬಿಹಾರ ಕಳಪೆ ಮೇವಿನ ಸಂಪನ್ಮೂಲಗಳ ಮೇಲೆ ಅಭಿವೃದ್ಧಿ ಹೊಂದುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ಡಾಗ್ರಿ (ಗುಜರಾತ್ ಮಾಲ್ವಿ) ಗುಜರಾತ್ ಮುಖ್ಯವಾಗಿ ಉಳುಮೆ ಮಾಡಲು ಉಪಯೋಗಿಸಬಹುದು. ಕಡಿಮೆ ಹಾಲು ಉತ್ಪಾದನೆ.
ಘುಮುಸರಿ ಒಡಿಶಾ ಈ ಎತ್ತುಗಳ ಸಾಮರ್ಥ್ಯವು ಸ್ಥಳೀಯ ಪ್ರದೇಶದಲ್ಲಿರುವ ಇತರ ರೀತಿಯ ಎತ್ತುಗಳಿಗಿಂತ ಉತ್ತಮವಾಗಿದೆ.
ಕಂಗಾಯಂ (ಕಂಗನಾಡ್, ಕೊಂಗು) ತಮಿಳುನಾಡು ಈ ಹೋರಿಗಳ ಸಾಗಾಣಿಕೆ ಸಾಮರ್ಥ್ಯವು ಹೆಚ್ಚಾಗಿರುವುದರಿಂದ ಈ ತಳಿಯು ಸಕ್ಕರೆ ಕಾರ್ಖಾನೆಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಮಾಲೀಕರ ಜೀವನಾಧಾರವಾಗಿದೆ.
ಕೆಂಕಥಾ (ಕೆನ್ವಾರಿಯಾ) ಉತ್ತರ ಪ್ರದೇಶ, ಮಧ್ಯಪ್ರದೇಶ ಕಳಪೆ ಆಹಾರ ಮತ್ತು ಮೇವಿನ ಸಂಪನ್ಮೂಲಗಳಿಂದ ಅಭಿವೃದ್ಧಿ ಹೊಂದುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ರಸ್ತೆಯ ಮೇಲೆ ಮತ್ತು ಕೃಷಿಯಲ್ಲಿ ಬಹಳ ಜನಪ್ರಿಯವಾಗಿವೆ.
ಖೇರಿಗಢ್ (ಖೇರಿ, ಖರಿಗರ್, ಖಾರಿ) ಉತ್ತರ ಪ್ರದೇಶ ಪ್ರಾಣಿಗಳು ರೋಗಗಳಿಗೆ ನಿರೋಧಕವಾಗಿರುತ್ತವೆ ಮತ್ತು ತುಂಬಾ ವೇಗವಾಗಿ ಓಡುತ್ತವೆ. ಇವುಗಳ ಚಿಕಿತ್ಸೆಯ ವೆಚ್ಚವು ಬಹುತೇಕ ಶೂನ್ಯವಾಗಿರುತ್ತದೆ.
ಮಾಲ್ವಿ (ಮಹದೇವ್ ಪುರಿ, ಮಂಥನಿ) ಮಧ್ಯ ಪ್ರದೇಶ ತ್ವರಿತ ಸಾರಿಗೆ, ಸಹಿಷ್ಣುತೆ ಮತ್ತು ಕಚ್ಚಾ ರಸ್ತೆಗಳಲ್ಲಿ ಭಾರವಾದ ಹೊರೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮೇವಾಟಿ (ಕೋಸಿ ಮತ್ತು ಮೆಹ್ವತಿ) ಹರಿಯಾಣ, ರಾಜಸ್ಥಾನ & ಉತ್ತರ ಪ್ರದೇಶ ಶಕ್ತಿಯುತ ಮತ್ತು ವಿಧೇಯವಾಗಿದ್ದು, ಭಾರವಾದ ಉಳುಮೆ, ಬಂಡಿ ಮತ್ತು ಆಳವಾದ ಬಾವಿಗಳಿಂದ ನೀರನ್ನು ಸೆಳೆಯಲು ಉಪಯುಕ್ತವಾಗಿವೆ.
