ಹಿತ್ತಲಿನ ಕೋಳಿಗಳಿಗೆ ನೀರು ಅತ್ಯಂತ ಮುಖ್ಯವಾದ ಪೋಷಕಾಂಶವಾಗಿದ್ದು, ದಿನದ ಎಲ್ಲಾ ಸಮಯದಲ್ಲೂ ತಾಜಾ, ಶುದ್ಧ ಮತ್ತು ತಂಪಾದ ನೀರಿನ ಲಭ್ಯತೆವಿರಬೇಕು.
ಎರಡು ದಿನಗಳವರೆಗೆ ಪಕ್ಷಿಗಳಿಗೆ ನೀರು ಒದಗಿಸದಿದ್ದರೆ, ಮೊಟ್ಟೆ ಉತ್ಪಾದನೆ ಸಂಪೂಣ೯ವಾಗಿ ನಿಂತುಹೋಗುತ್ತದೆ ಮತ್ತು ಪಕ್ಷಿಗಳು ಗರಿಗಳನ್ನು ಉದುರಿಸುವ ಮತ್ತು ನವೀಕರಿಸುವ ಪ್ರಕ್ರಿಯೆಯಾದ ಮೌಲ್ಟಿಂಗ್ ಕ್ರಿಯೆಯನ್ನು ಪ್ರಾರಂಭಿಸುತ್ತವೆ.
ಮೌಲ್ಟಿಂಗ್ ಸಮಯದಲ್ಲಿ ಕೋಳಿಯ ಸಂತಾನೋತ್ಪತ್ತಿ ಶರೀರಶಾಸ್ತ್ರವು ಮೊಟ್ಟೆ ಇಡುವುದರಿಂದ ಸಂಪೂರ್ಣ ವಿಶ್ರಾಂತಿ ಪಡೆಯುತ್ತದೆ ಮತ್ತು ಕೋಳಿ ತನ್ನ ದೇಹದ ಪೋಷಕಾಂಶಗಳನ್ನು ಸಂರಕ್ಷಿಸಿಕೊಳ್ಳುತ್ತದೆ. ಮೊಟ್ಟೆಯಿಡುವ ಕಾಲದಲ್ಲಿ ಮೊಟ್ಟೆ ಉತ್ಪಾದನೆಯನ್ನು ಪುನರಾರಂಭಿಸಲು ಕನಿಷ್ಠ 10-15 ದಿನಗಳು ಬೇಕಾಗುತ್ತವೆ.
ಒಂದು ಕೋಳಿ ತಾನು ತಿನ್ನುವ ಆಹಾರಕ್ಕಿಂತ ಎರಡು ಪಟ್ಟು ನೀರನ್ನು ಕುಡಿಯಬಹುದು. ನೀರನ್ನು ಸರಳ ತೊಟ್ಟಿಯಲ್ಲಿ ನೆಲದ ಮೇಲೆ ಅಥವಾ ನೇತಾಡಿಸಿ ಒದಗಿಸಬಹುದು.