ಬ್ರಾಯ್ಲರ್ ಕೋಳಿ ನಿರ್ವಹಣೆ :
ಬ್ರಾಯ್ಲರ್ ಮನೆಯ ಮಾನದಂಡಗಳು
- ಗಾತ್ರ: ದಪ್ಪಸತ್ತೆ ಪದ್ಧತಿಯಲ್ಲಿ ಸಾಕುವಾಗ ಪ್ರತಿ ಬ್ರಾಯ್ಲರ್ಗೆ ಒಂದು ಚದರ ಅಡಿ ನೆಲದ ಜಾಗ ಅಗತ್ಯವಿರುತ್ತದೆ.
- ಉದ್ದ: ಯಾವುದೇ ಅನುಕೂಲಕರವಾದ ಉದ್ದ ಇಡಬಹುದು. ಆದರೆ ಓಪನ್ ಶೆಡ್ಗಾಗಿ ಗರಿಷ್ಠ ಉದ್ದ 150 ಅಡಿ ಮೀರಬಾರದು.
- ಅಗಲ: ತೆರೆದ ಗೋಡೆಯಿರುವ ಕೋಳಿ ಶೆಡ್ಗಳ ಅಗಲವು 22 ರಿಂದ 25 ಅಡಿಗಳಿಗಿಂತ ಹೆಚ್ಚಿರಬಾರದು.
- ಎತ್ತರ: ಮನೆಯ ಎರಡು ಕಡೆ ಗೋಡೆಯು ಅಡಿಪಾಯದಿಂದ 7 ರಿಂದ 8 ಅಡಿ ಎತ್ತರದಲ್ಲಿರಬೇಕು ಹಾಗೂ ಮಧ್ಯಭಾಗದ ಎತ್ತರವು 12 ರಿಂದ 14 ಅಡಿಗಳಾಗಿರಬೇಕು.
- ಅಡಿಪಾಯ: ಅಡಿಪಾಯದ ಆಳವು 3 ರಿಂದ 5 ಅಡಿಗಳಾಗಿರಬೇಕು.
- ನೆಲ: ನೆಲವು ಕಾಂಕ್ರೀಟ್ನಿಂದ ನಿರ್ಮಿತವಾಗಿರಬೇಕು, ಇಳಿಜಾರಾಗಿರಬೇಕು, ಇಲಿ ನಿರೋಧಕ ವ್ಯವಸ್ಥೆ ಹೊಂದಿರಬೇಕು ಮತ್ತು ತೇವಾಂಶರಹಿತವಾಗಿರಬೇಕು.
- ಬದಿ ಗೋಡೆಗಳು: ಬದಿ ಗೋಡೆಗಳ ಎತ್ತರವು 1 ರಿಂದ 1.5 ಅಡಿಗಳಾಗಿರಬೇಕು. ಉಳಿದ ಭಾಗವನ್ನು ತೆರೆದೆಯೇ ಇಟ್ಟು, ತಂತಿ ಜಾಲ ಅಥವಾ ಮೆಟಲ್ನಿಂದ ಅಳವಡಿಸಬೇಕು. ತಂತಿ ಜಾಲವು 2.5 × 2.5 ಸೆಂ.ಮೀ (1 ಇಂಚು) ಗಾತ್ರದ 16 ಗೇಜ್ ನಷ್ಟು ದಪ್ಪವಿರಬೇಕು.
ರಿಡ್ಜ್ ವಾತಾಯನ ಹೊಂದಿರುವ ಬ್ರಾಯ್ಲರ್ ಮನೆ
- ಮೇಲ್ಛಾವಣಿ (ರೂಫ್): ಶೆಡ್ನ ಮೇಲ್ಛಾವಣಿಯನ್ನು ಹುಲ್ಲಿನಿಂದ ಅಥವಾ ಅಸ್ಬೆಸ್ಟಾಸ್ ಶೀಟ್ನಿಂದ ನಿರ್ಮಿಸಬಹುದು. ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ಫುಲ್ ಮಾನಿಟರ್ ಮತ್ತು ಗೇಬಲ್ ಮಾದರಿಯ ಮೇಲ್ಛಾವಣಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
- ಓವರ್ಹ್ಯಾಂಗ್: ಮಳೆನೀರು ಶೆಡ್ ಒಳಗೆ ಪ್ರವೇಶಿಸದಂತೆ ತಡೆಯಲು ಕನಿಷ್ಠ 3.5 ಅಡಿಗಳಷ್ಟು ಓವರಹ್ಯಾಂಗ್ ಅನ್ನು ನಿಮಿ೯ಸಬೇಕು.