ನಾಗೋರಿ ರಾಜಸ್ಥಾನ ಆಳವಾದ ಮರಳಿನಲ್ಲಿ ಭಾರೀ ಕೆಲಸ ಮಾಡಲು ಸಮರ್ಥವಾಗಿದೆ.
ನಿಮಾರಿ (ಖರ್ಗಾಂವ್, ಖರ್ಗೋನಿ, ಖುರ್ಗೋನಿ) ಮಧ್ಯಪ್ರದೇಶ ಎಲ್ಲಾ ಕೃಷಿ ಕಾರ್ಯಾಚರಣೆಗಳಿಗೆ ಮತ್ತು ಸಾರಿಗೆಗಾಗಿ ಬಳಸಲಾಗುತ್ತದೆ
ಪೊನ್ವಾರ್ (ಪೂರ್ಣೆಯಾ) ಉತ್ತರ ಪ್ರದೇಶ ಪರಸ್ಪರ ಗುಂಪುಗಳಲ್ಲಿ ಚಲಿಸುತ್ತವೆ. ಅರೆ-ಕಾಡು ಜಾತಿಯ ಪ್ರಾಣಿಗಳಂತೆ ವರ್ತಿಸುತ್ತವೆ ಮತ್ತು ಅವುಗಳನ್ನು ನಿಭಾಯಿಸುವುದು ತುಂಬಾ ಕಷ್ಟ.
ಪುಲಿಕುಲಂ (ಪಲಿಂಗು ಮಾಡು, ಮಣಿ ಮಾಡು, ಜಲ್ಲಿಕಟ್ಟು ಮಾಡು) ತಮಿಳುನಾಡು ಪುಲಿಕುಲಂ ಜಾನುವಾರುಗಳನ್ನು ಸವಾರಿ ಸ್ಪರ್ಧೆಗಳಿಗೆ (ಜಲ್ಲಿಕಟ್ಟು) ತರಬೇತಿ ನೀಡಲಾಗುತ್ತದೆ, ಇದು ಬಹಳ ಜನಪ್ರಿಯ ಆಟವಾಗಿದೆ. ಕುರಿಗಾಹಿಗಳ ಅವಶ್ಯಕತೆಗಳನ್ನು ಪೂರೈಸಲು ಒಂದು ಹಿಂಡಿನಲ್ಲಿ 10-15 ಹಸುಗಳಲ್ಲಿ ಮಾತ್ರ ಹಾಲುಕರೆಯಲಾಗುತ್ತದೆ.
ರೆಡ್ (ಕೆಂಪು) ಕಂಧಾರಿ (ಲಖಲ್‌ಬುಂಡವಿ) ಮಹಾರಾಷ್ಟ್ರ ಎತ್ತುಗಳನ್ನು ಭಾರವಾದ ಕೆಲಸಕ್ಕೆ ಬಳಸಲಾಗುತ್ತದೆ.
ಸಿರಿ ಪಶ್ಚಿಮ ಬಂಗಾಳ, ಸಿಕ್ಕಿಂ ಎತ್ತುಗಳು ಬರಗಾಲದ ಶಕ್ತಿಯ ಏಕೈಕ ಮೂಲವಾಗಿದೆ.
ತುಥೋ (ಅಮೇಶಿ, ಶಿಯಾಪಿ, ಚೋಕ್ರು, ತ್ಸೆಸೊ) ನಾಗಾಲ್ಯಾಂಡ್ ಗುಡ್ಡಗಾಡು ಪ್ರದೇಶಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ಮಳೆಯ ಸಮಯದಲ್ಲಿಯೂ ಬೆಟ್ಟದ ಇಳಿಜಾರುಗಳಲ್ಲಿ ಮೇಯುತ್ತವೆ.

