ಕೋಳಿಗಳಿಗೆ ನೀಡುವ ಸಾಮಾನ್ಯ ಆಹಾರ ಪದಾರ್ಥಗಳನ್ನು ಹೀಗೆ ವಿಭಾಗಿಸಬಹುದು:
1. ಧಾನ್ಯಗಳು
2. ಧಾನ್ಯಗಳ ಉಪಉತ್ಪನ್ನಗಳು
3. ಸಸ್ಯ ಪ್ರೋಟೀನ್
4. ಪ್ರಾಣಿಜನ್ಯ ಪ್ರೋಟೀನ್
5. ಕೊಬ್ಬುಗಳು
6. ಖನಿಜ ಪೂರಕಗಳು
ಇವು ಹೆಚ್ಚು ಶಕ್ತಿ ನೀಡಲು ಆಹಾರದಲ್ಲಿ ಮುಖ್ಯವಾಗಿ ಬಳಸಲ್ಪಡುತ್ತವೆ.
- ಇದು ಮುಖ್ಯ ಶಕ್ತಿ ಮೂಲವಾಗಿ ಬಳಸಲ್ಪಡುತ್ತದೆ.
- ಶಕ್ತಿ ಮೌಲ್ಯ: ಸುಮಾರು 3300 kcal/kg ಹಾಗೂ ಪ್ರೋಟೀನ್ 8-9%.
- ಜೀರ್ಣತೆಯ ದೃಷ್ಟಿಯಿಂದ ವಿಶ್ವದಾದ್ಯಂತ ಬಳಸುತ್ತಿರುವ ಉತ್ತಮ ಆಹಾರ.
- ಇದು ಲಿನೋಲಿಕ್ ಆಮ್ಲ (Linoleic acid) ಎಂಬ ಅಗತ್ಯ ಕೊಬ್ಬಿನ ಉತ್ತಮ ಮೂಲ.
- ಜಾಂಥೋಫಿಲ್ (Xanthophyll) ಇರುವುದರಿಂದ ಮೊಟ್ಟೆಯ ಯೋಕ ಹಳದಿ ಬಣ್ಣ ಪಡೆದುಕೊಳ್ಳುತ್ತದೆ.
- ಇದು ವಿಟಮಿನ್ ʼAʼ ಯ ಶ್ರೇಷ್ಠ ಮೂಲ.
- ಮೆಕ್ಕೆ ಜೋಳದ ಬದಲಿಯಾಗಿ 50-60% ರಷ್ಟು ಬಳಸಬಹುದು.
- ಇದರಲ್ಲಿ ಶಕ್ತಿ ಮೆಕ್ಕೆ ಜೋಳಕ್ಕಿಂತ ಕಡಿಮೆಯಿದ್ದರೂ, ಪ್ರೋಟೀನ್ ಮಾತ್ರ ಹೆಚ್ಚು (3200 Me kcal, 10% protein) ಇದೆ.
- ಲೈಸಿನ್, ಮೆಥಿಯೋನಿನ್ ಮತ್ತು ಆರ್ಜಿನಿನ್ ಅಸಮರ್ಪಕ/ಕಡಿಮೆ ಇರುತ್ತದೆ.
- ಜೋಳವು ಬಿಳಿ ಮತ್ತು ಗಾಢ ಬಣ್ಣದಾಗಿರುತ್ತವೆ. ಗಾಢ ಬಣ್ಣದ ಜೋಳದಲ್ಲಿ ಹೆಚ್ಚಿನ ಟ್ಯಾನಿನ್ (Tannin) ಇರುತ್ತದೆ.
- ಟ್ಯಾನಿನ್ ಚಿಕ್ಕ ಕೋಳಿಗಳ ಬೆಳವಣಿಗೆಯನು ನಿಧಾನಗೊಳಿಸುತ್ತದೆ ಮತ್ತು ಮೊಟ್ಟೆಯ ಹಳದಿ ಭಾಗದಲ್ಲಿ ಚುಕ್ಕೆಗಳನ್ನು (ಮೋಟ್ಲಿಂಗ್) ಉಂಟುಮಾಡುತ್ತದೆ. ಹಾಗಾಗಿ ಹೆಚ್ಚು ಬಿಳಿ ಜೋಳವನ್ನು ಬಳಸಲಾಗುತ್ತದೆ.
- ಭಾರತದಲ್ಲಿ ಅಕ್ಕಿ ಬಹುತೇಕ ಭಾಗಗಳಲ್ಲಿ ಪ್ರಧಾನ ಧಾನ್ಯವಾಗಿದೆ.
- ಕಡಿಮೆ ಪ್ರೋಟೀನ್ (7-8%).
- ಮಾನವ ಉಪಯೋಗಕ್ಕೆ ಸರಿಹೊಂದದ ಅಕ್ಕಿಯನ್ನು ಬಳಸಬಹುದು.
- ನುಚ್ಚಕ್ಕಿ (Broken rice) ಮಿಲ್ಲಿಂಗ್ ಉದ್ಯಮದ ಉಪಉತ್ಪನ್ನವಾಗಿದೆ.. ಉತ್ತಮ ಗುಣಮಟ್ಟದ ನುಚ್ಚಕ್ಕಿಯನ್ನು ಕೋಳಿ ಆಹಾರವಾಗಿ ಬಳಸಬಹುದು.
- ಅಕ್ಕಿ ಪರಮ್ (Rice Param) ನುಚ್ಚಿನಂತಿರುತ್ತದೆ. ಆದರೆ ಬ್ರಾನ್ ಮಿಶ್ರಿತವಾಗಿರುವುದರಿಂದ ಗುಣಮಟ್ಟವು ವ್ಯತ್ಯಾಸ ಉಂಟುಮಾಡಬಹುದು. ಗುಣಮಟ್ಟದ ಆಧಾರದ ಮೇಲೆ 20% ಪ್ರಮಾಣದಲ್ಲಿ ಆಹಾರಕ್ಕೆ ಸೇರಿಸಬಹುದು.
- ಮೆಕ್ಕೆ ಜೋಳ ಮತ್ತು ಜೋಳದ ನಂತರ ಶಕ್ತಿ ನೀಡುವ ಉತ್ತಮ ಧಾನ್ಯ. ಪ್ರೋಟೀನ್: 11-14% (ಗೋಧಿಯ ವಿಧ ಮತ್ತು ಬೆಳೆಯುವ ಪ್ರದೇಶ ಅವಲಂಬಿಸಿ).
- ಶಕ್ತಿ ಮೌಲ್ಯ: 3100 kcal/kg
- ಬ್ರಾಯ್ಲರ್ ಆಹಾರದಲ್ಲಿ 20%, ಹಾಗೂ ಲೇಯರ್ ಆಹಾರದಲ್ಲಿ 30% ಪ್ರಮಾಣದಲ್ಲಿ ಸೇರಿಸಬಹುದು.
