Responsive Image

ಹಿತ್ತಲಿನ ಸುಧಾರಿತ ಕೋಳಿ ತಳಿಗಳು

ಹಿತ್ತಲಿನ ಸುಧಾರಿತ ಕೋಳಿ ತಳಿಗಳು :

ಗ್ರಾಮೀಣ ಕೋಳಿ ಉತ್ಪಾದನೆಗಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊಟ್ಟೆಯ ಉದ್ದೇಶದ ಸುಧಾರಿತ ಪ್ರಭೇದಗಳು

ತಳಿಯ ಹೆಸರು ಅಭಿವೃದ್ಧಿಪಡಿಸಿದ ಸ್ಥಳ/ರಾಜ್ಯ ಗುಣಲಕ್ಷಣಗಳು/ಉತ್ಪಾದನಾ ಲಕ್ಷಣಗಳು
ಗ್ರಾಮಪ್ರಿಯ ಹೈದರಾಬಾದ್, ತೆಲಂಗಾಣ 6 ವಾರಗಳ ವಯಸ್ಸಿನಲ್ಲಿ ಮತ್ತು ಪಕ್ವತೆಯ ಸಮಯದಲ್ಲಿ ದೇಹದ ತೂಕ ಕ್ರಮವಾಗಿ 400-500 ಗ್ರಾಂ ಮತ್ತು 1600-1800 ಗ್ರಾಂ ನಷ್ಟಿರುತ್ತದೆ. ಮೊದಲ ಮೊಟ್ಟೆಯಿಡುವ ವಯಸ್ಸು 160-165 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ (72 ವಾರಗಳು) 160-180.
CARI ನಿರ್ಭೀಕ್ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಇದು ಭಾರತೀಯ ಸ್ಥಳೀಯ ತಳಿ ಅಸೀಲ್ ಮತ್ತು CARl ರೆಡ್ ನ ಮಿಶ್ರತಳಿಯಾಗಿದೆ. 20 ವಾರಗಳಲ್ಲಿ ಗಂಡು ಮತ್ತು ಹೆಣ್ಣು ಕೋಳಿಗಳ ದೇಹದ ತೂಕ ಕ್ರಮವಾಗಿ 1847 ಗ್ರಾಂ ಮತ್ತು 1350 ಗ್ರಾಂ ನಷ್ಟಿರುತ್ತದೆ. ಲೈಂಗಿಕ ಪ್ರಬುದ್ಧತೆಯ ವಯಸ್ಸು 176 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 198.
CARI ಶ್ಯಾಮ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಇದು ಭಾರತೀಯ ಸ್ಥಳೀಯ ಕೋಳಿಯಾದ ಕಡಕನಾಥ್ ತಳಿ ಮತ್ತು CARl ರೇಡ್ ಕೋಳಿಯ ಮಿಶ್ರತಳಿಯಾಗಿದೆ. 20 ವಾರಗಳಲ್ಲಿ ಗಂಡು ಮತ್ತು ಹೆಣ್ಣು ಕೋಳಿಗಳ ದೇಹದ ತೂಕ ಕ್ರಮವಾಗಿ 1460 ಗ್ರಾಂ ಮತ್ತು 1120 ಗ್ರಾಂ ನಷ್ಟಿರುತ್ತದೆ. ಲೈಂಗಿಕ ಪ್ರಬುದ್ಧತೆಯ ವಯಸ್ಸು 170 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 210. ಮಾಂಸವು ಪ್ರೋಟೀನ್‌ನಲ್ಲಿ (25.47%) ಬಹಳ ಸಮೃದ್ಧವಾಗಿದೆ.
CARI ಹಿತಕಾರಿ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಭಾರತೀಯ ಸ್ಥಳೀಯ ನೇಕೆಡ್ ನೆಕ್ ಅನ್ನು ವಿದೇಶಿ ತಳಿ CARI ರೆಡ್‌ನೊಂದಿಗೆ ಸಂಕರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. 20 ವಾರಗಳಲ್ಲಿ ಗಂಡು ಮತ್ತು ಹೆಣ್ಣು ಪ್ರಾಣಿಗಳ ದೇಹದ ತೂಕ ಕ್ರಮವಾಗಿ 1756 ಗ್ರಾಂ ಮತ್ತು 1320 ಗ್ರಾಂ ನಷ್ಟಿರುತ್ತದೆ. ಲೈಂಗಿಕ ಪ್ರಬುದ್ಧತೆಯ ವಯಸ್ಸು 178 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 200.
CARI ಉಪಕಾರಿ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಸುರುಳಿಯಾಗಿರುವ ಪುಕ್ಕ ಹೊಂದಿರುವ ಭಾರತೀಯ ಸ್ಥಳೀಯ ಕೋಳಿಯನ್ನು CARI ರೆಡ್‌ನೊಂದಿಗೆ ಸಂಕರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದು ವಿಭಿನ್ನ ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ನಾಲ್ಕು ವಿಭಿನ್ನ ಪ್ರಭೇದಗಳನ್ನು ಹೊಂದಿದೆ. 20 ವಾರಗಳಲ್ಲಿ ದೇಹದ ತೂಕವು ಗಂಡು ಮತ್ತು ಹೆಣ್ಣುಗಳಿಗೆ ಕ್ರಮವಾಗಿ 1688 ಗ್ರಾಂ ಮತ್ತು 1285 ಗ್ರಾಂ. ಲೈಂಗಿಕ ಪ್ರಬುದ್ಧತೆಯ ವಯಸ್ಸು 165 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 220 ಆಗಿದೆ.
