ಭಾರತವು ಸಮೃದ್ಧ ಪಶುಸಂಪತ್ತು ಮತ್ತು ಕೋಳಿ ಸಾಕಾಣಿಕೆ ಸಂಪನ್ಮೂಲಗಳನ್ನು ಹೊಂದಿದ್ದು, ಇವು ಗ್ರಾಮೀಣ ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ.
ಭಾರತದಲ್ಲಿ ಕೋಳಿ ಸಾಕಣೆಯ ಒಟ್ಟು ಉತ್ಪಾದನೆಯಲ್ಲಿ ವಾಣಿಜ್ಯ ವಲಯವು ಸುಮಾರು 70% ರಷ್ಟು ಮತ್ತು ಉಳಿದ 30% ರಷ್ಟು ಅಸಂಘಟಿತ ವಲಯವು ಕೊಡುಗೆ ನೀಡುತ್ತದೆ.
ಭಾರತ ಸರ್ಕಾರದ ವರದಿಗಳ ಪ್ರಕಾರ, ಭಾರತದಲ್ಲಿ ಒಟ್ಟು ಕೋಳಿಗಳ ಸಂಖ್ಯೆ 851.81 ಮಿಲಿಯನ್ (20 ನೇ ಜಾನುವಾರು ಗಣತಿಯ ಪ್ರಕಾರ) ಮತ್ತು ಮೊಟ್ಟೆ ಉತ್ಪಾದನೆಯು 2024-25ರ ಅವಧಿಯಲ್ಲಿ ಸುಮಾರು 149.11 ಬಿಲಿಯನ್ ಆಗಿದೆ. 2024-25ರಲ್ಲಿ ವಾರ್ಷಿಕ ತಲಾ ಲಭ್ಯತೆಯು ಸುಮಾರು 106 ಮೊಟ್ಟೆಗಳಷ್ಟಿತ್ತು.
2024-25ರಲ್ಲಿ ಮೊಟ್ಟೆ ಉತ್ಪಾದನೆಯು ಶೇ. 4.4 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ.
ಒಟ್ಟು ಮೊಟ್ಟೆ ಮತ್ತು ಮಾಂಸ ಉತ್ಪಾದನೆಯಲ್ಲಿ ಭಾರತವು ಕ್ರಮವಾಗಿ ವಿಶ್ವದಲ್ಲಿ 3ನೇ ಮತ್ತು 5ನೇ ಸ್ಥಾನವನ್ನು ಹೊಂದಿದೆ.
ಕೋಳಿ ಸಾಕಾಣಿಕೆಯ ಲಾಭಗಳು:
ಹೆಚ್ಚು ಉತ್ಪಾದಕತೆ ನೀಡುವ ಉದ್ಯಮವಾಗಿದೆ.
ಆರಂಭಿಸಲು ಹೆಚ್ಚಿನ ಮೂಲಧನ ಅಗತ್ಯವಿಲ್ಲ.
ಆರಂಭಿಸಲು ಹೆಚ್ಚಿನ ಸ್ಥಳದ ಅಗತ್ಯವಿಲ್ಲ̤ ಲಭ್ಯವಿರುವ ಸೀಮಿತ ಪ್ರದೇಶದಲ್ಲಿಯೇ ಆರಂಭಿಸಬಹುದು.
ಕಡಿಮೆ ನಿರ್ವಹಣೆಯ ಅಗತ್ಯವಿದೆ.
ಇತರೆ ಮಾಂಸ ಉತ್ಪನ್ನಗಳಿಗಿಂತ ಕೋಳಿ ಮಾಂಸ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಮಾರುಕಟ್ಟೆ ಇದೆ.