- ಗೋಧಿ ಪ್ರೋಟೀನ್ನಲ್ಲಿ ಮೆಥಿಯೋನಿನ್ ಮತ್ತು ಥ್ರೀಯೋನಿನ್ ಅಸಮರ್ಪಕ/ಕಡಿಮೆ ಇರುತ್ತದೆ.
- ಗೋಧಿಯಲ್ಲಿ ಅರಾಬಿನಾಕ್ಸಿಲ್ಯಾನ್ (Arabinoxylans) ಎಂಬ ಜೀರ್ಣವಾಗದ ಪಾಲಿಸ್ಯಾಕರೈಡ್ ಇರುತ್ತದೆ. ಇದು ಕೋಳಿಗಳ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.
- ಜೀರ್ಣಶೀಲತೆ ಹೆಚ್ಚಿಸಲು ಕ್ಸೈಲನೇಸ್ (Xylanase) ಎಂಬ ಕಿಣ್ವ ಬಳಸಬಹುದು.
- ಹೆಚ್ಚು ಪ್ರಮಾಣದಲ್ಲಿ ಗೋಧಿ ಬಳಕೆ ಮಾಡಿದರೆ, ಗೋಧಿಯ ಜೆಲಾಟಿನಸ್ ರೂಪದ ಕಾರಣ ಕೋಳಿಯ ಕೋಕ್ಕಿನ ಮೇಲೆ ಅಂಟಿಕೊಂಡು, “ಬೀಕ್ ನೆಕ್ರೋಸಿಸ್ ” ಉಂಟುಮಾಡಬಹುದು.
·ಅಕ್ಕಿ ಹೊಟ್ಟು ಮತ್ತು ಅಕ್ಕಿ ಪಾಲಿಶಿಂಗ್‌ಗಳನ್ನು ಕೋಳಿ ಆಹಾರದಲ್ಲಿ ಬಳಸಬಹುದು. ಏಷ್ಯಾ ದೇಶಗಳಲ್ಲಿ ಮಿಲ್ಲಿಂಗ್ ವಿಧಾನಗಳ ಕಾರಣ, ಅಕ್ಕಿ ಹೊಟ್ಟು ಮತ್ತು ಪಾಲಿಶಿಂಗ್‌ಗಳನ್ನು ವಿಭಜಿಸುವುದು ಕಷ್ಟ. ಅಕ್ಕಿ ಹೊಟ್ಟು ಎರಡನ್ನೂ ಸೇರಿಸುತ್ತದೆ.
·ಅಕ್ಕಿ ಹೊಟ್ಟು 13% ಪ್ರೋಟೀನ್, 13% ಕೊಬ್ಬು, 13% ಫೈಬರ್, 1.28% ಫೈಟೇಟ್ ಅಂಶ, 2900 kcal/kg (ME) ಶಕ್ತಿ ಹಾಗೂ ಬಿ-ಕಂಪ್ಲೆಕ್ಸ್ ವಿಟಮಿನ್ಸ್ ನ ಉತ್ತಮ ಮೂಲ ಇದೆ.
·ಎಣ್ಣೆ ಹಾಗೂ ಲಿಪೋಲಿಟಿಕ್ ಎಂಜೈಮ್‌ಗಳು ಇರುವ ಕಾರಣ ಅಕ್ಕಿ ಹೊಟ್ಟು ಹಾಳಾಗುವ ಸಂಭವ ಹೆಚ್ಚು. ಸಂಗ್ರಹಿಸಬೇಕಾದರೆ ಆ್ಯಂಟಿ-ಆಕ್ಸಿಡೆಂಟ್ಸ್ಗಳನ್ನು ಬಳಸಬೇಕು.
·ಅಕ್ಕಿ ಹೊಟ್ಟು ಇತರ ಶಕ್ತಿ ಮೂಲ ಧಾನ್ಯಗಳಿಗಿಂತ ಹೆಚ್ಚು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಆದರೆ ಸ್ವಲ್ಪ ಲೈಸಿನ್ ಕೊರತೆ ಇರುತ್ತದೆ.
·ಇದರಲ್ಲಿ ಶಕ್ತಿ 3000 kcal/kg ಹಾಗೂ ಪ್ರೋಟೀನ್ 14% ರಷ್ಟು ಇರುತ್ತದೆ.
·ಸುಮಾರು 1% ಎಣ್ಣೆ ಮಾತ್ರ ಇರುತ್ತದೆ.
·ಶಕ್ತಿ ಕಡಿಮೆ: 1800-1900 kcal/kg ಮತ್ತು ಪ್ರೋಟೀನ್: 13-14% ನಷ್ಟು ಇರುತ್ತದೆ.
·ಪೂರ್ಣ ಹೊಟ್ಟೆ ತೃಪ್ತಿಗಾಗಿ ಇದನ್ನು ಬಳಸುತ್ತಾರೆ.
·ಶಕ್ತಿ ಕಡಿಮೆ: 1300 kcal/kg.
·ಲೈಸಿನ್ ಮತ್ತು ಮೆಥಿಯೋನಿನ್ ಕೊರತೆ.
·ಫೈಬರ್ 11%, ಫೈಟೇಟ್ 0.95%.
·ಮ್ಯಾಂಗನೀಸ್ ಮತ್ತು ಲೋಹದ ಉತ್ತಮ ಮೂಲ.
·ಶಕ್ತಿ: 2400 kcal/kg, ಟ್ಯಾನಿನ್ 3.5–13% ಇರುತ್ತದೆ.
·ಹೆಚ್ಚು ಪ್ರಮಾಣದಲ್ಲಿ ಆಹಾರದಲ್ಲಿಸೇರಿಸಲು ಸಾಧ್ಯವಿಲ್ಲ.
·ಮೆಥಿಯೋನಿನ್ ಮತ್ತು ಥ್ರೀಯೋನಿನ್ ಕೊರತೆ ಇರುತ್ತದೆ.
·ಸಕ್ಕರೆ ಉದ್ಯಮದ ಉಪಉತ್ಪನ್ನ.
·ಇದು ರುಚಿಕರ ಮತ್ತು ಧೂಳುರಹಿತವಾಗಿದ್ದು, ಪೆಲ್ಲೆಟಿಂಗ್ ಗಾಗಿ ಸೂಕ್ತ.
·ಹೆಚ್ಚು ಪ್ರಮಾಣ (>15%) ಸೇರಿಸಿದಲ್ಲಿ ಲಿಟರ್ ಹಸಿ ಮಾಡುವುದಲ್ಲದೇ, ಕೋಳಿಗಳಿಗೆ ಹಾನಿ ಉಂಟುಮಾಡಬಹುದು.
·ಆದ್ದರಿಂದ ಇದರ ಶಿಫಾರಸು 5% ಕ್ಕಿಂತ ಕಡಿಮೆ.