ಗ್ರಾಮ ಲಕ್ಷ್ಮಿ ಮನ್ನುತಿ, ಕೇರಳ ಲೈಂಗಿಕ ಪ್ರಬುದ್ಧತೆಯ ವಯಸ್ಸು 160 ದಿನಗಳು.
50% ಮೊಟ್ಟೆ ಉತ್ಪಾದನೆಯಾದಾಗ ವಯಸ್ಸು 180 ದಿನಗಳು.
ಒಟ್ಟು ಮೊಟ್ಟೆ ಉತ್ಪಾದನೆ (72 ವಾರಗಳು) 180-200 ಮೊಟ್ಟೆಗಳು.
72 ವಾರಗಳಲ್ಲಿ ದೇಹದ ತೂಕ 1.7 ಕಿ.ಗ್ರಾಂ
ಅಥುಲ್ಯಾ ಕೇರಳ ಲೈಂಗಿಕ ಪ್ರಬುದ್ಧತೆಯ ವಯಸ್ಸು 123 ದಿನಗಳು.
50% ಮೊಟ್ಟೆ ಉತ್ಪಾದನೆಯಲ್ಲಿ ವಯಸ್ಸು 145 ದಿನಗಳು.
ಒಟ್ಟು ಮೊಟ್ಟೆ ಉತ್ಪಾದನೆ (72 ವಾರಗಳು) 280-290 ಮೊಟ್ಟೆಗಳು.
72 ವಾರಗಳಲ್ಲಿ ದೇಹದ ತೂಕ 1.5 ಕಿ.ಗ್ರಾಂ.
ಕಳಿಂಗ ಬ್ರೌನ್ ಭುವನೇಶ್ವರ, ಒಡಿಶಾ ಇದು ವೈಟ್ ಲೆಗ್‌ ಹಾನ೯ ಮತ್ತು ರೋಡ್ ಐಲ್ಯಾಂಡ್ ರೆಡ್ ಪಕ್ಷಿಗಳ ಮಿಶ್ರತಳಿ. ಮೊದಲ ದಿನ ಮತ್ತು 72 ವಾರಗಳಲ್ಲಿ ದೇಹದ ತೂಕ ಕ್ರಮವಾಗಿ 27 ಗ್ರಾಂ ಮತ್ತು 1689 ಗ್ರಾಂ. ಲೈಂಗಿಕ ಪ್ರಬುದ್ಧತೆಯ ವಯಸ್ಸು 122 ದಿನಗಳು ಮತ್ತು ಗರಿಷ್ಠ ಉತ್ಪಾದನೆಯ ವಯಸ್ಸು 29-32 ವಾರಗಳು. ವಾರ್ಷಿಕ ಮೊಟ್ಟೆ ಉತ್ಪಾದನೆ 265-275 ಮೊಟ್ಟೆಗಳು.
CARI ಪ್ರಿಯಾ ಲೇಯರ್ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಹಿಂದೆ ILI-80 ಎಂದು ಕರೆಯಲ್ಪಡುತ್ತಿದ್ದ, ಬಿಳಿ ಮೊಟ್ಟೆ ಇಡುವ ವಾಣಿಜ್ಯ ಕೋಳಿ. CARl ಪ್ರಿಯವನ್ನು ವೈಟ್ ಲೆಗ್‌ ಹಾರ್ನ್‌ನ ಉತ್ತಮ ಗಂಡು ಮತ್ತು ಹೆಣ್ಣು ತಳಿಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಮೊದಲ ಮೊಟ್ಟೆಯಿಡುವ ವಯಸ್ಸು 17-18 ವಾರಗಳು ಮತ್ತು ಗರಿಷ್ಠ ಮೊಟ್ಟೆ ಉತ್ಪಾದನೆಯು 26-28 ವಾರಗಳಲ್ಲಿ ಕಂಡುಬರುತ್ತದೆ. 150 ದಿನಗಳಲ್ಲಿ 50% ಮೊಟ್ಟೆ ಉತ್ಪಾದನೆ ಕಂಡುಬರುತ್ತದೆ. 72 ವಾರಗಳಲ್ಲಿ 298 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.
CARI ಸೋನಾಲಿ ಲೇಯರ್ (ಗೋಲ್ಡನ್-92) ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಗಂಡು ವೈಟ್ ಲೆಗ್‌ ಹಾರ್ನ್‌ ಮತ್ತು ಹೆಣ್ಣು ರೋಡ್ ಐಲ್ಯಾಂಡ್ ರೆಡ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ತಳಿ ಇದು. ಮೊದಲ ಮೊಟ್ಟೆಯಿಡುವ ವಯಸ್ಸು 18-19 ವಾರಗಳು ಮತ್ತು ಗರಿಷ್ಠ ಮೊಟ್ಟೆ ಉತ್ಪಾದನೆಯು 27-29 ವಾರಗಳಲ್ಲಿ ಕಂಡುಬರುತ್ತದೆ. 155 ದಿನಗಳಲ್ಲಿ 50% ಮೊಟ್ಟೆ ಉತ್ಪಾದನೆ ಕಂಡುಬರುತ್ತದೆ. 72 ವಾರಗಳಲ್ಲಿ 280 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.
ಕಾವೇರಿ ಒಡಿಶಾ 6 ವಾರ ಮತ್ತು 20 ವಾರಗಳಲ್ಲಿ ದೇಹದ ತೂಕ ಕ್ರಮವಾಗಿ 750 ಗ್ರಾಂ ಮತ್ತು 2000-2200 ಗ್ರಾಂ ಇದ್ದು, ಉತ್ತಮ ಸ್ಕ್ಯಾವೆಂಜಿಂಗ್ ಹಕ್ಕಿಯಾಗಿದೆ. 183 ದಿನಗಳಲ್ಲಿ ಲೈಂಗಿಕ ಪ್ರಬುದ್ಧತೆಯನ್ನು ತಲುಪುತ್ತದೆ ಮತ್ತು ವಾರ್ಷಿಕವಾಗಿ 180 ಮೊಟ್ಟೆ ಉತ್ಪಾದನೆಯನ್ನು ಹೊಂದಿರುತ್ತದೆ.