- ಕಡೆ ಗೋಡೆಗಳು: ಶೆಡ್ನ ಎರಡೂ ತುದಿಗಳಲ್ಲಿರುವ ಗೋಡೆಗಳನ್ನು ಮೇಲ್ಛಾವಣಿ ರೇಖೆಯಿಂದ ನೆಲಮಟ್ಟದವರೆಗೆ ಸಂಪೂಣ೯ವಾಗಿ ನಿಮಿ೯ಸಬೇಕು. ಚಿಕ್ಕ ಗಾತ್ರದ ಶೆಡ್ಗಳಲ್ಲಿ, ಬದಿಗಳಲ್ಲಿ ಬಳಸುವಂತೆ ಕಡೆ ಗೋಡೆಗಳಲ್ಲೂ ತಂತಿ ಜಾಲವನ್ನು ಅಳವಡಿಸಬಹುದು.
- ಬಾಗಿಲುಗಳು: ಕಡೆ ಗೋಡೆಗಳಲ್ಲಿ 1.98 × 0.90 ಮೀಟರ್ (6.5 × 3 ಅಡಿ) ಗಾತ್ರದ ಎರಡು ಬಾಗಿಲುಗಳು ಇರಬೇಕು. ಪ್ರವೇಶ ದ್ವಾರದಲ್ಲಿ 45 × 90 × 9 ಸೆಂ.ಮೀ (1.5 × 3 × 0.4 ಅಡಿ) ಗಾತ್ರದ ಫುಟ್ ಬಾತ್ ಅನ್ನು ನಿರ್ಮಿಸಬೇಕು.
- ಬೆಳಕು ವ್ಯವಸ್ಥೆ: ನೆಲಮಟ್ಟದಿಂದ 7 ರಿಂದ 8 ಅಡಿ ಎತ್ತರದಲ್ಲಿ ಮೇಲ್ಛಾವಣಿಯಿಂದ ನೇತಾಡುವಂತೆ ಬಲ್ಬ ಅನ್ನು ಅಳವಡಿಸಬೇಕು. ಇನ್‌ಕ್ಯಾಂಡಸೆಂಟ್ ಬಲ್ಬಗಳ ನಡುವೆ ಅಂತರ 10 ಅಡಿ ಮತ್ತು ಫ್ಲೋರಸೆಂಟ್ ದೀಪಗಳ (ಟ್ಯೂಬ್ ಲೈಟ್ಗಳು) ನಡುವೆ ಅಂತರ 15 ಅಡಿ ಇರಬೇಕು.
ಬ್ರಾಯ್ಲರ್‌ಗಳಿಗೆ ಸೂಕ್ತ ಪರಿಸರದ ಮಾನದಂಡಗಳು:
ತಾಪಮಾನ: 22°–30°C (70°–85°F)
ಆರ್ದ್ರತೆ: 30–60%
ಅಮೋನಿಯಾ ಮಟ್ಟ: < 25 ಪಿಪಿಎಂ
ಯಶಸ್ವಿ ಬ್ರಾಯ್ಲರ್ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳು
ದಪ್ಪಸತ್ತೆ ಪದ್ಧತಿಯ ನಿರ್ವಹಣಾ ವ್ಯವಸ್ಥೆಯಲ್ಲಿ, ಲಿಟ್ಟರ್ ವಸ್ತುಗಳಾಗಿ ಭತ್ತದ ತೌಡು, ಸಾ ಡಸ್ಟ್, ಕಡಲೆಕಾಯಿ ಸಿಪ್ಪೆ, ಮರದ ಚಿಪ್ಸ್ ಇತ್ಯಾದಿಗಳನ್ನು ಬಳಸಬಹುದು. ಲಿಟ್ಟರ್‌ನ ಆಳವು 3–6 ಇಂಚುಗಳಾಗಿರಬೇಕು. ಬ್ರಾಯ್ಲರ್‌ಗಳನ್ನು ಆಲ್-ಇನ್ ಆಲ್-ಔಟ್ ವ್ಯವಸ್ಥೆಯಲ್ಲಿ (ಒಂದು ಸಮಯದಲ್ಲಿ ಒಂದು ಬ್ಯಾಚ್) ಸಾಕಬೇಕು.
- ಮರಿಗಳನ್ನು ಸ್ವೀಕರಿಸುವ ಮುಂಚೆ ಬ್ರೂಡರ್ ಶೆಡ್ ಅನ್ನು ಸಿದ್ಧಪಡಿಸುವುದು.