·ಶಕ್ತಿ: 2000 kcal/kg, ಟ್ಯಾನಿನ್ 0.5% ಇರುತ್ತದೆ.
·HCN ಇರುತ್ತದೆ, ಆದರೆ ಡಿಆಯಿಲ್ ಮತ್ತು ಒಣಗಿಸುವ ಪ್ರಕ್ರಿಯೆಯಲ್ಲಿ ಅದು ನಶಿಸಿ ಹೊಗುತ್ತದೆ.
·ಬೀಜದಲ್ಲಿ 18% ಎಣ್ಣೆ ಇರುತ್ತದೆ.
·ಕೋಳಿ ಆಹಾರಕ್ಕಾಗಿ “Full-fat soybean” ಅಥವಾ “Solvent-extracted soybean meal” ರೂಪದಲ್ಲಿ ಸೋಯಾಬೀನ್ ಲಭ್ಯವಿರುತ್ತದೆ.
·ವಿಶ್ವದಾದ್ಯಂತ ಹೆಚ್ಚು ಉತ್ಪಾದನೆಯಾಗುವ ಬೀಜದ ಎಣ್ಣೆ.
·ಅಮೈನೋ ಆಮ್ಲದ 75% ಪೂರೈಕೆಯು ಸೋಯಾಬೀನ್ ಮೀಲನಿಂದ ಸಿಗುತ್ತದೆ.
·ಪ್ರೋಟೀನ್ 38-40% ಇರುತ್ತದೆ.
·ಪ್ರೋಟೀನ್ ಮತ್ತು ಶಕ್ತಿ ಮಟ್ಟ ಬೀಜದ ಪ್ರಕಾರ, ಸಂಸ್ಕರಣೆಯ ನಂತರ ಕೊಬ್ಬಿನ ಉಳಿಕೆಯ ಪ್ರಮಾಣ ಆಧರಿಸಿ ಬದಲಾಗುತ್ತದೆ.
·ಸಂಸ್ಕರಣೆಯ ಮೂಲಕ ಹಾನಿಕಾರಕ ಘಟಕಗಳು ನಾಶವಾಗುತ್ತವೆ (Protease inhibitors – ಟ್ರೈಪ್ಸಿನ್, ಕೈಮೊಟ್ರಿಪ್ಸಿನ್ ಅಪ್ರಾಪ್ತ).
·ಲೈಸಿನ್, ಟ್ರೈಪ್ಟೋಫಾನ್, ಥ್ರೀಯೋನಿನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಮಿಥಿಯೋನಿನ್ ಕೊರತೆ ಇರುತ್ತದೆ..
·ಮೆಕ್ಕೆ ಜೋಳ ಮತ್ತು ಸೋಯಾ ಪ್ರೋಟೀನ್ ಕೋಳಿಗೆ ಬೇಕಾದ ಬಹುತೇಕ ಎಲ್ಲಾ ಅಮೈನೊ ಆಮ್ಲ ಗಳನ್ನು ಒದಗಿಸುತ್ತವೆ.
·ಸಂಸ್ಕರಣೆಗೊಂಡ ಸೋಯಾ ಮೀಲನಲ್ಲಿ ಲೈಸಿನ್ & ಮಿಥಿಯೋನಿನ್ ಜೀರ್ಣತೆಯು 89% ಕ್ಕೂ ಆಧಿಕ ಇರುತ್ತದೆ.
·ಸೋಯಾಬೀನ್ ಮೀಲ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಉತ್ಪಾದಿಸುವ ಪ್ರೋಟಿನ್ ಮೀಲ ಎಂದರೆ ರೇಪ್ ಬೀಜ ಮೀಲ್.
·ಸೋಯಾಬೀನ್ ಮೀಲ್‌ಗೆ ಹೋಲಿಸಿದಲ್ಲಿ ಇದರ ಅಮೈನೋ ಆಮ್ಲದ ಜೀರ್ಣಶೀಲತೆ ತುಂಬಾ ಕಡಿಮೆ ಇರುತ್ತದೆ. ಇದಲ್ಲಿರುವ ಗ್ಲುಕೊಸಿನೊಲೆಟ್ ಅಂಶದ ಕಾರಣದಿಂದ ರುಚಿ ಕಡಿಮೆ ಇರುವುದರ ಜೊತೆಗೆ, ಕೋಳಿಗಳ ಬೆಳವಣಿಗೆ ಕುಂಠಿತಗೊಳ್ಳಬಹುದು.
·ಲೇಯರ್ ಫೀಡ್ನಲ್ಲಿ ಇದರ ಪ್ರಮಾಣ >5% ಸೇರಿಸಿದರೆ ಮೊಟ್ಟೆ ಹಳದಿಯ ಬಣ್ಣ ಮತ್ತು ರುಚಿ ಬದಲಾವಣೆಗೊಳ್ಳುತ್ತದೆ.
·ಇದರಲ್ಲಿ 40% ಎಣ್ಣೆಯ ಅಂಶ ಇರುತ್ತದೆ.
·ಮುಂಚೆ ಪ್ರಮುಖ ಪ್ರೋಟೀನ್ ಮೂಲವಾಗಿತ್ತು ಆದರೆ ಈಗ ಸೋಯಾಬೀನ್ ಮೀಲ್ ಜನಪ್ರಿಯವಾಗಿದೆ.
·ಉಷ್ಣ/ತೇವಾಂಶದ ವಾತಾವರಣದಲ್ಲಿ ಹೆಚ್ಚು ಸಮಯ ಸಂಗ್ರಹಣೆ ಮಾಡುವುದರಿಂದ ಎಣ್ಣೆ ಹಾಳಾಗುವುದಲ್ಲದೆ, ಅದರ ರುಚಿ ಮತ್ತು ಶಕ್ತಿಯ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ.
·ಸೋಯಾಬೀನ ಮೀಲ ಹೊಲಿಸಿದರೆ, ಅಮೀನೋ ಆಮ್ಲಗಳಾದ ಲೈಸಿನ್, ಮೆಥಿಯೋನಿನ್ ಹಾಗೂ ಟ್ರೈಪ್ಟೋಫಾನ್ ಕೊರತೆ ಇದೆ. ಹಾಗಾಗಿ ಶೇಂಗ ಹಿಂಡಿ ಮೀಲ್ ಬಳಸಿದಾಗ ಪೂರಕವಾಗಿ ಅಮೈನೊ ಆಮ್ಲ ಆಹಾರದಲ್ಲಿ ಒದಗಿಸುವುದು ತುಂಬ ಮುಖ್ಯ.
·ಬೀಜದ ಗುಣಮಟ್ಟ ಮತ್ತು ಎಣ್ಣೆ ತೆಗೆಯುವ ವಿಧಾನದ ಆಧಾರದ ಮೇಲೆ ಇದು ಬದಲಾಗುತ್ತದೆ.