Responsive image

ಗ್ರಾಮಪ್ರಿಯ (ಮೂಲ: ಐಸಿಎಆರ್-ಡಿಪಿಆರ್, ಹೈದರಾಬಾದ್)

Responsive image

ಕೃಷಿಬ್ರೋ (ಮೂಲ: ಐಸಿಎಆರ್-ಡಿಪಿಆರ್, ಹೈದರಾಬಾದ್)

ಭಾರತದಲ್ಲಿ ಮೊಟ್ಟೆ ಉತ್ಪಾದನೆಗಾಗಿ ಅಭಿವೃದ್ಧಿಪಡಿಸಲಾದ ಕೆಲವು ಪ್ರಮುಖ ಪ್ರಭೇದಗಳನ್ನು ಕೋಷ್ಟಕದಲ್ಲಿ ಪ್ರಸ್ತುತಪಡಿಸಲಾಗಿದೆ. ಸುಧಾರಿತ ಮೊಟ್ಟೆ ಇಡುವ ಪ್ರಭೇದಗಳು ಮುಕ್ತ ಶ್ರೇಣಿಯ ಪರಿಸ್ಥಿತಿಗಳಲ್ಲಿ ಒಂದು ವರ್ಷದಲ್ಲಿ 140-170 ಮೊಟ್ಟೆಗಳನ್ನು ಮತ್ತು ಸಂಘಟಿತ ಫಾರ್ಮ್ ಪರಿಸ್ಥಿತಿಗಳಲ್ಲಿ 160-200 ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಹುಂಜಗಳು ಸರಾಸರಿ 2.5-3.5 ಕಿ.ಗ್ರಾಂ ದೇಹದ ತೂಕವನ್ನು ಮತ್ತು ಹೆಣ್ಣು ಕೋಳಿಗಳು 1.5-2.0 ಕಿ.ಗ್ರಾಂ ದೇಹದ ತೂಕವನ್ನು ಹೊಂದಿರುತ್ತವೆ.