ದ್ವೀ- ಉದ್ದೇಶಿತ ತಳಿಗಳು:

ತಾಪಾ೯ರಕರ್‌ :

Responsive image

ಹರಿಯಾಣ:

ಕಾಂಕ್ರೇಜ್‌ :

ಒಂಗೋಲ್‌ :

ಕೃಷ್ಣ ಕಣಿವೆ :

ದೇವಣಿ :

Responsive image ದ್ವಿಉದ್ದೇಶಿತ ಭಾರತದಲ್ಲಿನ ಇನ್ನೀತರ ತಳಿಗಳು
ತಳಿ ಸಂತಾನೋತ್ಪತ್ತಿಯ ಪ್ರದೇಶ ಪ್ರಮುಖ ವೈಶಿಷ್ಟ್ಯಗಳು
ಲಡಾಖಿ ಜಮ್ಮು ಮತ್ತು ಕಾಶ್ಮೀರ ತೀವ್ರ ಹವಾಮಾನ ಪರಿಸ್ಥಿತಿಗಳು, ಕಳಪೆ ಗುಣಮಟ್ಟದ ಮೇವಿನ ಮೇಲೆ ಜೀವನೋಪಾಯ ಮತ್ತು ನೀರಿನ ಕಡಿಮೆ ಲಭ್ಯತೆಯ ಹೊರತಾಗಿಯೂ, ಇದು ದಿನಕ್ಕೆ ಸುಮಾರು 2 ರಿಂದ 5 ಕೆಜಿ ಹಾಲು ಉತ್ಪಾದಿಸುತ್ತದೆ
ಬದ್ರಿ (ಪಹಾಡಿ) ಉತ್ತರಾಖಂಡ್ ಗುಡ್ಡಗಾಡು ಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನಡೆಯುವಾಗ ಸಮತೋಲಿತ ನಡಿಗೆ.
ಬೇಲಾಹಿ (ಮೋರ್ನಿ) ಹರಿಯಾಣ ಮತ್ತು ಚಂಡೀಗಢ ಲಂಗಾರಿಯಾಗಳು ಎಂದು ಕರೆಯಲ್ಪಡುವ ಗುಜ್ಜರ್‌ ಸಮಾಜದವರು ತಲೆಮಾರುಗಳಿಂದ ಈ ತಳಿಯನ್ನು ನಿರ್ವಹಿಸುತ್ತಿದ್ದಾರೆ.
ಬಿಂಜಾರಪುರಿ ಒರಿಸ್ಸಾ ಹಾಲು, ಡ್ರಾಫ್ಟ್ (ಕೃಷಿ) ಮತ್ತು ಗೊಬ್ಬರಕ್ಕಾಗಿ ಬಳಸಲಾಗುತ್ತದೆ
ಡಂಗಿ (ಕಂದಡಿ) ಮಹಾರಾಷ್ಟ್ರ ಮತ್ತು ಗುಜರಾತ್ ಈ ತಳಿಯು ಭಾರೀ ಮಳೆಯ ಪ್ರದೇಶಗಳು, ಭತ್ತದ ಗದ್ದೆಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಅತ್ಯುತ್ತಮವಾದ ಕೆಲಸದ ಗುಣಗಳಿಗೆ ಹೆಸರುವಾಸಿಯಾಗಿದೆ.
ಗಂಗಾತಿರಿ (ಪೂರ್ವ ಹರಿಯಾಣ/ಶಹಾಬಾದಿ) ಉತ್ತರ ಪ್ರದೇಶ ಮತ್ತು ಬಿಹಾರ ಮಧ್ಯಮ ಹಾಲು ಉತ್ಪಾದಕ ಮತ್ತು ಉತ್ತಮ ಡ್ರಾಫ್ಟ್ (ಕೃಷಿ ಕೆಲಸ) ಸಾಮರ್ಥ್ಯವನ್ನು ಹೊಂದಿದೆ
ಗಾವೊಲಾವ್ (ಅರ್ವಿ, ಗೌಲ್ಗನಿ) ಮಧ್ಯಪ್ರದೇಶ ಇದು ಗುಡ್ಡಗಾಡು ಪ್ರದೇಶಗಳಲ್ಲಿ ತ್ವರಿತ ಸಾಗಣೆಗೆ ಸೂಕ್ತವಾಗಿದೆ.
ಹಿಮಾಚಲಿ ಪಹಾರಿ (ಗೌರಿ, ಹಿಮಧೇನು) ಹಿಮಾಚಲ ಪ್ರದೇಶ ಮಧ್ಯಮ ಡ್ರಾಫ್ಟ್ ಕಾರ್ಯಕ್ಷಮತೆ, ಕಿರಿದಾದ, ಜಡ, ಅಲೆಅಲೆಯಾದ, ಬೆಟ್ಟದ ಪ್ರದೇಶದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.
ಖರಿಯಾರ್ ಒಡಿಶಾ ಮೂಲತಃ ಡ್ರಾಫ್ಟ್ / ಕೃಷಿ ಕೆಲಸಕ್ಕೆ ಬಳಸುವ ತಳಿ
ಕೊಂಕಣ ಕಪಿಲ (ಕೊಂಕಣ ಗಿಡ್ಡ) ಮಹಾರಾಷ್ಟ್ರ ಕಡಿಮೆ ಹಾಲು ಉತ್ಪಾದಕ ಮತ್ತು ಗುಡ್ಡಗಾಡು ಪ್ರದೇಶ ಮತ್ತು ಬಿಸಿ ಮತ್ತು ಆರ್ದ್ರ ವಾತಾವರಣಕ್ಕೆ ಸೂಕ್ತವಾದ ಉತ್ತಮ ಡ್ರಾಫ್ಟ್ (ಕೃಷಿ ಕೆಲಸದ) ಸಾಮರ್ಥ್ಯವನ್ನು ಹೊಂದಿರುತ್ತದೆ