·ಸಂಪೂಣ೯ ಸಿಪ್ಪೆ ತೆಗೆದ ಸೂಯ೯ಕಾಂತಿ ಮೀಲ್: 40 % ಪ್ರೋಟೀನ್, 13 % ಫೈಬರ್
·ಅರೆಸಿಪ್ಪೆ ತೆಗೆದ ಸೂಯ೯ಕಾಂತಿ ಮೀಲ್: 30–35% ಪ್ರೋಟೀನ್.
·ಸಂಪೂಣ೯ ಸೂಯ೯ಕಾಂತಿ: 25% ಪ್ರೋಟೀನ್.
·ಸೂಯ೯ಕಾಂತಿ ಮೀಲ್ ನಲ್ಲಿ ಫೈಬರ್ 20% ಮೀರಿದ್ದರೆ, ಕೋಳಿ/ಹಂದಿಗಳಿಗೆ ಆಹಾರವಾಗಿ ತಿನ್ನಿಸಲು ಕಷ್ಟ.
·ಸೋಯಾಬೀನ್ ಮೀಲನಂತೆ ಪ್ರೋಟೀನ್ ಸ್ವಲ್ಪ ಕಡಿಮೆ (41%) ಆದರೆ ಫೈಬರ್ ಹೆಚ್ಚು (11–13%).
·ಅಮೈನೋ ಆಮ್ಲ (ಲೈಸಿನ್, ಮೆಥಿಯೋನಿನ್ ಹಾಗೂ ಟ್ರೈಪ್ಟೋಫಾನ್)ದ ಪ್ರಮಾಣ ಕಡಿಮೆ ಇರುತ್ತದೆ.
·ಲೈಸಿನ್ ಹಾಗೂ ಮೆಥಿಯೋನಿನ್ ಪೂರಕವಾಗಿ ಒದಗಿಸುವುದು ಅಗತ್ಯ.
·ಹತ್ತಿ ಕಾಳಿನಲ್ಲಿರುವ ಗೋಸಿಪಾಲ್ ಹಾನಿಕಾರಕವಾಗಿದ್ದು, ಹೃದಯ ಮತ್ತು ಯಕೃತ್ ಗೆ ಹಾನಿಯುಂಟು ಮಾಡುತ್ತದೆ.
·ಪ್ರೋಟೀನ್: 41–58%, ಫ್ಯಾಟ್: 5% ಇರುತ್ತದೆ.
·ಮಿಥಿಯೋನಿನ್ ಹಾಗೂ ಟ್ರೈಪ್ಟೋಫಾನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಲೈಸಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ.
·ಹೆಚ್ಚಿನ ಪ್ರಮಾಣದ Oxalic (35 mg/100 g) & Phytic acid (5 %) ಹೊಂದಿರುತ್ತದೆ. ಇದರಿಂದ ದೇಹಕ್ಕೆ ವಿವಿಧ ಖನಿಜಗಳ ದೊರಕುವಿಕೆಯ ಪ್ರಮಾಣ ಕುಗ್ಗುತ್ತದೆ.
·ಪ್ರೋಟೀನ್ (16–18%) ಮತ್ತು ಶಕ್ತಿ ಕಡಿಮೆ, ಫೈಬರ್(20 %) ಹೆಚ್ಚು.
·ಫೀಡ್ ಎನ್ಜೈಮ್ ಪೂರಕವಾಗಿ ನೀಡುವುದರಿಂದ ಶಕ್ತಿ ಹೆಚ್ಚಿಸಬಹುದು.
·ಎಣ್ಣೆ 30%, ಫೈಬರ್ ಹೆಚ್ಚು (60%) ಮತ್ತು ಪ್ರೋಟೀನ್ ಕಡಿಮೆ (20%) ಇರುತ್ತದೆ.
·ಲೈಸಿನ್ ಹಾಗೂ ಮೆಥಿಯೋನಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ.
·ಫಿನೋಲಿಕ ಗ್ಲುಕೊಸೈಡ್ಸ ಎಂಬ ಹಾನಿಕಾರಕ ಪದಾಥ೯ ಇದರಲ್ಲಿರುತ್ತದೆ.
·ಇದು ಸೈನೋಜೆನಿಕ ಗ್ಲುಕೊಸೈಡ್ಸ ಎಂಬ ಹಾನಿಕಾರಕ ಪದಾಥ೯ ಹೊಂದಿರುವುದರಿಂದ ಇದನ್ನು 2–3% ಮಟ್ಟದಲ್ಲಿ ಮಾತ್ರ ಆಹಾರದಲ್ಲಿ ಬಳಸಬಹುದು.
·ಟ್ರೈಪ್ಟೋಫಾನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗೂ ಇದರಲ್ಲಿರುವ ಸಣ್ಣ ಪ್ರಮಾಣದ ಅಗತ್ಯವಾದ ಕೊಬ್ಬಿನಾಮ್ಲಗಳು ಗರಿಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
·ಮೃದು ವಿಸರ್ಜಕ ಗುಣ ಹೊಂದಿದೆ.
·ಪ್ರಾಣಿ ಪ್ರೋಟೀನ್ ಮೂಲಗಳು ಸಸ್ಯ ಪ್ರೋಟೀನ್‌ಗಿಂತ ಶ್ರೇಷ್ಟವಾಗಿವೆ.
·ಅವು “ಲೈಸಿನ್” ಮತ್ತು “ಮಿಥಿಯೋನಿನ್” ನಂತಹ ಪ್ರಮುಖ ಅಮೀನೋ ಆಮ್ಲಗಳನ್ನು ಹೆಚ್ಚು ಹೊಂದಿವೆ.
·ಪ್ರಾಣಿ ಪ್ರೋಟೀನ್ ಸಸ್ಯ ಪ್ರೋಟೀನ್ ಜೊತೆಗೆ ಸೇರಿಸಿ ಆಹಾರದಲ್ಲಿ ಸಮತೋಲಿತ ಅಮೀನೋ ಆಮ್ಲ ಪ್ರೊಫೈಲ್ ಪಡೆಯಬಹುದು.
·ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಗಳ ಉತ್ತಮ ಮೂಲ ಮತ್ತು ವಿಟಮಿನ್ B12 ನೀಡುವ ಏಕೈಕ ಆಹಾರ ಘಟಕವೇ ಪ್ರಾಣಿ ಪ್ರೋಟೀನ್.
·ಬ್ಲಡ್ ಮಿಲ್ ಮತ್ತು ಫೆದರ್ ಮಿಲ್ ಸಾಮಾನ್ಯವಾಗಿ ಕೋಳಿ ಆಹಾರದಲ್ಲಿ ಬಳಸಲಾಗುವುದಿಲ್ಲ. ಏಕೆಂದರೆ ಅವುಗಳಲ್ಲಿ ಸಮತೋಲಿತ ಅಮೀನೋ ಆಮ್ಲ ಪ್ರೊಫೈಲ್ ಇರುವುದಿಲ್ಲ. ಬಳಸಿದರೂ ಕೇವಲ 2% ವರೆಗೆ ಮಾತ್ರ ಬಳಸಬಹುದು.