Responsive image

CARI ದೇಬೇಂದ್ರ

Responsive image

CARI ಸೋನಾಲಿ

ದ್ವಿ ಉದ್ದೇಶ ಮತ್ತು ಮಾಂಸ ಉದ್ದೇಶದ ತಳಿಗಳು

ತಳಿಯ ಹೆಸರು ಅಭಿವೃದ್ಧಿಪಡಿಸಿದ ಸ್ಥಳ/ರಾಜ್ಯ ಉದ್ದೇಶ ಗುಣಲಕ್ಷಣಗಳು/ಉತ್ಪಾದನಾ ನಿಯತಾಂಕಗಳು
ವನರಾಜ ಹೈದರಾಬಾದ್, ತೆಲಂಗಾಣ ದ್ವಿ ಉದ್ದೇಶ 6 ವಾರಗಳ ವಯಸ್ಸಿನಲ್ಲಿ ತೂಕ 650-750 ಗ್ರಾಂ. ಲೈಂಗಿಕ ಪ್ರಬುದ್ಧತೆಯ ಸಮಯದಲ್ಲಿ ದೇಹದ ತೂಕ 2000-2200 ಗ್ರಾಂ. ಮೊದಲ ಮೊಟ್ಟೆ ಇಡುವ ವಯಸ್ಸು 175-180 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ (72 ವಾರಗಳು) 100-110.
ಕೃಷಿಬ್ರೋ ಹೈದರಾಬಾದ್, ತೆಲಂಗಾಣ ಮಾಂಸ ಉತ್ಪಾದನೆ ಇದು 6 ವಾರಗಳ ವಯಸ್ಸಿನಲ್ಲಿ ಸುಮಾರು 1.5 ಕಿ.ಗ್ರಾಂ ದೇಹದ ತೂಕವನ್ನು ಹೊಂದಿದ್ದು, ಸುಮಾರು 2.0 ಆಹಾರ ಪರಿವರ್ತನೆ ಅನುಪಾತವನ್ನು ಹೊಂದಿರುತ್ತದೆ.
CARI ದೇಬೇಂದ್ರ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ದ್ವಿ ಉದ್ದೇಶ ಸಿಂಥೆಟಿಕ್ ಬ್ರಾಯ್ಲರ್ ಕೋಳಿಗಳನ್ನು ಗಂಡು ಕೋಳಿಗಳಾಗಿ ಮತ್ತು ರೋಡ್ ಐಲ್ಯಾಂಡ್ ರೆಡ್ ಕೋಳಿಗಳನ್ನು ಹೆಣ್ಣು ಕೋಳಿಗಳಾಗಿ ಬಳಸಿ ಈ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಮಧ್ಯಮ ಗಾತ್ರದ ಕೋಳಿಯಾಗಿದ್ದು, 8 ನೇ ಮತ್ತು 12 ನೇ ವಾರಗಳಲ್ಲಿ ಕ್ರಮವಾಗಿ 1100-1200 ಗ್ರಾಂ ತೂಕ ಮತ್ತು 1700-1800 ಗ್ರಾಂ ತೂಕ ಹೊಂದಿರುತ್ತದೆ. ಲೈಂಗಿಕ ಪ್ರಬುದ್ಧತೆಯ ವಯಸ್ಸು 155-160 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆಯು 190-200 ಮೊಟ್ಟೆಗಳು. 8 ವಾರಗಳ ವಯಸ್ಸಿನವರೆಗೆ ಆಹಾರ ಪರಿವರ್ತನೆ ಅನುಪಾತವು ಸುಮಾರು 2.5-2.6 ಆಗಿರುತ್ತದೆ.
ಗಿರಿರಾಜ ಬೆಂಗಳೂರು, ಕರ್ನಾಟಕ ದ್ವಿ ಉದ್ದೇಶ ಮೊದಲ ಮೊಟ್ಟೆ ಇಡುವ ವಯಸ್ಸು 175 ದಿನಗಳು. ಕೋಳಿಗಳು ವಾರ್ಷಿಕವಾಗಿ ಸುಮಾರು 140-150 ಮೊಟ್ಟೆಗಳನ್ನು ಇಡುತ್ತವೆ. ಸರಾಸರಿ ದೇಹದ ತೂಕ ಗಂಡು ಕೋಳಿಗಳಲ್ಲಿ 3-3.5 ಕಿ.ಗ್ರಾಂ ಮತ್ತು ಹೆಣ್ಣು ಕೋಳಿಗಳಲ್ಲಿ 2-2.5 ಕಿ.ಗ್ರಾಂ. 8 ವಾರಗಳ ಅವಧಿಯಲ್ಲಿ ಸೂಮಾರು 1.6 ಕಿ.ಗ್ರಾಂ ದೇಹದ ತೂಕವನ್ನು ಹೊಂದುತ್ತದೆ.