- ಎಲ್ಲಾ ಉಪಕರಣಗಳನ್ನು ತಯಾರಕರ ಸೂಚನೆಯಂತೆ ಸೂಕ್ತ ಡಿಸ್ಇನ್ಫೆಕ್ಟಂಟ್‌ನಲ್ಲಿ ಮುಳುಗಿಸಿ, ನಂತರ ಒಂದು ದಿನ ಬಿಸಿಲಿನಲ್ಲಿ ಒಣಗಿಸಿ, ಸ್ವಚ್ಛಗೊಳಿಸಬೇಕು.
- 5–10% ಫಾರ್ಮಲಿನ್ ಸ್ಪ್ರೇ ಮಾಡಿದ ನಂತರ ಎಲ್ಲಾ ಕೊಳೆಯುವಂತಹ ವಸ್ತುಗಳನ್ನು ತೆಗೆದು, ಫಾರ್ಮ್ ಪ್ರದೇಶದಿಂದ ದೂರದಲ್ಲಿ ವಿಸರ್ಜಿಸಬೇಕು.
- ತಾಪ ಚಿಕಿತ್ಸೆ: ಕೊಕ್ಸಿಡಿಯೋಸಿಸ್ ಕಡಿಮೆ ಮಾಡಲು ಬ್ಲೋ ಲ್ಯಾಂಪ್ ಬಳಸಿ ನೆಲ ಮತ್ತು ಬದಿ ತಂತಿ ಜಾಲವನ್ನು ಸುಡುವುದು.
- ರಾಸಾಯನಿಕ ಚಿಕಿತ್ಸೆ: IBD ವೈರಸ್ ನಾಶಗೊಳಿಸಲು ನೆಲವನ್ನು 12–24 ಗಂಟೆಗಳ ಕಾಲ ಕಾಸ್ಟಿಕ್ ಸೋಡಾ ಫ್ಲೇಕ್‌ಗಳ ಬಲವಾದ ದ್ರಾವಣದಲ್ಲಿ ನೆನೆಸಬೇಕು.
NaOH ಪ್ರಮಾಣ – ಪ್ರತಿ ಲೀಟರ್ ನೀರಿಗೆ 11–12 ಗ್ರಾಂ ಅಥವಾ 1000 ಚದರ ಅಡಿಗೆ 2 ಕೆ.ಜಿ.
- ವೈಟ್ ವಾಷ್: ಲೈಮ್ ಸ್ಟೋನ್ + 2–5% ಫಾರ್ಮಲಿನ್ + 1% ಕಾಪರ್ ಸಲ್ಫೇಟ್ + 1% ಕೆರೋಸಿನ್
- ಫ್ಯೂಮಿಗೇಶನ್: 20 ಗ್ರಾಂ KMnO₄ + 40 ಮಿ.ಲೀ ಫಾರ್ಮಲಿನ್ (100 ಘನ ಅಡಿ)
- ಶೆಡ್ ಅನ್ನು 7–10 ದಿನಗಳ ಕಾಲ ಖಾಲಿ ಬಿಡಬೇಕು.
ಬ್ರೂಡಿಂಗ್ ಸ್ಥಳ
ಪ್ರತಿ ಬ್ರೂಡರ್‌ಗೆ 250–300 ಮರಿಗಳನ್ನು ಸಾಕುವುದು ಸೂಕ್ತ. 2 ವಾರಗಳ ವಯಸ್ಸಿನವರೆಗೆ ದಪ್ಪಸತ್ತೆ ವ್ಯವಸ್ಥೆಯಲ್ಲಿ ಪ್ರತಿ ಮರಿಗೆ ಕನಿಷ್ಠ 150 ಸೆಂ.ಮೀ² ಬ್ರೂಡರ್ ಸ್ಥಳ ಒದಗಿಸಬೇಕು.
ಬೆಳಕು ನಿರ್ವಹಣೆ
ಬ್ರೂಡಿಂಗ್ ಅವಧಿಯಲ್ಲಿ 24 ಗಂಟೆಗಳ ಕಾಲ ಬೆಳಕು ಒದಗಿಸಬೇಕು. ನಂತರ ಮಾರಾಟದವರೆಗೆ ಪ್ರತಿದಿನ 23 ಗಂಟೆಗಳ ಬೆಳಕು ಮತ್ತು 1 ಗಂಟೆ ಕತ್ತಲೆ ಇರಬೇಕು.