·ಮೀನು ಮೀಲ್ ನ ಮೌಲ್ಯವು ಉಪಯೋಗಿಸಿದ ಮೀನು ಮತ್ತು ಮೀನು ಪ್ರಕಾರದ ಮೇಲೆ ಅವಲಂಬಿತವಾಗಿದೆ.
·ಮೀನು ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಮೂಲ. ಕ್ರೂಡ್ ಪ್ರೋಟೀನ್ 40%–60% ವರೆಗೆ ಇರುತ್ತದೆ.
·ಲೈಸಿನ್, ಮಿಥಿಯೋನಿನ್, ಫಾಸ್ಫರಸ್, ಅಯೋಡಿನ್, ಸೆಲೆನಿಯಂ ಮತ್ತು ವಿಟಮಿನ್ B12 ಉತ್ತಮ ಮೂಲ.
·ಮೀನು ಆಹಾರ ವ್ಯಾಕ್ಯೂಮ್ ಅಥವಾ ಸ್ಟೀಮ್ ದಿಂದ ಒಣಗಿಸಿರಬಹುದು. ಎಣ್ಣೆ ಹೆಚ್ಚಿರುವ ಮೀನು ಆಹಾರವನ್ನು ದೀರ್ಘಕಾಲ ಸಂಗ್ರಹಿಸಲು ಸಾಧ್ಯವಿಲ್ಲ. ಇದರಿಂದ ಆಕ್ಸಿಡೇಶನ್ ಉಂಟಾಗಿ ಅಮೈನೋ ಆಮ್ಲದ ಜೀರ್ಣಸಾಧ್ಯತೆಯನ್ನು ಕಡಿಮೆ ಮಾಡಬಹುದು.
·ಒಣ ಮೀನು ಮತ್ತು ಮೀನಿನ ಆಹಾರವು ಕೋಲಿಫಾರ್ಮ್ ಮತ್ತು ಸಾಲ್ಮೊನೆಲ್ಲಾ ಸೋಂಕಿನ ಸಂಭಾವ್ಯ ಮೂಲವಾಗಿವೆ ಮತ್ತು ಇದು ಮಳೆಗಾಲದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಕೋಳಿ ಆಹಾರದಲ್ಲಿ ಇದರ ಸೇರಿಸುವಿಕೆಯು ಗರಿಷ್ಠ 10% ಮಾತ್ರ.
·ಹೆಚ್ಚು ಪ್ರಮಾಣದಲ್ಲಿ ಸೇರಿಸಿದರೆ ಆಹಾರದಲ್ಲಿ ಮೀನು ರುಚಿ ಉಂಟಾಗಿ, ಕೋಳಿಗಳು ಆಹಾರ ತಿನ್ನುವುದಿಲ್ಲ. “Gizzerosine” ಮತ್ತು “Histamine” ನಂತಹ ರಾಸಾಯನಿಕಗಳು ಕೋಳಿಯ ಗಿಜಾಡ೯ಗೆ ಹಾನಿ ಮಾಡಬಹುದು.
·ಮಾಂಸ ಮೀಲ್ ಪ್ರಾಣಿ ಉಪಉತ್ಪನ್ನಗಳಿಂದ (ಮಾಂಸ ತುಂಡುಗಳು, ಮಾನವರು ತಿನ್ನದ ಭಾಗಗಳು) ತಯಾರಿಸಲಾದ ಆಹಾರ.
·ಇದನ್ನು ಬೇಯಿಸಿ ಪೌಷ್ಟಿಕ ಮತ್ತು ಕಡಿಮೆ ವೆಚ್ಚದಲ್ಲಿ ತಯಾರಿಸಲಾಗುತ್ತದೆ.
·ರಕ್ತ, ಕೂದಲು, ಕಾಲುಗಳು, ತ್ವಚೆ, ಹೊಟ್ಟೆಯ ಭಾಗಗಳು ಸೇರಿಸಲಾಗುವುದಿಲ್ಲ.
·ಕ್ರೂಡ್ ಪ್ರೋಟೀನ್ ಕನಿಷ್ಠ 50% ಇರುತ್ತದೆ.
·ಫಾಸ್ಫರಸ್ 4% ನಷ್ಟಿದ್ದು, ಕ್ಯಾಲ್ಸಿಯಂ ಫಾಸ್ಫರಸ್ ಮಟ್ಟವು 2.2 ಪಟ್ಟು ಮೀರುವುದಿಲ್ಲ.
·ಕೋಳಿ ಆಹಾರದಲ್ಲಿ 5% ಕ್ಕಿಂತ ಕಡಿಮೆ ಪ್ರಮಾಣ ಮಾತ್ರ ಸೇರಿಸಲಾಗುತ್ತದೆ.
·ಪೌಷ್ಟಿಕ ಅಂಶಗಳು: ಕ್ರೂಡ್ ಪ್ರೋಟೀನ್ 49–52.8%, ಕ್ರೂಡ್ ಫ್ಯಾಟ್ 8.5–14.8%, ಕ್ಯಾಲ್ಸಿಯಂ 6–12%, ಫಾಸ್ಫರಸ್ 3.5–5%, ಲೈಸಿನ್ 2.2–3%, ME 1770–2420 kcal/kg
·80–85% ಪ್ರೋಟೀನ್.
·ಸಲ್ಪರ್ ಹೊಂದಿರುವ ಅಮೀನೋ ಆಮ್ಲಗಳ ಉತ್ತಮ ಮೂಲ.
·ಕ್ಯಾಲ್ಸಿಯಂನ ಉತ್ತಮ ಮೂಲ.
· ಮೆಗ್ನೇಸಿಯಂ 5% ಮೀರಿರಬಾರದು.
·ಕ್ಯಾಲ್ಸಿಯಂ >38%, ಲೈಮ್‌ಸ್ಟೋನ್ ಗೆ ಉತ್ತಮ ಪರ್ಯಾಯ.