ಸ್ವರ್ಣಧಾರ ಬೆಂಗಳೂರು, ಕರ್ನಾಟಕ ದ್ವಿ ಉದ್ದೇಶ ಒಂದು ದಿನದ ಮರಿಯ ತೂಕ 45-50 ಗ್ರಾಂ. ಸರಾಸರಿ ದೇಹದ ತೂಕ ಗಂಡು ಕೋಳಿಗಳಲ್ಲಿ 3-3.5 ಕಿ.ಗ್ರಾಂ ಮತ್ತು ಹೆಣ್ಣು ಕೋಳಿಗಳಲ್ಲಿ 2-2.5 ಕಿ.ಗ್ರಾಂ. ಹಾಗೆಯೇ, 1 ಕಿ.ಗ್ರಾಂ ದೇಹದ ತೂಕವನ್ನು ಪಡೆಯಲು ಬೇಕಾಗುವ ಅವಧಿ 8 ವಾರಗಳು. ಮೊಟ್ಟೆ ಇಡುವ ವಯಸ್ಸು 156 ದಿನಗಳು. ವಾರ್ಷಿಕ ಮೊಟ್ಟೆ ಉತ್ಪಾದನೆ 180-200 ಮೊಟ್ಟೆಗಳು.
ನಂದನಂ I ಚೆನ್ನೈ, ತಮಿಳುನಾಡು ದ್ವಿ ಉದ್ದೇಶ ಕೆಂಪು ಗರಿಗಳು, ಕಂದು ಬಣ್ಣದ ಮೊಟ್ಟೆಗಳು ಮತ್ತು ಹೆಚ್ಚಿನ ಫಲವತ್ತತೆ ಈ ತಳಿಯ ಪ್ರಮುಖ ಲಕ್ಷಣಗಳಾಗಿವೆ. ವರ್ಷಕ್ಕೆ 180 ಮೊಟ್ಟೆಗಳನ್ನು ಉತ್ಪಾದಿಸುತ್ತದೆ. 12 ವಾರಗಳ ವಯಸ್ಸಿನಲ್ಲಿ ಒಂದು ಕಿ.ಗ್ರಾಂ ದೇಹದ ತೂಕವನ್ನು ಪಡೆಯುತ್ತದೆ.
ನಂದನಂ II ಚೆನ್ನೈ, ತಮಿಳುನಾಡು ಮಾಂಸ ಉತ್ಪಾದನೆ 8ನೇ ವಾರದಲ್ಲಿ 1.44 ಕಿ.ಗ್ರಾಂ ದೇಹದ ತೂಕ ಹೊಂದಿದ್ದು, 2.66 ಆಹಾರ ಪರಿವತ೯ನಾ ದಕ್ಷತೆಯನ್ನು ಹೊಂದಿರುತ್ತದೆ. ಆಕರ್ಷಕ ಪುಕ್ಕಗಳಿಂದಾಗಿ ಅರೆ ನಗರ ರೈತರಲ್ಲಿ ಹಿತ್ತಲಿನ ಕೋಳಿಯಾಗಿ ಹೆಚ್ಚು ಜನಪ್ರಿಯವಾಗಿದೆ.
ಜಾರ್ಸಿಮ್ ರಾಂಚಿ, ಜಾರ್ಖಂಡ್ ದ್ವಿ ಉದ್ದೇಶ 6 ವಾರಗಳಲ್ಲಿ ತೂಕ 400-500 ಗ್ರಾಂ. ಲೈಂಗಿಕ ಪ್ರಬುದ್ಧತೆಯ ಸಮಯದಲ್ಲಿ ತೂಕ 1600-1800 ಗ್ರಾಂ ತೂಕವಿರುತ್ತದೆ. ಮೊದಲ ಮೊಟ್ಟೆ ಇಡುವ ವಯಸ್ಸು 175-180 ದಿನಗಳು. ಕೋಳಿಗಳು ಹಿತ್ತಲಿನ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ 165-170 ಮೊಟ್ಟೆ ಇಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಕಾಮರೂಪ ಗುವಾಹಟಿ, ಅಸ್ಸಾಂ ದ್ವಿ ಉದ್ದೇಶ ಇದು ಅಸ್ಸಾಂನ ಸ್ಥಳೀಯ ಪ್ರಬೇಧ (25%), ಬಣ್ಣದ ಬ್ರಾಯ್ಲರ್ (25%) ಮತ್ತು ಡಾಲ್ಹೆಮ್ ರೆಡ್ (50%) ಬಳಸಿ ಅಭಿವೃದ್ಧಿ ಪಡಿಸಿದ ತಳಿ. 