Responsive Image

ಆರೋಗ್ಯ ರಕ್ಷಣೆ

ಹೈನುರಾಸುಗಳು ಕೆಲವು ರೋಗಗಳಿಗೆ ತುತ್ತಾಗುತ್ತವೆ. ಉದಾ. ಕಾಲು ಬಾಯಿ ರೋಗ, ಗಂಟಲು ಬೇನೆ, ಚಪ್ಪೆ ರೋಗ ಮತ್ತು ನೆರಡಿ ರೋಗ ಮುಂತಾದವು. ಈ ರೋಗಗಳ ವಿರುದ್ಧ ಅವುಗಳಿಗೆ ರೋಗ ಬರದಂತೆ ಲಸಿಕೆಗಳಿಂದ ರಕ್ಷಣೆ ನೀಡಬೇಕು. ರೋಗಕ್ಕೆ ತುತ್ತಾದರೆ ತಕ್ಷಣ ಪಶುವೈದ್ಯರನ್ನು ಕಂಡು ಚಿಕಿತ್ಸೆಮಾಡಿಸಬೇಕು.

ಆರೋಗ್ಯವಂತ ರಾಸುಗಳ ಲಕ್ಷಣಗಳು

ರಾಸುಗಳಲ್ಲಿ ದೇಹದ ತಾಪಮಾನ (ಉಷ್ಣಾಂಶ)

ಸರಾಸರಿಯಾಗಿ ವಿವಿಧ ಆರೋಗ್ಯವಂತ ರಾಸುಗಳ ದೇಹದ ತಾಪಮಾನವು ಈ ಕೆಳಕಂಡಂತೆ ಇರುವುದು. ದೇಹದ ತಾಪಮಾನವನ್ನು ಥರ್ಮಾಮೀಟರ ಉಪಕರಣದಿಂದ ನೋಡಬಹುದು.

ನಾಡಿ ಬಡಿತ

ನಾಡಿಬಡಿತವು ಉಸಿರಾಟದ ವೇಗಕ್ಕೆ ಸಂಬಂಧಿಸಿರುತ್ತದೆ. ಆರೋಗ್ಯವಾದ ರಾಸುಗಳಲ್ಲಿ ಇವೆರಡು ಒಂದು ನಿರ್ದಿಷ್ಠವಾದ ಪ್ರಮಾಣದಲ್ಲಿ ಇರುವುದು.

ಉಸಿರಾಟ

ಹೈನುರಾಸುಗಳನ್ನು ರೋಗ ಬರದಂತೆ ಲಸಿಕೆಗಳಿಂದ ರಕ್ಷಣೆ ನೀಡಬೇಕು. ರೋಗಕ್ಕೆ ತುತ್ತಾದರೆ ತಕ್ಷಣ ಪಶುವೈದ್ಯರನ್ನು ಕಂಡು ಚಿಕಿತ್ಸೆ ಮಾಡಿಸಬೇಕು. ಪಶುವೈದ್ಯರ ನಿರ್ದೇಶನದಂತೆ ಜಂತುನಾಶಕವನ್ನು ಈ ಕೆಳಗೆ ತಿಳಿಸಿದ ಸಮಯದಲ್ಲಿ ಕುಡಿಸಬೇಕು.

ರಾಸುಗಳಿಗೆ ಹಾಕಿಸಬೇಕಾದ ಲಸಿಕೆಗಳ ವಿವರ

ರೋಗ ಲಸಿಕೆ ಹಾಕುವ ವಯಸ್ಸು ಲಸಿಕೆ ಹಾಕಿಸಬೇಕಾದ ಸಮಯ
ಕಾಲು ಬಾಯಿ ಬೇನೆ (ಖುರಖತ್) 4 ತಿಂಗಳು ಮೇಲ್ಪಟ್ಟು ವರ್ಷಕ್ಕೆರೆಡು ಬಾರಿ; ಫೆಬ್ರವರಿ-ಮಾರ್ಚ ಮತ್ತು ಅಗಸ್ಟ್-ಸೆಪ್ಟೆಂಬರ ತಿಂಗಳಲ್ಲಿ
ಚಪ್ಪೆ ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಮಾರ್ಚ-ಎಪ್ರಿಲ್ ತಿಂಗಳಲ್ಲಿ
ಗಂಟಲು ಬೇನೆ 4-6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಎಪ್ರಿಲ್-ಮೇ ತಿಂಗಳಲ್ಲಿ
ನೆರಡಿ ರೋಗ 6 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ ಜೂನ್-ಜುಲೈ ತಿಂಗಳಲ್ಲಿ (ರೋಗಕಂಡು ಬಂದ ಪ್ರದೇಶಗಳಲ್ಲಿ)
ಥೈಲೇರಿಯಾ 3 ತಿಂಗಳು ಮೇಲ್ಪಟ್ಟು ಜೀವನದಲ್ಲಿ ಒಮ್ಮೆ ಮಾತ್ರ
ಬ್ರುಸೆಲ್ಲಾ 4-8 ತಿಂಗಳ ಹೆಣ್ಣು ಕರುಗಳಿಗೆ ಜೀವನದಲ್ಲಿ ಒಮ್ಮೆ ಮಾತ್ರ
ಹುಚ್ಚುನಾಯಿ ರೋಗ 3 ತಿಂಗಳು ಮೇಲ್ಪಟ್ಟು ವರ್ಷಕ್ಕೊಮ್ಮೆ

Responsive image