·ರುಚಿಕರ, ಹಕ್ಕಿಗಳು ಸುಲಭವಾಗಿ ತಿನ್ನುತ್ತವೆ.
| ಪದಾರ್ಥಗಳು | ಶಕ್ತಿ (Kcal/Kg) | ಪ್ರೋಟೀನ್ (%) |
|---|---|---|
| ಹಳದಿ ಮೆಕ್ಕೆಜೋಳ (Yellow Maize) | 3617 | 9.2 |
| ಮೆಕ್ಕೆಜೋಳ ಧಾನ್ಯ (Maize Grain) | 3300 | 8 |
| ಬಾಲಿ೯ (Barley Grain) | 2840 | 11.5 |
| ಸಜ್ಜೆ (Bajra Grain) | 2642 | 13.1 |
| ಓಟ್ಸ್ (Oat) | 2620 | 12 |
| ಜೋಳ (Sorghum Grain) | 2645 | 10.1 |
| ಗೋಧಿ (Wheat Grain) | 3250 | 13 |
| ಗೋಧಿ ಸಿಪ್ಪೆ (Wheat Bran) | 1300 | 15 |
| ಅಕ್ಕಿ (Rice) | 2845 | 8.3 |
| ಪೊಲಿಶ್ ಅಕ್ಕಿ (Rice Polish) | 2860 | 12 |
| ಟಾಪಿಯೋಕ ಮೀಲ್ (Tapioca Meal) | 3000 | 3.3 |
| ಮೆಕ್ಕೆಜೋಳ ಗ್ಲೂಟೆನ್ ಮೀಲ್ (Maize Gluten Meal) | 2705 | 48.4 |
| ಸಾಸಿವೆ ಮೀಲ್ (Mustard Meal) | 2370 | 35 |
| ಗುವಾರ್ ಮೀಲ್ (Guar Meal) | 2300 | 42 |
| ಲಿನ್ಸಿಡ್ ಮೀಲ್ (Linseed Meal) | 1671 | 28.5 |
| ರಕ್ತ ಮೀಲ್ (Blood Meal) | 2850 | 80 |
| ಮಾಂಸ ಮೀಲ್ (Meat Meal) | 2319 | 56.2 |
| ಮೀನು ಮೀಲ್ (Fish Meal) | 2770 | 58 |
| ರೇಷ್ಮೆ ಪುಪೆ ಮೀಲ್(Silk Worm Pupae Meal) | 3000 | 69.8 |
| ಕೊಬ್ಬುತೆಗೆದ ಹಾಲಿನ ಮೀಲ್ (Skim Milk Dried) | 0 | 35 |
| ಕೋಳಿ ಉಪಉತ್ಪನ್ನ ಮೀಲ್ (Poultry Byproduct Meal) | 0 | 63.1 |
| ಎಣ್ಣೆ | ಶಕ್ತಿ (Kcal/Kg) |
|---|---|
| ತಾಳೆ ಎಣ್ಣೆ (Palm Oil) | 8300 |
| ಅಕ್ಕಿ ಹೊಟ್ಟು ಎಣ್ಣೆ (Rice Bran Oil) | 8500 |
| ಸಾಸಿವೆ ಎಣ್ಣೆ (Mustard Oil) | 8500 |
| ಸೋಯಾಬೀನ ಎಣ್ಣೆ (Soya Bean Oil) | 8800 |
| ಸೂರ್ಯಕಾಂತಿ ಎಣ್ಣೆ (Sunflower Oil) | 8800 |
1. ಕೋಳಿ ಆಹಾರವು ಅವುಗಳ ಪ್ರಕಾರ, ವರ್ಗ ಮತ್ತು ಋತುಮಾನವನ್ನು ಅವಲಂಬಿಸಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಶಕ್ತಿ, ನಾರು, ಖನಿಜಗಳು, ಜೀವಸತ್ವಗಳು ಮತ್ತು ತೇವಾಂಶದಂತಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರಬೇಕು.
2. ಆಹಾರವು ಸಾಲ್ಮೊನೆಲ್ಲಾ, ಇ ಕೋಲೈ ಇತ್ಯಾದಿ ರೋಗಕಾರಕ ಜೀವಿಗಳಿಂದ ಮುಕ್ತವಾಗಿರಬೇಕು ಮತ್ತು ಗಾಸಿಪೋಲ್, ಅಫ್ಲಾಟಾಕ್ಸಿನ್ ನಂತಹ ಮುಂತಾದ ವಿಷಕಾರಿ ಅಂಶಗಳಿಂದ ಮುಕ್ತವಾಗಿರಬೇಕು.
3. ಪೌಷ್ಟಿಕಾಂಶಗಳ ನಷ್ಟವನ್ನು ತಪ್ಪಿಸಲು ಮತ್ತು ಕಳೆಗುಂದುವಿಕೆ, ಶಿಲೀಂಧ್ರಗಳ ಬೆಳವಣಿಗೆ, ಮತ್ತು ಇಲಿಗಳಿಂದ ಹಾಳಾಗುವುದನ್ನು ತಡೆಯಲು ಸಿದ್ಧಪಡಿಸಿದ ಆಹಾರವನ್ನು 1 ರಿಂದ 1.5 ತಿಂಗಳುಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಾರದು.
4. ಫೀಡರ್‌ಗಳಲ್ಲಿ ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಫೀಡರ್‌ಗಳಲ್ಲಿ ಕೇಕ್‌ಗಳ ರಚನೆಯನ್ನು ತಪ್ಪಿಸಬೇಕು.
5. ಆಹಾರ ವ್ಯರ್ಥವಾಗುವುದನ್ನು ನಿಯಂತ್ರಿಸಲು ಫೀಡರ್‌ಗಳನ್ನು 1/3 ರಿಂದ ½ ಮಟ್ಟಕ್ಕಿಂತ ಹೆಚ್ಚು ತುಂಬಿಸಬಾರದು.
6. ಋತುವಿನ ಅಗತ್ಯಕ್ಕೆ ಅನುಗುಣವಾಗಿ ಪೋಷಕಾಂಶಗಳ ಮಟ್ಟವನ್ನು ಬದಲಾಯಿಸಬೇಕು.
7. ಅತ್ಯುತ್ತಮ ಸೇವನೆಗೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಸರಿಯಾದ ಸೇವನೆಯನ್ನು ಖಚಿತಪಡಿಸಿಕೊಳ್ಳಲು ಮ್ಯಾಶ್ ಅಥವಾ ಉಂಡೆಗಳ ರೂಪದಲ್ಲಿ ಕನಿಷ್ಠ ಎರಡು ಬಾರಿ ಆಹಾರ ನೀಡುವುದು ಒಳ್ಳೆಯದು.
8. ಯಾವುದೇ ಹಂತದಲ್ಲಿ ಕೋಳಿಗಳಿಗೆ ಕಡಿಮೆ ಅಥವಾ ಅತಿಯಾಗಿ ಆಹಾರವನ್ನು ನೀಡಬಾರದು.
·ಸಂಪೂರ್ಣ ಪುಡಿ ಮಾಡಿ ಧಾನ್ಯಗಳನ್ನು ಬಳಸಲಾಗುತ್ತದೆ.
·ಕೋಳಿ ಸಾಕಣೆಯ ಶ್ರೇಣಿಯ ವ್ಯವಸ್ಥೆಯಲ್ಲಿ ಧಾನ್ಯ ಬೆಸೆಯುವಿಕೆಯು ಅತ್ಯಂತ ಹಳೆಯ ವ್ಯವಸ್ಥೆಯಾಗಿದ್ದು, ಈ ಆಹಾರ ವ್ಯವಸ್ಥೆಯನ್ನು ಮತ್ತೊಮ್ಮೆ ಸಾವಯವ ಕೃಷಿ ವ್ಯವಸ್ಥೆಯಲ್ಲಿ ಪರಿಚಯಿಸಲಾಗುತ್ತಿದೆ.