8 ಮತ್ತು 20 ವಾರಗಳಲ್ಲಿ ದೇಹದ ತೂಕ ಕ್ರಮವಾಗಿ 500-650 ಗ್ರಾಂ ಮತ್ತು 1300-1500 ಗ್ರಾಂ. ಗಂಡು 40 ವಾರಗಳ ವಯಸ್ಸಿನಲ್ಲಿ 1800-2200 ಗ್ರಾಂ ತೂಗುತ್ತದೆ. ವಾರ್ಷಿಕ ಮೊಟ್ಟೆ ಉತ್ಪಾದನೆ 118-130 ಮೊಟ್ಟೆಗಳು.
ಪ್ರತಾಪಧನ್ ಉದಯಪುರ, ರಾಜಸ್ಥಾನ ದ್ವಿ ಉದ್ದೇಶ ಒಂದು ದಿನದ ಮರಿಯ ತೂಕ 35 ಗ್ರಾಂ, 20 ವಾರಗಳ ವಯಸ್ಸಿನಲ್ಲಿ ಗಂಡು ಕೋಳಿಗಳು 2309 ಗ್ರಾಂ ಮತ್ತು ಹೆಣ್ಣು ಕೋಳಿಗಳು 1734 ಗ್ರಾಂ. ಲೈಂಗಿಕವಾಗಿ ಪ್ರಬುದ್ಧವಾಗುವ ವಯಸ್ಸು 170 ದಿನಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆಯು 161 ಮೊಟ್ಟೆಗಳು. ಮೊದಲ ಮೊಟ್ಟೆ ಉತ್ಪಾದನೆಯ ಸರಾಸರಿ ವಯಸ್ಸು 125 ದಿನಗಳು.
CARIBRO -ವಿಶಾಲ್ (ಕ್ಯಾರಿಬ್ರೊ-91) ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಮಾಂಸ ಉತ್ಪಾದನೆ ಒಂದು ದಿನದ ಮರಿಯ ತೂಕ 43 ಗ್ರಾಂ, 6 ನೇ ಮತ್ತು 7 ನೇ ವಾರಗಳಲ್ಲಿ ತೂಕ ಕ್ರಮವಾಗಿ 1650-1700 ಗ್ರಾಂ ಮತ್ತು 2000-2150 ಗ್ರಾಂ ಇರುತ್ತದೆ. 6 ವಾರಗಳಲ್ಲಿ ಆಹಾರ ಪರಿವರ್ತನೆ ಅನುಪಾತ 1.85 ಆಗಿದೆ.
CARIBRO ಟ್ರೋಪಿಕಾನಾ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಮಾಂಸ ಉತ್ಪಾದನೆ ಇದು ಬಿಸಿ ಮತ್ತು ಶುಷ್ಕ ಹವಾಮಾನದ ಪ್ರದೇಶಗಳಿಗೆ ಸೂಕ್ತವಾಗಿದೆ. 6 ನೇ ಮತ್ತು 7 ನೇ ವಾರಗಳಲ್ಲಿ ದೇಹದ ತೂಕ ಕ್ರಮವಾಗಿ 1300 ಗ್ರಾಂ ಮತ್ತು 1800 ಗ್ರಾಂ ಇರುತ್ತದೆ. 7 ವಾರಗಳಲ್ಲಿ ಆಹಾರ ಪರಿವರ್ತನೆ ಅನುಪಾತ 2.11 ಆಗಿದೆ.
CARIBRO -ಧನರಾಜ್ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಮಾಂಸ ಉತ್ಪಾದನೆ CARIBRO ಧನರಾಜ ಕೋಳಿಯು ತನ್ನ ಬಹುವರ್ಣದ ಪುಕ್ಕಗಳು ಮತ್ತು ಹೆಚ್ಚಿನ ಆರ್ಥಿಕ ಲಾಭದ ಕಾರಣದಿಂದಾಗಿ ರೈತರಲ್ಲಿ ಹೆಚ್ಚು ಆದ್ಯತೆಯ ಪಕ್ಷಿಯಾಗಿದೆ. ಒಂದು ದಿನದ ಮರಿಯ ತೂಕ 46 ಗ್ರಾಂ. 6 ನೇ ಮತ್ತು 7 ನೇ ವಾರಗಳಲ್ಲಿ ತೂಕ ಕ್ರಮವಾಗಿ 1500-1700 ಗ್ರಾಂ ಮತ್ತು 2000-2125 ಗ್ರಾಂ ಇರುತ್ತದೆ. 7 ವಾರಗಳಲ್ಲಿ ಆಹಾರ ಪರಿವರ್ತನೆ ಅನುಪಾತ 1.92 ಆಗಿದೆ.