ಕೊಸಾಲಿ ಛತ್ತೀಸ್‌ಗಢ ಈ ತಳಿಯ ಎತ್ತುಗಳು ಬಿತ್ತನೆಯ ನಂತರ ಭತ್ತದ ಗದ್ದೆ ಕಾರ್ಯಾಚರಣೆಗೆ (ಬೀಶಿ) ಬಹಳ ಪರಿಣಾಮಕಾರಿ.
ಲಖಿಮಿ ಆಸ್ಸಾಂ ಎತ್ತುಗಳು ವಿಶೇಷವಾಗಿ ಕೆಸರು ಗದ್ದೆಗಳಲ್ಲಿ ಭತ್ತದ ಕೃಷಿಗಾಗಿ ಬಂಡಿ ಸಾಗಿಸಲು ಮತ್ತು ಉಳುಮೆ ಮಾಡಲು ಅತ್ಯುತ್ತಮ ಡ್ರಾಫ್ಟ್ ತಳಿಗಳಾಗಿವೆ. ಲಖಿಮಿ ದನಗಳು ಉತ್ಪಾದಿಸುವ ಹಾಲು ಕೊಬ್ಬಿನಿಂದ ಸಮೃದ್ಧವಾಗಿದೆ ಹಾಗೂ ಇದಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ.
ಮಲ್ನಾಡ್ ಗಿಡ್ಡ (ಗಿದ್ದ, ಉರದನ ವರ್ಷಗಂಧಿ) ಕರ್ನಾಟಕ ಕಡಿಮೆ ಇನ್ಪುಟ್/ಖಚು೯ ಕಡಿಮೆ ಉತ್ಪಾದನಾ ವ್ಯವಸ್ಥೆಯಲ್ಲಿ ಸಾಕಬಹುದಾಗಿದೆ. ಎಲೈಟ್/ಒಳ್ಳೆಯ ಹಸು ಸಣ್ಣ ದೇಹದ ಗಾತ್ರದ ಹೊರತಾಗಿಯೂ ದಿನಕ್ಕೆ 3-5 ಕೆಜಿ ಹಾಲು ನೀಡುತ್ತದೆ. ಈ ಪ್ರಾಣಿಗಳು ಭಾರೀ ಮಳೆಯ ಪರಿಸ್ಥಿತಿಗಳು ಸೇರಿದಂತೆ ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಹೆಚ್ಚು ಹೊಂದಿಕೊಳ್ಳುತ್ತವೆ.
ಮೋಟು ಒಡಿಶಾ ಕೋಯಾ ಬುಡಕಟ್ಟು ಜನಾಂಗದವರಲ್ಲಿ ಈ ದನಗಳ ಪಾಲನೆಯಿಂದ ಸಗಣಿ ಪ್ರಮುಖ ಉತ್ಪನ್ನವೆಂದು ಪರಿಗಣಿಸಲಾಗಿದೆ.
ನಾರಿ (ಸಿರೋಹಿ) ಗುಜರಾತ್ ಮತ್ತು ರಾಜಸ್ಥಾನ ಹಾಲು ಇಳುವರಿ ಮಧ್ಯಮವಾಗಿದೆ. ಬಯಲು ಮತ್ತು ಗುಡ್ಡಗಾಡು ಅರಣ್ಯ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ಅತ್ಯುತ್ತಮ ಡ್ರಾಫ್ಟ್ ಪವರ್/ ಶಕ್ತಿ ಹೊಂದಿದೆ.
ಪೋಡಾ ತುರ್ಪು ತೆಲಂಗಾಣ ಒಣಭೂಮಿ ಮತ್ತು ಜೌಗು ಪ್ರದೇಶದ ಕೃಷಿಯಲ್ಲಿ ಎತ್ತುಗಳಿಗೆ ಆದ್ಯತೆ ನೀಡಲಾಗುತ್ತದೆ. ಸಹಿಷ್ಣುತೆ, ವೇಗ ಮತ್ತು ತ್ರಾಣದ ವಿಷಯದಲ್ಲಿ ಅತ್ಯುತ್ತಮ ಡ್ರಾಫ್ಟ್ ಪವರ್/ ಶಕ್ತಿ ಹೊಂದಿದೆ.
ಪುಂಗನೂರು ಆಂಧ್ರಪ್ರದೇಶ ಕುಬ್ಜ ದನಗಳು, ಈ ಪ್ರಾಣಿಗಳನ್ನು ಹಗುರವಾದ ಮಣ್ಣಿನಲ್ಲಿ ಕೃಷಿ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಎತ್ತುಗಳನ್ನು ಟಾಂಗಾಗಳಂತಹ ಬಂಡಿಗಳಿಗೆ ಮತ್ತು ವಿಶೇಷ ರೇಸ್‌ಗಳಿಗೆ ಬಳಸಲಾಗುತ್ತದೆ. ಇತ್ತೀಚಿಗೆ ಇವುಗಳನ್ನು ಕಡಿಮೆ ಪ್ರದೇಶಗಳಲ್ಲಿಯೂ ಸಾಕಲಾಗುತ್ತಿದೆ.
ವೆಚೂರ್ ಕೇರಳ ಇದರಲ್ಲಿ ಹಾಲು ಉತ್ಪಾದನೆ ತುಲನಾತ್ಮಕವಾಗಿ ಹೆಚ್ಚಾಗಿದೆ