ಬ್ರೂಡಿಂಗ್ ಅವಧಿಯಲ್ಲಿ ಕೋಳಿಯ ಕಣ್ಣಿನ ಮಟ್ಟದಲ್ಲಿ 1 ಫುಟ್ ಕ್ಯಾಂಡಲ್ ಅಥವಾ 11 ಲಕ್ಸ್ ಬೆಳಕು ಇರಬೇಕು. ಅಂದರೆ ಪ್ರತಿ 20 ಚ.ಮೀ ಪ್ರದೇಶಕ್ಕೆ 2.4 ಮೀಟರ್ ಎತ್ತರದಲ್ಲಿ ರಿಫ್ಲೆಕ್ಟರ್ ಹೊಂದಿರುವ ಒಂದು 40 ವಾಟ್ ಇನ್‌ಕ್ಯಾಂಡಸೆಂಟ್ (ರೌಂಡ್) ಬಲ್ಬ್ ಅಳವಡಿಸಬೇಕು. ಬ್ರೂಡಿಂಗ್ ಅವಧಿ ನಂತರ, ಕೋಳಿಯ ಕಣ್ಣಿನ ಮಟ್ಟದಲ್ಲಿ ಸುಮಾರು 5.5 ಲಕ್ಸ್ ಅಥವಾ 0.5 ಫುಟ್ ಕ್ಯಾಂಡಲ್ ಬೆಳಕು ಇರಬೇಕು.
ಆಹಾರ ನಿರ್ವಹಣೆ
- ಮರಿಗಳನ್ನು ಬ್ರೂಡರ್‌ಗೆ ಇಟ್ಟ ಒಂದು ಗಂಟೆಯೊಳಗೆ ಚಿಕ್ ಗಾರ್ಡ್‌ನಿಂದ ಸುತ್ತುವರಿದ ಪ್ರದೇಶದಲ್ಲಿ ನ್ಯೂಸ್‌ಪೇಪರ್ ಮೇಲೆ ಆಹಾರವನ್ನು ಚೆಲ್ಲಬೇಕು.
- ಕೆಲವು ಗಂಟೆಗಳ ನಂತರ, ಮೊದಲ ವಾರದಲ್ಲಿ ಚಿಕ್ ಫೀಡರ್ ಪ್ಲೇಟ್, ಕಡಿಮೆ ಆಳದ ಟ್ರೇಗಳು ಅಥವಾ ಟೈರ್ ಫೀಡರ್‌ನಲ್ಲಿ ಆಹಾರ ನೀಡಬೇಕು.
- ಕೋಳಿ ಮರಿಗಳು ಬೆಳೆದಂತೆ ಆಹಾರ ಸ್ಥಳದ ಅಗತ್ಯ ಹೆಚ್ಚಾಗುವುದರಿಂದ, 3ನೇ ವಾರದಿಂದ ಚಿಕ್ಕ ಫೀಡರ್‌ಗಳನ್ನು ದೊಡ್ಡ ಫೀಡರ್‌ಗಳಿಂದ ಬದಲಿಸಬೇಕು.
- ಕೋಳಿಗಳನ್ನು ತಾಜಾ ಆಹಾರದತ್ತ ಆಕರ್ಷಿಸಲು, ಪ್ರತಿ ಗಂಟೆಗೆ ಒಮ್ಮೆ ಆಹಾರವನ್ನು ಕುಲುಕಬೇಕು. ಕೋಳಿಗಳಿಗೆ ಆಹಾರ ಸುಲಭವಾಗಿ ಲಭ್ಯವಾಗಬೇಕು.
- ಎರಡು ಫೀಡರ್‌ಗಳ ನಡುವಿನ ಅಂತರ 5 ಅಡಿಗಿಂತ ಹೆಚ್ಚಿರಬಾರದು.
- ಫೀಡರ್ ಎತ್ತರವನ್ನು ಹಕ್ಕಿಯ ಬೆನ್ನಿನ ಮಟ್ಟಕ್ಕೆ ಹೊಂದಿಸಬೇಕು.
-
• 50–60 ಮರಿಗಳಿಗೆ 1 ಚಿಕ್ ಪ್ಲೇಟ್ / ಟೈರ್ ಫೀಡರ್ (1ನೇ ವಾರ)
• 50–60 ಮರಿಗಳಿಗೆ 1 ಚಿಕ್ ಫೀಡರ್ (1–3 ವಾರಗಳು)
• 30–40 ಕೋಳಿಗಳಿಗೆ 1 ಫೀಡರ್ (4–6 ವಾರಗಳು) ಬೇಕು
- ಬಿಸಿಲಿನ ಕಾಲದಲ್ಲಿ ಹೀಟ್ ಸ್ಟ್ರೋಕ್‌ನಿಂದ ಸಾವು ತಪ್ಪಿಸಲು ಆಹಾರವನ್ನು ಬೆಳಿಗ್ಗೆ ಮತ್ತು ಸಂಜೆ ಮಾತ್ರ ನೀಡಬೇಕು.