CARIBRO ಮೃತ್ಯುಂಜಯ್ ಇಜತ್‌ನಗರ (ಬರೇಲಿ), ಉತ್ತರ ಪ್ರದೇಶ ಮಾಂಸ ಉತ್ಪಾದನೆ CARIBRO ಮೃತ್ಯುಂಜಯವು ಬಿಸಿ ಮತ್ತು ಶುಷ್ಕ ಪ್ರದೇಶಗಳಿಗೆ ಸೂಕ್ತವಾದ ಮಿಶ್ರತಳಿಯಾಗಿದೆ. ಒಂದು ದಿನದ ಮರಿಯ ತೂಕ 38-42 ಗ್ರಾಂ, 6 ನೇ ಮತ್ತು 7 ನೇ ವಾರಗಳಲ್ಲಿ ತೂಕ ಕ್ರಮವಾಗಿ 1400-1500 ಗ್ರಾಂ ಮತ್ತು 1800-2000 ಗ್ರಾಂ ಇರುತ್ತದೆ. 6 ಮತ್ತು 7 ವಾರಗಳಲ್ಲಿ ಆಹಾರ ಪರಿವರ್ತನೆ ಅನುಪಾತ ಕ್ರಮವಾಗಿ 1.95 ಮತ್ತು 2.11 ಇರುತ್ತದೆ.
ಶ್ರೀನಿಧಿ ಹೈದರಾಬಾದ್, ತೆಲಂಗಾಣ ದ್ವಿ ಉದ್ದೇಶ 6 ವಾರ ಮತ್ತು 20 ವಾರಗಳಲ್ಲಿ ದೇಹದ ತೂಕ ಕ್ರಮವಾಗಿ 600-650 ಗ್ರಾಂ ಮತ್ತು 1700-2000 ಗ್ರಾಂ. ಮೊದಲ ಮೊಟ್ಟೆ ಇಡುವ ವಯಸ್ಸು 165-170 ದಿನಗಳು. ಹಿತ್ತಲಿನಲ್ಲಿ ವಾರ್ಷಿಕ ಮೊಟ್ಟೆ ಉತ್ಪಾದನೆ 140-150 ಮೊಟ್ಟೆಗಳು.
ನರ್ಮದಾ ನಿಧಿ ಜಬಲಪುರ, ಮಧ್ಯಪ್ರದೇಶ ದ್ವಿ ಉದ್ದೇಶ ಸ್ಥಳೀಯ ತಳಿ ಕಡಕನಾಥ್‌ನ 25% ಆನುವಂಶಿಕತೆಯನ್ನು ಮತ್ತು 75% ಸುಧಾರಿತ ಬ್ರಾಯ್ಲರ್ ಜರ್ಮ್‌ಪ್ಲಾಸಂ (ಜಬಲ್‌ಪುರ್ ಕೊಲ್.) ಅನ್ನು ಹೊಂದಿದೆ. ಗಂಡು ಕೋಳಿಗಳು 9-10 ವಾರಗಳ ವಯಸ್ಸಿನಲ್ಲಿ 1 ಕಿ.ಗ್ರಾಂ ಮತ್ತು 20 ವಾರಗಳಲ್ಲಿ 1550 ರಿಂದ 2210 ಗ್ರಾಂ ತೂಕ ಪಡೆಯುತ್ತದೆ. ಹೆಣ್ಣು ಕೋಳಿಗಳು 20 ವಾರಗಳಲ್ಲಿ 1310 ರಿಂದ 1730 ಗ್ರಾಂ ವರೆಗೆ ತೂಗುತ್ತವೆ. ಹೆಣ್ಣು ಸುಮಾರು 161 ದಿನಗಳ ವಯಸ್ಸಿನಲ್ಲಿ ಲೈಂಗಿಕವಾಗಿ ಪ್ರಬುದ್ಧವಾಗುತ್ತದೆ ಮತ್ತು ಹಿತ್ತಲಿನ ನಿರ್ವಹಣಾ ವ್ಯವಸ್ಥೆಯಲ್ಲಿ 181 ಮೊಟ್ಟೆಗಳನ್ನು ಉತ್ಪಾದಿಸುತ್ತದೆ.
ಹಿಮಸಮೃದ್ಧಿ ಪಾಲಂಪೂರ್, ಹಿಮಾಚಲ ಪ್ರದೇಶ ದ್ವಿ ಉದ್ದೇಶ ಒಂದು ದಿನದ ವಯಸ್ಸಿನಲ್ಲಿ ದೇಹದ ತೂಕ 35-39 ಗ್ರಾಂ ಮತ್ತು 8 ವಾರಗಳ ವಯಸ್ಸಿನಲ್ಲಿ ದೇಹದ ತೂಕ 400-600 ಗ್ರಾಂ.

