Responsive Image

ದೇಶಿ ಕೋಳಿ ತಳಿಗಳು

ದೇಶಿ ಕೋಳಿ ತಳಿಗಳು :

ಭಾರತದ ವಿವಿಧ ಭಾಗಗಳಲ್ಲಿ ವಿಕಸನಗೊಂಡ ಸ್ಥಳೀಯ ತಳಿಗಳು

ತಳಿ ಸ್ಥಳ ಗುಣಲಕ್ಷಣಗಳು
ಅಂಕಲೇಶ್ವರ ಗುಜರಾತ್ ಗುಜರಾತ್‌ನ ನರ್ಮದಾ ಮತ್ತು ಭರೂಚ್ ಜಿಲ್ಲೆಗಳ ಬುಡಕಟ್ಟು ಜನಾಂಗದವರು ಇದನ್ನು ಸಾಕುತ್ತಾರೆ. ಇದು ಚಿಕ್ಕದಾದ, ಒಂಟಿ ಕಿರಿಟ (Comb) ಹೊಂದಿದ್ದು, ಗಡಸುತನಕ್ಕೆ ಹೆಸರುವಾಸಿಯಾಗಿದ್ದರೂ, ಉತ್ಪಾದಕತೆಯಲ್ಲಿ ಕಳಪೆ ಪ್ರದಶ೯ನ ಹೊಂದಿದೆ. ಗಂಡು ಕೋಳಿಯ ಸರಾಸರಿ ತೂಕ 1.8 ಕಿ. ಗ್ರಾಂ ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.6 ಕಿ. ಗ್ರಾಂ ಹಾಗೂ ಮೊದಲ ಮೊಟ್ಟೆ ಇಡುವ ವಯಸ್ಸು ಸರಾಸರಿ 06 ತಿಂಗಳುಗಳು.
ಅಸೀಲ್ ಆಂಧ್ರಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢ ಇದು ಹೆಚ್ಚಿನ ಸಹಿಷ್ಣುತೆ ಹಾಗೂ ಗಾಂಭೀರ್ಯದ ನಡಿಗೆಗೆ ಹೆಸರುವಾಸಿಯಾದ ಬೇಟೆಯಾಡುವ ಹಕ್ಕಿ. ಸ್ಥಳೀಯ ಪಕ್ಷಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು, ಬೆನ್ನಿನಿಂದ ಕಾಲಿನ ತುದಿಯವರೆಗೆ 28 ಇಂಚುಗಳಷ್ಟು ಉದ್ದವಿದೆ. ಸರಾಸರಿ ತೂಕವು ಹುಂಜಗಳಲ್ಲಿ 3-5 ಕಿ. ಗ್ರಾಂ ಮತ್ತು ಕೋಳಿಗಳಿಗೆ 2-4 ಕಿ. ಗ್ರಾಂ ವರೆಗೆ ಬದಲಾಗುತ್ತದೆ. ಮೊದಲ ಮೊಟ್ಟೆಯಿಡುವ ವಯಸ್ಸು 6.68 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆಯು ಸರಾಸರಿ 33.17% ರಷ್ಟಿದೆ.
ಬುಸ್ರಾ ಗುಜರಾತ್ ಮತ್ತು ಮಹಾರಾಷ್ಟ್ರ ಯಾವುದೇ ಗಮನಾರ್ಹ ಗುಣವಿಲ್ಲದ ಸಣ್ಣ ಮತ್ತು ಮಧ್ಯಮ ಗಾತ್ರದ ಹಕ್ಕಿ. ಗಂಡು ಹಕ್ಕಿಯ ಸರಾಸರಿ ತೂಕ 1.11 ಕಿ. ಗ್ರಾಂ ಮತ್ತು ಹೆಣ್ಣು ಹಕ್ಕಿಯ ತೂಕ 0.98 ಕಿ. ಗ್ರಾಂ, ಮೊದಲ ಮೊಟ್ಟೆ ಇಡುವ ವಯಸ್ಸು 6 ತಿಂಗಳುಗಳು.
ಚಿತ್ತಗಾಂಗ್ ಮೇಘಾಲಯ ಮತ್ತು ತ್ರಿಪುರ ಗಂಡು ಕೋಳಿಗಳು 3.5 ರಿಂದ 4.5 ಕಿ. ಗ್ರಾಂ ತೂಕ ಹಾಗೂ ಹೆಣ್ಣು ಕೋಳಿಗಳು 3 ರಿಂದ 4 ಕಿ. ಗ್ರಾಂ ತೂಕ ಹೊಂದಿದ್ದು ಉತ್ತಮ ಬೇಟೆಯಾಡುವ ದೊಡ್ಡ ಹಕ್ಕಿ.