·ಇದು ದೊಡ್ಡ ಪ್ರಮಾಣದ ಕೋಳಿ ಸಾಕಾಣಿಕೆಗೆ ಸೂಕ್ತವಲ್ಲ.
·ಧಾನ್ಯಗಳನ್ನು ತಿನ್ನುವ ಪಕ್ಷಿಗಳು ದೊಡ್ಡ ಗಿಜಾರ್ಡ್ ಅನ್ನು ಹೊಂದಿರುತ್ತವೆ. ಸಮತೋಲಿತ ಧಾನ್ಯದ ಆಹಾರವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಪಕ್ಷಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
·ಆಹಾರವು ಸಮತೋಲಿತವಾಗಿರುವುದಿಲ್ಲ ಮತ್ತು ಹೆಚ್ಚಾಗಿ ಅಮೈನೋ ಆಮ್ಲಗಳ ಕೊರತೆಯನ್ನು ಹೊಂದಿರುತ್ತದೆ.
·ಮಾಂಸಕ್ಕಾಗಿ ಸಾಕುತ್ತಿರುವ ಕೋಳಿಗಳಲ್ಲಿ, ಅಗತ್ಯವಿರುವ ತೂಕವನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಮೊಟ್ಟೆಗಾಗಿ ಸಾಕುತ್ತಿರುವ ಕೋಳಿಗಳಲ್ಲಿ, ಮೊಟ್ಟೆಯ ಉತ್ಪಾದನೆ ಕಡಿಮೆ ಮಾಡುತ್ತದೆ.
·ಇದು ಪಕ್ಷಿಗಳಿಗೆ ಆಹಾರ ನೀಡುವ ತುಂಬಾ ಸುಲಭ ಮತ್ತು ಅಗ್ಗವಾದ ವಿಧಾನವಾಗಿದೆ.
·ಅನೇಕ ಆಹಾರ ಪದಾರ್ಥಗಳು ಪುಡಿಮಾಡಿದ ರೂಪದಲ್ಲಿರುತ್ತವೆ.
- ಮ್ಯಾಶ್ ಎಂದರೆ ಪ್ರತಿಯೊಂದು ತುಂಡು ಆಹಾರವು ಎಲ್ಲಾ ಪೋಷಕಾಂಶಗಳನ್ನು ಹೊಂದಿದ ಸಮತೋಲಿತ ಆಹಾರ ಆಗಿರುತ್ತದೆ. ಆದರೆ, ಪಕ್ಷಿಗಳಿಗೆ ನುಣ್ಣಗೆ ಪುಡಿಮಾಡಿದ ಮ್ಯಾಶ್‌ಗಳು ರುಚಿಕರವನಿಸುವುದಿಲ್ಲ. ಅವು ತುಂಬಾ ಒಣಗಿರುತ್ತವೆ ಮತ್ತು ಜಿಗುಟಾಗಿರುತ್ತವೆ.
- ಮಧ್ಯಮ ಕಣಗಳ ಗಾತ್ರದ ವಸ್ತುಗಳಿಂದ ಕೂಡಿದ ಮ್ಯಾಶ್‌ಗಳನ್ನು ಕೋಳಿಗಳು ಸುಲಭವಾಗಿ ತಿನ್ನುತ್ತವೆ.
- ಮ್ಯಾಶ್ ಅನ್ನು ವಿಶೇಷ ಯಂತ್ರಗಳಲ್ಲಿ ಒತ್ತಿಒತ್ತಿಯಾಗಿ ಹಾಕಿ ವಿವಿಧ ಗಾತ್ರದ ಪೆಲೆಟ್ ರೂಪದಲ್ಲಿ ಕೊಡಲಾಗುತ್ತದೆ.
- ಸಣ್ಣದಾಗಿ ಪುಡಿ ಮಾಡಿದ ಪೆಲೆಟ್ ಅನ್ನು ಸಣ್ಣ ಕೋಳಿಗಳಿಗೆ ನೀಡಲಾಗುತ್ತದೆ.
- ಪೆಲೆಟ್‌ಗಳನ್ನು ಹಾರ್ಡ್ ಅಥವಾ ಸಾಫ್ಟ್ ಮತ್ತು ಸ್ಟೀಮ್ ಅಥವಾ ಕೋಲ್ಡ್ ಪ್ರಕಾರದಲ್ಲಿ ವರ್ಗೀಕರಿಸಲಾಗುತ್ತದೆ.
·ಕೋಳಿಗಳಿಗೆ ಸಾಮಾನ್ಯವಾಗಿ ಮೂರು ರೀತಿಯ ಆಹಾರ ನೀಡಲಾಗುತ್ತದೆ.
1. ಶಕ್ತಿ ಮೂಲ (ಧಾನ್ಯ)
2. ಪ್ರೋಟೀನ್ ಮೂಲ (ಸೋಯಾಬೀನ್, ಮೀನು ಮೀಲ್, ಮಾಂಸ ಮೀಲ್ ಇತ್ಯಾದಿ)
3. ವಿಟಮಿನ್ ಮತ್ತು ಖನಿಜಗಳು
·ಮೊಟ್ಟೆಕೊಡುವ ಕೋಳಿಗಳಿಗೆ ಕ್ಯಾಲ್ಸಿಯಂ ಶೆಲ್‌ಗಳು ಹರಳಿನ ರೂಪದಲ್ಲಿ ನೀಡುವುದು ಉತ್ತಮ.
·ರುಬ್ಬುವುದು ಮತ್ತು ಮಿಶ್ರಣ ಮಾಡುವ ವೆಚ್ಚ ಕಡಿಮೆ.
·ಕೋಳಿ ತನ್ನ ಶರೀರದ ಅವಶ್ಯಕತೆಗಳಿಗೆ ತಕ್ಕಂತೆ ಆಹಾರ ಆಯ್ಕೆ ಮಾಡಬಹುದು.
·ಹೆಚ್ಚಿನ ಫೀಡರ್‌ಗಳು, ಹೆಚ್ಚಿನ ಆಹಾರ ಸ್ಥಳ ಮತ್ತು ನೆಲದ ಸ್ಥಳ ಅಗತ್ಯ.
·ಈ ವಿಧಾನವನ್ನು ಕೇಜ್ ವ್ಯವಸ್ಥೆಯಲ್ಲಿ ಅನುಸರಿಸಲಾಗುವುದಿಲ್ಲ.