20 ವಾರಗಳ ವಯಸ್ಸಿನಲ್ಲಿ ಗಂಡು ಮತ್ತು ಹೆಣ್ಣು ಕೋಳಿಗಳ ದೇಹದ ತೂಕ ಕ್ರಮವಾಗಿ 1400-1700 ಗ್ರಾಂ ಮತ್ತು 1250-1400 ಗ್ರಾಂ ಇರುತ್ತದೆ.

ಮೊದಲ ಮೊಟ್ಟೆ ಇಡುವ ವಯಸ್ಸು 170-190 ದಿನಗಳು ಮತ್ತು ಒಟ್ಟು ಮೊಟ್ಟೆ ಉತ್ಪಾದನೆಯು ವಾರ್ಷಿಕವಾಗಿ 140-170 ಇದೆ.
ಛಾಬ್ರೋ ಹೆಸರಘಟ್ಟ, ಕರ್ನಾಟಕ ಮಾಂಸ ಉತ್ಪಾದನೆ ಬಹು ಬಣ್ಣದ ಪುಕ್ಕಗಳನ್ನು ಹೊಂದಿರುವ ಈ ಕೋಳಿ 60 ದಿನಗಳಲ್ಲಿ 1.6 - 1.7 ಕಿ.ಗ್ರಾಂ ದೇಹದ ತೂಕವನ್ನು ಪಡೆಯುತ್ತದೆ. ಒಂದು ದಿನದ ವಯಸ್ಸಿನಲ್ಲಿ ದೇಹದ ತೂಕ 40 ಗ್ರಾಂ ಇರುತ್ತದೆ. ಇದು 2.48 ರ ಆಹಾರ ಪರಿವರ್ತನೆ ಅನುಪಾತವನ್ನು ಹೊಂದಿದೆ. ಇದು ಹಿತ್ತಲಿನಲ್ಲಿ ಸಾಕಲು ಸೂಕ್ತವಾಗಿದೆ.

Responsive image
Responsive image

ಪ್ರತಾಪಧನ್ ಕೋಳಿ (ಮೂಲ: MPUAT, ಉದಯಪುರ)

Responsive image

ಗಿರಿರಾಜ ಕೋಳಿ

Responsive image

ವನರಾಜ ಕೋಳಿ

ಹಿತ್ತಲಿನ ಕೋಳಿ ಸಾಕಾಣಿಕೆಯ ಸುಧಾರಿತ ತಳಿಗಳ ನಿರ್ವಹಣೆ