ಡ್ಯಾಂಕಿ ಆಂಧ್ರ ಪ್ರದೇಶ ಒಂದು ಕಿರಿಟದೊಂದಿಗೆ ಹೊಳಪಿನ ಪುಕ್ಕಗಳನ್ನು ಹೊಂದಿರುವ ಭಾರವಾದ ಹಕ್ಕಿ. ಹುಂಜಗಳು ಉದ್ದವಾದ ಕುತ್ತಿಗೆ ಮತ್ತು ಕಾಲುಗಳನ್ನು ಹೊಂದಿದ್ದು, ಕೋಳಿ ಜಗಳದಲ್ಲಿ ಆಡಲು ಉತ್ತಮವಾಗಿದೆ. ಗಂಡು ಕೋಳಿಯ ಸರಾಸರಿ ತೂಕ 3.11 ಕಿ. ಗ್ರಾಂ ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 2.22 ಕಿ. ಗ್ರಾಂ. ಇದೆ. ಮೊದಲ ಮೊಟ್ಟೆಯಿಡುವ ವಯಸ್ಸು 7.4 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 32.
ದಾವೋತಿಗಿರ್ ಅಸ್ಸಾಂ ಬೋಡೋ ಸಮುದಾಯದಿಂದ ಸಾಕಲಾಗುವ ಉತ್ತಮ ಬಾಲ್ಯ ಬೆಳವಣಿಗೆಯನ್ನು ಹೊಂದಿರುವ ಭಾರವಾದ ತಳಿ. ಗಂಡು ಕೋಳಿಯ ಸರಾಸರಿ ತೂಕ 1.79 ಕಿ. ಗ್ರಾಂ. ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.63 ಕಿ. ಗ್ರಾಂ. ಮೊದಲ ಮೊಟ್ಟೆ ಇಡುವ ವಯಸ್ಸು 6 ತಿಂಗಳುಗಳು.
ಘಾಗುಸ್ ಆಂಧ್ರಪ್ರದೇಶ ಮತ್ತು ಕರ್ನಾಟಕ ಸಣ್ಣ ಕಿರಿಟ ಮತ್ತು ವಾಟಲ್‌ಗಳನ್ನು ಹೊಂದಿರುವ ಸಣ್ಣ ಗಾತ್ರದ ಹಕ್ಕಿ. ದಪ್ಪ ಕುತ್ತಿಗೆ, ಗರಿಗಳಿರುವ ಶ್ಯಾಂಕ್‌ಗಳು ಮತ್ತು ಕೆಲವು ಪಕ್ಷಿಗಳು ಮೀಸೆಯನ್ನು ಹೊಂದಿದ್ದು, ಹೆಚ್ಚಾಗಿ ಅಲೆಮಾರಿ ಬುಡಕಟ್ಟು ಜನಾಂಗದವರು ಸಾಕುತ್ತಾರೆ. ಗಂಡು ಕೋಳಿಯ ಸರಾಸರಿ ತೂಕ 2.16 ಕಿ. ಗ್ರಾಂ. ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.43 ಕಿ. ಗ್ರಾಂ. ಮತ್ತು ಮೊದಲ ಮೊಟ್ಟೆಯಿಡುವ ವಯಸ್ಸು 5.75 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 52.
ಹನ್ಸಿಲಿ ಒಡಿಶಾ ಈ ಪಕ್ಷಿಗಳು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದು, ಗಂಡು ಹಕ್ಕಿಗಳು ಆಟಗಳ ಉದ್ದೇಶಕ್ಕೆ ಸೂಕ್ತವಾಗಿವೆ. ಗಂಡು ಕೋಳಿಯ ಸರಾಸರಿ ತೂಕ 3.79 ಕಿ. ಗ್ರಾಂ. ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 2.52 ಕಿ. ಗ್ರಾಂ. ಮೊದಲ ಮೊಟ್ಟೆ ಇಡುವ ವಯಸ್ಸು 7.22 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 67.31.