ವಿದೇಶಿಯ ತಳಿಗಳು:

ಜಸಿ೯:

Responsive image

ಹೋಲ್ಸ್ಟೈನ್‌ ಫ್ರೈಸಿಯನ್‌ :

Responsive image

ಬ್ರೌನ್‌ ಸ್ವಿಸ್‌ :

ರೆಡ್‌ ಡೇನ್‌ :

ಆಯರ್ಶೈರ್:

ಗುನ೯ಸಿ:

ಎಮ್ಮೆಯ ತಳಿಗಳು:

ಸೂರ್ತಿ:

Responsive image

ಮುರ್ರಾ:

Responsive image

ಪಂಡರಾಪುರಿ:

Responsive image

ಧಾರವಾರಿ (ಮಂಡರಗಿ, ಹೊಳೆಸಾಲ್):

Responsive image

ನಿಲಿ ರವಿ:

ಭದಾವರಿ:

ಜಾಫರಾಬಾದಿ :

Responsive image

ಮೆಹಸಾನಾ:

ನಾಗಪುರಿ :

ಗೋದಾವರಿ :

ತಳಿ ಸಂತಾನೋತ್ಪತ್ತಿಯ ಪ್ರದೇಶ ಪ್ರಮುಖ ವೈಶಿಷ್ಟ್ಯಗಳು
ಮರಾಠವಾಡಿ (ಎಲಿಚ್‌ಪುರಿ, ದುಧಾನ ಥಾಡಿ) ಮಹಾರಾಷ್ಟ್ರ ಕೊಂಬಿನ ಉದ್ದವು ಈ ಎಮ್ಮೆಗಳನ್ನು ಪಂಢರಪುರಿ ಎಮ್ಮೆಗಳಿಂದ ಪ್ರತ್ಯೇಕಿಸುತ್ತದೆ.
ಬನ್ನಿ (ಕಚ್ಚಿ ಮತ್ತು ಕುಂಡಿ) ಗುಜರಾತ್ ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಮತ್ತು ಸಾಂಪ್ರದಾಯಿಕ ವ್ಯಾಪಕವಾದ ರಾತ್ರಿ ಮೇಯಿಸುವ ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ.
ಚಿಲಿಕಾ (ದೇಶಿ) ಒರಿಸ್ಸಾ ಈ ಎಮ್ಮೆಗಳ ಹಾಲು ಮತ್ತು ಮೊಸರು ಉತ್ತಮ ರುಚಿ ಮತ್ತು ಸಂರಕ್ಷಣಾ ಗುಣಮಟ್ಟವನ್ನು ಹೊಂದಿರುತ್ತದೆ (ಮೊಸರನ್ನು ಕೋಣೆಯ ಉಷ್ಣಾಂಶದಲ್ಲಿ 5-7 ದಿನಗಳವರೆಗೆ).
ಕಾಲಾಹಂಡಿ ಒರಿಸ್ಸಾ ಸಾಮಾನ್ಯವಾಗಿ ಬೆಳಿಗ್ಗೆ ಹೊರಗಡೆ ಬಿಡಲಾಗುತ್ತದೆ. ಕಾಡು, ಗುಡ್ಡಗಳು, ರಸ್ತೆಬದಿಯ ಸಸ್ಯವರ್ಗ ಮತ್ತು ಕೊಯ್ಲು ಮಾಡಿದ ಹೊಲಗಳಲ್ಲಿ ದಿನವಿಡೀ ಮೇಯಲು ಬಿಡಲಾಗುತ್ತದೆ.