·ದೇಹದ ತೂಕವನ್ನು ನಿಯಂತ್ರಿಸಲು, ಲೈಂಗಿಕ ಪ್ರಬುದ್ಧತೆಯನ್ನು ವಿಳಂಬಗೊಳಿಸಲು ಮತ್ತು ಹೆಚ್ಚುವರಿ ಕೊಬ್ಬು ಶೇಖರಣೆಯನ್ನು ತಡೆಗಟ್ಟಲು ಸೀಮಿತ ಆಹಾರ ಸೇವನೆ ಅತ್ಯಗತ್ಯ.
1. ಆಹಾರ ನೀಡುವ ಸಮಯವನ್ನು ಮಿತಿಗೊಳಿಸುವುದು:
a. ಒಂದು ದಿನ ಆಹಾರ ನೀಡುವುದನ್ನು ಬಿಟ್ಟುಬಿಡಿ
b. ಎರಡು ದಿನ ಆಹಾರ ನೀಡುವುದನ್ನು ಬಿಟ್ಟುಬಿಡಿ
2. ಕಡಿಮೆ ಆಹಾರ ಮೌಲ್ಯಗಳನ್ನು ಹೊಂದಿರುವ ಪದಾರ್ಥಗಳನ್ನು ಬಳಸಿ ಆಹಾರವನ್ನು ದುರ್ಬಲಗೊಳಿಸುವುದು.
3. ಶಕ್ತಿಯ ನಿರ್ಬಂಧ
4. ಪ್ರೋಟೀನ್ ನಿರ್ಬಂಧ
5. ಆಹಾರದ ಪ್ರಮಾಣ ನಿರ್ಬಂಧ
·ಬ್ರೀಡರ್ ಗಂಡು ಕೋಳಿಗಳಿಗೆ 13-14% ಪ್ರೋಟೀನ್ ಇರುವ ಪ್ರೋಟೀನ್ ಆಹಾರವನ್ನು ಮಾತ್ರ ನೀಡಬೇಕು ಏಕೆಂದರೆ ಹೆಚ್ಚಿನ ಪ್ರೋಟೀನ್ ಆಹಾರವು ವೀರ್ಯದ ಗುಣಮಟ್ಟ ಮತ್ತು ವೀರ್ಯದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಗಂಡು ಕೋಳಿಗಳಿಗೆ ಲಿಂಗ ಪ್ರತ್ಯೇಕ ಆಹಾರವನ್ನು ಅನುಸರಿಸಬೇಕಾಗುತ್ತದೆ.
·ಗಂಡು ಮತ್ತು ಹೆಣ್ಣು ಕೋಳಿಗಳಿಗೆ ಪ್ರತ್ಯೇಕ ಆಹಾರವನ್ನು ಫೀಡರ್‌ಗಳಲ್ಲಿ ಸ್ಲ್ಯಾಟ್ ಮತ್ತು ಡೀಪ್ ಲಿಟ್ಟರ್ ವ್ಯವಸ್ಥೆಯಲ್ಲಿ ಆಹಾರವನ್ನು ನೀಡಲಾಗುತ್ತದೆ.
·ಕೋಳಿಗಳ ಬೆಳವಣಿಗೆಯ ಅವಧಿಯನ್ನು ವಿವಿಧ ಹಂತಗಳಲ್ಲಿ ವಿಭಜಿಸಿ, ಪ್ರತಿ ಹಂತದ ಪೋಷಕಾಂಶ ಅಗತ್ಯವನ್ನು ಪೂರೈಸುವಂತೆ ಆಹಾರ ನೀಡುವ ವಿಧಾನವನ್ನು ಫೇಸ್ ಫೀಡಿಂಗ್ ಎಂದು ಕರೆಯುತ್ತಾರೆ.
·BIS, 2007 ಪ್ರಕಾರ:
* ಬ್ರಾಯ್ಲರ್‌ಗಳು: ಮೂರು ಹಂತಗಳಲ್ಲಿ ಆಹಾರ ಪಡೆಯುತ್ತವೆ – ಪ್ರೀಸ್ಟಾರ್ಟರ್ (Prestarter), ಸ್ಟಾರ್ಟರ್ (Starter), ಫಿನಿಶರ್ (Finisher)
* ಲೆಯರ್‌ಗಳು: ಸ್ಟಾರ್ಟರ್, ಗ್ರೋವರ್, ಲೇಯರ್ ಫೇಸ್ I ಮತ್ತು ಲೇಯರ್ ಫೇಸ್ II ಹಂತಗಳಲ್ಲಿ ಆಹಾರ ಪಡೆಯುತ್ತವೆ.
| ಪೋಷಕಾಂಶಗಳು | ಪ್ರೀಸ್ಟಾರ್ಟರ್ (Prestarter) | ಸ್ಟಾರ್ಟರ್ (Starter) | ಫಿನಿಶರ್ (Finisher) |
|---|---|---|---|
| ಶಕ್ತಿ (ME, Kcal/kg) | 3000 | 3100 | 3200 |
| ಪ್ರೋಟೀನ್ (%) | 23 | 22 | 20 |
| ಕ್ಯಾಲ್ಸಿಯಂ (%) | 1 | 1 | 1 |
| ಲಭ್ಯವಿರುವ ಫಾಸ್ಫರಸ್ (%) | 0.45 | 0.45 | 0.45 |
| ಲೈಸಿನ್ (%) | 1.3 | 1.2 | 1 |
| ಮಿಥಿಯೋನಿನ್ (%) | 0.5 | 0.5 | 0.45 |
| ಪೋಷಕಾಂಶಗಳು | ಮರಿಗಳು (0–8 ವಾರಗಳು) | ಗ್ರೋವರ್ (9–20 ವಾರಗಳು) | ಲೇಯರ್ ಹಂತ I (21–45 ವಾರಗಳು) | ಲೇಯರ್ ಹಂತ II (46–72 ವಾರಗಳು) |
|---|---|---|---|---|
| ಶಕ್ತಿ (ME ಕನಿಷ್ಠ, Kcal/kg) | 2800 | 2500 | 2600 | 2400 |
| ಕ್ರೂಡ್ ಪ್ರೋಟೀನ್ ಕನಿಷ್ಠ (%) | 20 | 16 | 18 | 16 |
| ಕ್ರೂಡ್ ಫೈಬರ್ ಗರಿಷ್ಠ (%) | 7 | 9 | 9 | 10 |
| ಮಿಥಿಯೋನಿನ್ ಕನಿಷ್ಠ (%) | 0.4 | 0.35 | 0.35 | 0.30 |
| ಕ್ಯಾಲ್ಸಿಯಂ ಕನಿಷ್ಠ (%) | 1 | 1 | 3 | – |
| ಲಭ್ಯವಿರುವ ಫಾಸ್ಫರಸ್ (%) | 0.7 | 0.65 | 0.65 | – |
| ಲೈಸಿನ್ ಕನಿಷ್ಠ (%) | 1.0 | 0.7 | 0.7 | – |