ಹ್ಯಾರಿಂಗಟಾ ಕಪ್ಪು ಪಶ್ಚಿಮ ಬಂಗಾಳ ವಿಶಿಷ್ಟವಾದ ಪದರ ರಚನೆಯನ್ನು ಹೊಂದಿರುವ ಸಣ್ಣ ದೇಹದ ಕಪ್ಪು ಕೋಳಿ. ಮೊದಲ ಮೊಟ್ಟೆಯಿಡುವ ವಯಸ್ಸು 5.63 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 45. ಗಂಡು ಕೋಳಿಯ ಸರಾಸರಿ ತೂಕ 1.28 ಕಿ. ಗ್ರಾಂ. ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.12 ಕಿ. ಗ್ರಾಂ.
ಕಡಕನಾಥ್ ಮಧ್ಯಪ್ರದೇಶ ಮಧ್ಯಮ ಗಾತ್ರದ ಮೊಟ್ಟೆ ಇಡುವ ಕೋಳಿ. ಗಂಡು ಮತ್ತು ಹೆಣ್ಣು ಕೋಳಿಗಳ ಚರ್ಮ, ಕೊಕ್ಕು, ಶ್ಯಾಂಕ್, ಕಾಲ್ಬೆರಳುಗಳು ಮತ್ತು ಪಾದದ ಅಡಿಭಾಗಗಳು ಗಾಢ ಬೂದು ಬಣ್ಣದಲ್ಲಿರುತ್ತವೆ. ಕಿರಿಟ, ವಾಟಲ್ ಮತ್ತು ನಾಲಿಗೆ ಕೂಡ ನೇರಳೆ ಬಣ್ಣವನ್ನು ಹೊಂದಿರುತ್ತವೆ. ಹೆಚ್ಚಿನ ಆಂತರಿಕ ಅಂಗಗಳು ಕಪ್ಪು ವರ್ಣದ್ರವ್ಯವನ್ನು ಹೊಂದಿರುತ್ತವೆ. ಗಂಡು ಕೋಳಿಯ ಸರಾಸರಿ ತೂಕ 1.6 ಕಿ. ಗ್ರಾಂ. ಹೆಣ್ಣು ಕೋಳಿಯ ತೂಕ 1.125 ಕಿ. ಗ್ರಾಂ. ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 80.
ಕಾಳಹಸ್ತಿ ಆಂಧ್ರ ಪ್ರದೇಶ ಗಾತ್ರದಲ್ಲಿ ಚಿಕ್ಕದಾಗಿರುವುದೊಂದು ಹೊರತುಪಡಿಸಿ ಉಳಿದೆಲ್ಲಾ ಲಕ್ಷಣಗಳು ಡ್ಯಾಂಕಿಯಂತೆಯೇ ಇವೆ. ಗಂಡು ಕೋಳಿಯ ಸರಾಸರಿ ತೂಕ 2.48 ಕಿ. ಗ್ರಾಂ ಹಾಗೂ ಹೆಣ್ಣು ಕೋಳಿಯ ಸರಾಸರಿ ತೂಕ 1.85 ಕಿ. ಗ್ರಾಂ. ಮೊದಲ ಮೊಟ್ಟೆ ಇಡುವ ವಯಸ್ಸು 7.16 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 34.
ಕಾಶ್ಮೀರ ಫಾವೆರೋಲ್ಲಾ ಜಮ್ಮು ಮತ್ತು ಕಾಶ್ಮೀರ ಗಾತ್ರದಲ್ಲಿ ಚಿಕ್ಕದಾಗಿದ್ದು, ಸಣ್ಣ ಕಿರಿಟ ಮತ್ತು ವಾಟಲ್‌ಗಳನ್ನು ಹೊಂದಿರುತ್ತವೆ. ಗರಿಗಳಿರುವ ಕಿರಿಟ ಇರುತ್ತದೆ. ಮೊದಲ ಮೊಟ್ಟೆಯಿಡುವ ವಯಸ್ಸು 7.0 ತಿಂಗಳುಗಳು ಮತ್ತು ಕೋಳಿಯ ಸರಾಸರಿ ತೂಕ 1.0 ರಿಂದ 1.2 ಕಿ. ಗ್ರಾಂ.