ಲುಯಿಟ್ ಆಸ್ಸಾಮಿ ಜೌಗು ಪ್ರದೇಶ ಆಸ್ಸಾಂ ಮತ್ತು ಮಣಿಪುರ ಎತ್ತುಗಳು ಬಂಡಿ ಸವಾರಿ ಮತ್ತು ಉಳುಮೆಗೆ ಅತ್ಯುತ್ತಮವಾದ ಡ್ರಾಫ್ಟ್ ಜಾನುವಾರುಗಳಾಗಿವೆ, ವಿಶೇಷವಾಗಿ ಮಣ್ಣಿನ ಹೊಲಗಳಲ್ಲಿ ಭತ್ತದ ಕೃಷಿಗಾಗಿ ಬಳಸಲಾಗುತ್ತವೆ
ಬರ್ಗೂರ್ (ಮಲೈ ಎರುಮೈ / ಮಲೈ ಎಮ್ಮೈ) ತಮಿಳುನಾಡು ಹಾಲಿನ ಇಳುವರಿ ದಿನಕ್ಕೆ 1.5 ರಿಂದ 2.0 ಲೀಟರ್ ವರೆಗೆ ಇರುತ್ತದೆ, ಹಾಲನ್ನು ಮುಖ್ಯವಾಗಿ ಮನೆಯ ಬಳಕೆಗಾಗಿ ಅಂದರೆ ಮೊಸರು ಮತ್ತು ಮಜ್ಜಿಗೆಯಾಗಿ ಬಳಸಲಾಗುತ್ತದೆ.
ಛತ್ತೀಸ್‌ಗಢಿ ಛತ್ತೀಸ್‌ಗಢ ಎಮ್ಮೆ ಎತ್ತುಗಳನ್ನು ಭತ್ತದ ಹೊಲಗಳನ್ನು ಉಳುಮೆ ಮಾಡಲು ಆದ್ಯತೆ ನೀಡಲಾಗುತ್ತದೆ (ವಿಶೇಷವಾಗಿ ಮಳೆಗಾಲದಲ್ಲಿ). ಈ ಎಮ್ಮೆಗಳು ನಿಧಾನವಾಗಿ ಪಕ್ವವಾಗುವ ಪ್ರಾಣಿಗಳು ಮತ್ತು ಸರಾಸರಿ ಹಾಲು ಕರೆಯುವ ಪ್ರಾಣಿಗಳು. ಈ ಎಮ್ಮೆಗಳ ಹಾಲಿನಿಂದ ತಯಾರಿಸಿದ 'ಪೇಡಾ' ಪ್ರಸಿದ್ಧ ಹಾಲಿನ ಉತ್ಪನ್ನವಾಗಿದೆ.
ಗೋಜ್ರಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಗುಜ್ಜರ್‌ ಸಮುದಾಯದವರಿಗೆ ಜೀವನೋಪಾಯವನ್ನು ಭದ್ರಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಈ ಎಮ್ಮೆಗಳನ್ನು ಅವರ ಸಮುದಾಯದಲ್ಲಿ ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ
ಧಾರವಾಡಿ ಕರ್ನಾಟಕ ಕಪ್ಪು ಬಣ್ಣವನ್ನು ಹೊಂದಿರುವ ಮಧ್ಯಮ ಗಾತ್ರದ ಎಮ್ಮೆ. ಕೆಚ್ಚಲು ಮಧ್ಯಮ ಗಾತ್ರದ್ದಾಗಿದೆ; ಮೊಲೆತೊಟ್ಟುಗಳು ಸಿಲಿಂಡರಾಕಾರದಲ್ಲಿರುತ್ತವೆ. ಇದನ್ನು ಮುಖ್ಯವಾಗಿ ಹಾಲಿನ ಉದ್ದೇಶಕ್ಕಾಗಿ ಸಾಕಲಾಗುತ್ತದೆ. ಸರಾಸರಿ ಹಾಲುಣಿಸುವ ಹಾಲಿನ ಇಳುವರಿ 972 ಲೀಟರ್. ದೈನಂದಿನ ಹಾಲಿನ ಇಳುವರಿ 1.5 ರಿಂದ 8.7 ಲೀಟರ್ ವರೆಗೆ ಇರುತ್ತದೆ. ಹಾಲಿನ ಕೊಬ್ಬಿನ ಸರಾಸರಿ ಶೇಕಡಾವಾರು 6.9. ಜಿಐ ಟ್ಯಾಗ್ ಹೊಂದಿರುವ ಪ್ರಸಿದ್ಧ ಧಾರವಾಡ ಪೇಡಾವನ್ನು ತಯಾರಿಸಲು ಈ ಹಾಲನ್ನು ಬಳಸಲಾಗುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶಗಳಿಗೆ ಈ ಪ್ರಾಣಿಗಳು ಸೂಕ್ತವಾಗಿವೆ.
ಮಂದಾ ಒಡಿಶಾ ಇದು ಗಟ್ಟಿಮುಟ್ಟಾದ ಎಮ್ಮೆಯಾಗಿದ್ದು, ಪೂರ್ವ ಘಟ್ಟಗಳ ಬೆಟ್ಟ ಶ್ರೇಣಿಗಳು ಮತ್ತು ಒಡಿಶಾದ ಕೊರಾಪುಟ್ ಪ್ರದೇಶದ ಪ್ರಸ್ಥಭೂಮಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ದೇಹದ ಬಣ್ಣ ಹೆಚ್ಚಾಗಿ ಬೂದಿ ಮತ್ತು ಬೂದು ಬಣ್ಣದ್ದಾಗಿದ್ದು ತಾಮ್ರ ಬಣ್ಣದ ಕೂದಲನ್ನು ಹೊಂದಿರುತ್ತದೆ. ಇದನ್ನು ಹೊಲಗಳಲಿ ನೀರು ಬಿಡಲು/ಹಾಯಿಸಲು, ಹಾಲು ಮತ್ತು ಗೊಬ್ಬರಕ್ಕಾಗಿ ಸಾಕಲಾಗುತ್ತದೆ. ದೈನಂದಿನ ಹಾಲು ಉತ್ಪಾದನೆಯು 1.2 ರಿಂದ 3.7 ಕೆಜಿ ವರೆಗೆ ಇರುತ್ತದೆ. ಹಾಲಿನಲ್ಲಿ ಸರಾಸರಿ ಕೊಬ್ಬಿನ ಅಂಶ ಶೇಕಡಾವಾರು 8.4. ಇರುತ್ತದೆ. ಮಂದ ಎಮ್ಮೆಗಳನ್ನು ಹೆಚ್ಚಾಗಿ ವ್ಯಾಪಕ/ಎಕ್ಸಟೆನ್ಸಿವ್‌ ವ್ಯವಸ್ಥೆಯಡಿಯಲ್ಲಿ ಸಾಕಲಾಗುತ್ತದೆ.
ಪೂರ್ಣಥಡಿ ಮಹಾರಾಷ್ಟ್ರ ಈ ಎಮ್ಮೆಗಳು ಮಧ್ಯಮ ಗಾತ್ರದಲ್ಲಿರುತ್ತವೆ, ಬಿಳಿ ಬಣ್ಣದಿಂದ ತಿಳಿ ಕಂದು ಬಣ್ಣದ್ದಾಗಿರುತ್ತವೆ, ಆದರೆ ನವಜಾತ ಕರುಗಳು ಸಾಮಾನ್ಯವಾಗಿ ಸಂಪೂರ್ಣ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಹಣೆಯ ಮೇಲೆ ಬಿಳಿ ಕೂದಲಿನ ತೇಪೆ ಇರುತ್ತದೆ. ದೈನಂದಿನ ಹಾಲು ಇಳುವರಿ, ಹಾಲುಣಿಸುವ ಹಾಲಿನ ಇಳುವರಿ ಮತ್ತು ಕೊಬ್ಬಿನ ಶೇಕಡಾವಾರು ಕ್ರಮವಾಗಿ 1.1-5.5 ಕೆಜಿ, 353-1533 ಕೆಜಿ ಮತ್ತು 6.5-11.5 ರಷ್ಟಿರುತ್ತದೆ.