- ಆಹಾರವನ್ನು ಗರಿಷ್ಠ 15 ದಿನಗಳ ಬಳಕೆಗೆ ಮಾತ್ರ ಸಂಗ್ರಹಿಸಬೇಕು.
ಬ್ರಾಯ್ಲರ್‌ಗಳಲ್ಲಿ ನೀರಿನ ನಿರ್ವಹಣೆ
ಬ್ರಾಯ್ಲರ್‌ಗಳಿಗೆ ಕುಡಿಯುವ ನೀರು ಮೃದು, ಪಾರದರ್ಶಕ, ತಾಜಾ, ಸ್ವಚ್ಛ, ಬಣ್ಣರಹಿತ ಹಾಗೂ ಯಾವುದೇ ವಾಸನೆ ಇಲ್ಲದಂತಿರಬೇಕು. ಕಲುಷಿತ ನೀರು ಕೊಲಿಬ್ಯಾಸಿಲೋಸಿಸ್, ಕೊಕ್ಸಿಡಿಯೋಸಿಸ್, ಸ್ಯಾಲ್ಮೊನೆಲ್ಲೋಸಿಸ್, ಎಂಟೆರೈಟಿಸ್, ಅಸೈಟಿಸ್, ಸೆಪ್ಟಿಸೀಮಿಯಾ, ಹೆಪಟೈಟಿಸ್ ಮುಂತಾದ ರೋಗಗಳಿಗೆ ಪ್ರಮುಖ ಕಾರಣವಾಗುತ್ತದೆ.
ತಣ್ಣನೆಯ ಹವಾಮಾನದಲ್ಲಿ ಬ್ರಾಯ್ಲರ್‌ಗಳು ತಾವು ಸೇವಿಸುವ ಪ್ರತೀ 1 ಕೆ.ಜಿ ಆಹಾರಕ್ಕೆ ಸುಮಾರು 2 ಲೀಟರ್ ನೀರು ಕುಡಿಯುತ್ತವೆ. ಬಿಸಿಲಿನ ಹವಾಮಾನದಲ್ಲಿ ಇದು 4 ಲೀಟರ್‌ವರೆಗೆ ಹೆಚ್ಚಾಗಬಹುದು.
ಸಾಮಾನ್ಯ ನಿಯಮವಾಗಿ, ಕೋಳಿಯ ವಯಸ್ಸು (ವಾರಗಳಲ್ಲಿ) × 2 = 100 ಮರಿಗಳಿಗೆ ಬೇಕಾದ ನೀರಿನ ಪ್ರಮಾಣ (ಲೀಟರ್‌ಗಳಲ್ಲಿ). ಉದಾ: 5ನೇ ವಾರ → 2 × 5 = 10 ಲೀಟರ್ / 100 ಬ್ರಾಯ್ಲರ್‌ಗಳು.
ನೀರಿನ ನಿರ್ವಹಣೆಯ ಪ್ರಮುಖ ಸೂಚನೆಗಳು
- ಯಾವುದೇ ಹಂತದಲ್ಲೂ ನೀರಿನ ತೊಟ್ಟಿಗಳು ಖಾಲಿಯಾಗಲು ಬಿಡಬಾರದು.
- ಎರಡು ನೀರುಪಾತ್ರೆಗಳ ನಡುವಿನ ಗರಿಷ್ಠ ಅಂತರ 8 ಅಡಿ ಇರಬೇಕು.
- ನೀರುಪಾತ್ರೆಗಳನ್ನು ಪ್ರತಿದಿನ ವಿಭಿನ್ನ ಸ್ಥಳಗಳಲ್ಲಿ ಇಡಬೇಕು.
- ಎಲ್ಲಾ ನೀರುಪಾತ್ರೆಗಳನ್ನು ಪ್ರತಿದಿನ ಬೆಳಿಗ್ಗೆ ಡಿಟರ್ಜೆಂಟ್ ಬಳಸಿ ಚೆನ್ನಾಗಿ ತೊಳೆಯಬೇಕು.
- ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ನಿಯಮಿತವಾಗಿ ಡಿಸ್ಇನ್ಫೆಕ್ಟ್ ಮಾಡಬೇಕು.
- ನೀರುಪಾತ್ರೆಯ ಎತ್ತರವನ್ನು ಕೋಳಿಯ ಬೆನ್ನಿನ ಮಟ್ಟಕ್ಕೆ ಹೊಂದಿಸಬೇಕು.