ಕೌನಾಯೆನ್ ಮಣಿಪುರ ತುಲನಾತ್ಮಕವಾಗಿ ಉದ್ದವಾದ ತೊಡೆ, ಅಗಲವಾದ ಮತ್ತು ದುಂಡಗಿನ ಪಕ್ಕೆಲುಬುಗಳು, ಉದ್ದವಾದ ಹಾಗೂ ಎಲುಬು ಕಾಣುವಂತ ದೇಹ, ತಲೆಯನ್ನು ಎತ್ತರಿಸಿ ನೆಟ್ಟಗೆ ನಿಂತಿರುವ ಭಂಗಿ. ಗಂಡು ಕೋಳಿಗಳ ಸರಾಸರಿ ತೂಕ 3.01 ಕಿ. ಗ್ರಾಂ ಹಾಗೂ ಹೆಣ್ಣು ಕೋಳಿಯ ಸರಾಸರಿ ತೂಕ 2.32 ಕಿ. ಗ್ರಾಂ. ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 35.
ಮೇವಾರಿ ರಾಜಸ್ಥಾನ ಗಂಡು ಕೋಳಿಯ ಸರಾಸರಿ ತೂಕ 1.9 ಕಿ. ಗ್ರಾಂ. ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.25 ಕಿ. ಗ್ರಾಂ., ಮೊದಲ ಮೊಟ್ಟೆ ಇಡುವ ವಯಸ್ಸು 6.78 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 43.16.
ಮಿರಿ ಅಸ್ಸಾಂ ಈ ದ್ವಿ-ಉದ್ದೇಶದ ಪಕ್ಷಿಗಳನ್ನು ಮಿರಿ ಬುಡಕಟ್ಟು ಜನಾಂಗದವರು ಸಾಕುತ್ತಾರೆ. ಇದು ಸಣ್ಣ ಗಾತ್ರದ ಕಪ್ಪು ಹಕ್ಕಿ. ಮೊದಲ ಮೊಟ್ಟೆಯಿಡುವ ವಯಸ್ಸು 6.99 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 62.23.
ನಿಕೋಬಾರಿ ಅಂಡಮಾನ್ ಮತ್ತು ನಿಕೋಬಾರ್ ಉತ್ತಮ ಮೊಟ್ಟೆಗಳನ್ನು ನೀಡುವಲ್ಲಿ ಹೆಸರುವಾಸಿಯಾದ ಸ್ಥಳೀಯ ಪಕ್ಷಿ. ಕಂದು ಮ್ಯಾಟ್ ಬಣ್ಣ, ಚಿಕ್ಕ ಗಾತ್ರ ಮತ್ತು ಸಣ್ಣ ಕಾಲಿನ ಪಕ್ಷಿಗಳು. ಸ್ವಲ್ಪ ದುಂಡಗಿನ ದೇಹ ಮತ್ತು ದೃಢವಾದ ಕುತ್ತಿಗೆಯನ್ನು ಹೊಂದಿರುತ್ತವೆ. ಗಂಡು ಕೋಳಿಯ ಸರಾಸರಿ ತೂಕ 1.8 ಕಿ. ಗ್ರಾಂ ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.3 ಕಿ. ಗ್ರಾಂ. ಮೊದಲ ಮೊಟ್ಟೆಯಿಡುವ ವಯಸ್ಸು 6.63 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 140-162.
ಪಂಜಾಬ್ ಬ್ರೌನ್ ಪಂಜಾಬ್ ಮತ್ತು ಹರಿಯಾಣ ಕಂದು ಬಣ್ಣದ ಪುಕ್ಕಗಳು, ಹಳದಿ ಕೊಕ್ಕು, ಕಾಲುಗಳು ಮತ್ತು ಪಾದಗಳನ್ನು ಹೊಂದಿದ್ದು ಮಾಂಸಕ್ಕಾಗಿ ಬಳಸುವ ತಳಿ. ಗಂಡು ಕೋಳಿಯ ಸರಾಸರಿ ತೂಕ 2.15 ಕಿ. ಗ್ರಾಂ ಹಾಗೂ ಹೆಣ್ಣು ಕೋಳಿಯ ಸರಾಸರಿ ತೂಕ 1.56 ಕಿ. ಗ್ರಾಂ. ಮೊದಲ ಮೊಟ್ಟೆಯಿಡುವ ವಯಸ್ಸು 5.5 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 70.
ಟೆಲ್ಲಿಚೆರಿ ಕೇರಳ ಕಪ್ಪು ಚರ್ಮ ಹೊಂದಿರುವ ಸಣ್ಣ ಹಕ್ಕಿ. ಪುಕ್ಕಗಳ ಬಣ್ಣ ಕಪ್ಪು, ಬೂದು ಮತ್ತು ಕೆಲವೊಮ್ಮೆ ವಿವಿಧ ಬಣ್ಣಗಳ ಸಂಯೋಜನೆಯೊಂದಿಗೆ ಇರಬಹುದು. ಗಂಡು ಕೋಳಿಯ ಸರಾಸರಿ ತೂಕ 1.62 ಕಿ. ಗ್ರಾಂ ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.24 ಕಿ. ಗ್ರಾಂ. ಮೊದಲ ಮೊಟ್ಟೆಯಿಡುವ ವಯಸ್ಸು 6 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 70 ಆಗಿದೆ.
ಉತ್ತರಾ ಉತ್ತರಾಖಂಡ ಸಣ್ಣ ಮತ್ತು ಬೀಗಿಯಾದ ದೇಹ, ಹೋರಾಡುವ ಸಾಮರ್ಥ್ಯ, ಆಕರ್ಷಕ ಪುಕ್ಕಗಳು, ಹಿತ್ತಲಿನ ಪಾಲನೆಗೆ ಸೂಕ್ತತೆ ಮತ್ತು ಮಾಂಸದ ಉತ್ತಮ ರುಚಿ ಈ ಕೋಳಿಯ ಪ್ರಮುಖ ಲಕ್ಷಣಗಳು. ಬಲವಾದ ರೆಕ್ಕೆಗಳನ್ನು ಹೊಂದಿದ್ದು, ಹಗುರವಾದ ದೇಹ ಹೊಂದಿರುವುದರಿಂದ ವೇಗವಾಗಿ ಓಡಿ ಸುರಕ್ಷಿತ ಸ್ಥಳಕ್ಕೆ ಹಾರುವ ಮೂಲಕ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವ ಹೆಚ್ಚಿನ ಅವಕಾಶವನ್ನು ಹೊಂದಿವೆ. ಗಂಡು ಕೋಳಿಯ ಸರಾಸರಿ ತೂಕ 1.30 ಕಿ. ಗ್ರಾಂ ಮತ್ತು ಹೆಣ್ಣು ಕೋಳಿಯ ಸರಾಸರಿ ತೂಕ 1.13 ಕಿ. ಗ್ರಾಂ. ಮೊದಲ ಮೊಟ್ಟೆಯಿಡುವ ವಯಸ್ಸು 5.5 ತಿಂಗಳುಗಳು ಮತ್ತು ವಾರ್ಷಿಕ ಮೊಟ್ಟೆ ಉತ್ಪಾದನೆ 137.

Responsive image

ಕಡಕನಾಥ್ ಹೆಣ್ಣು ಕೋಳಿ

Responsive image

ಕಡಕನಾಥ್ ಗಂಡು ಕೋಳಿ

Responsive image

ಕಡಕನಾಥ್ ಹೆಣ್ಣು ಕೋಳಿ

Responsive image

ಕಡಕನಾಥ್ ಗಂಡು ಕೋಳಿ

ದೇಶಿ/ಸ್ಥಳೀಯ ಕೋಳಿಗಳ ಅನುಕೂಲಗಳು

ದೇಶಿ/ಸ್ಥಳೀಯ ಕೋಳಿಗಳ ಅನಾನುಕೂಲತೆಗಳು