ಹಿತ್ತಲಿನ ಕೋಳಿ ಸಾಕಣೆ ಮತ್ತು ಅದರ ಉತ್ಪನ್ನಗಳಿಗೆ ಭಾರತೀಯ ಪರಿಸ್ಥಿತಿಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ಇನ್ನೂ ಸರಿಯಾದ ಮಾರುಕಟ್ಟೆಯ ಅಗತ್ಯವಿದೆ. ಹಿತ್ತಲಿನ ಕೋಳಿ ಸಾಕಣೆಯ ಮಾರಾಟದಲ್ಲಿ ವೈಯಕ್ತಿಕ ರೈತರು ಕೆಲವು ಸಮಸ್ಯೆಗಳನ್ನು ಎದುರಿಸಬಹುದಾದರೂ, ಸ್ವಸಹಾಯ ಗುಂಪುಗಳು (SHG), ರೈತ ಉತ್ಪಾದಕ ಸಂಸ್ಥೆಗಳು, ಕೋಳಿ ಸಾಕಣೆ ಸಹಕಾರ ಸಂಘಗಳು ಮುಂತಾದ ಸಮುದಾಯ ಆಧಾರಿತ ವಿಧಾನಗಳು ಮಧ್ಯವರ್ತಿಗಳನ್ನು ಬದಿಗಿಟ್ಟು ಕೋಳಿಗಳ ಮಾರಾಟದಲ್ಲಿ ಸರಿಯಾದ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿವೆ.
ಹಿತ್ತಲು ಕೋಳಿ ಸಾಕಾಣಿಕೆ ಪದ್ಧತಿಯಲ್ಲಿ ಭಾರತದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಮುಕ್ತ-ಶ್ರೇಣಿಯ ಅಥವಾ ಅರೆ-ತೀವ್ರ ಪರಿಸ್ಥಿತಿಗಳಲ್ಲಿ ಕೋಳಿಗಳನ್ನು ಸಾಕುವ ಸಾಂಪ್ರದಾಯಿಕ, ಸಣ್ಣ ಪ್ರಮಾಣದ ವ್ಯವಸ್ಥೆಯಾಗಿದೆ. ಇದು ಜೀವನೋಪಾಯ ಭದ್ರತೆ, ಪೌಷ್ಠಿಕಾಂಶ ಸುಧಾರಣೆ ಮತ್ತು ಗ್ರಾಮೀಣ ಉದ್ಯೋಗ ಸೃಷ್ಟಿಯಲ್ಲಿ, ವಿಶೇಷವಾಗಿ ಭೂಹೀನ ರೈತರು ಮತ್ತು ಮಹಿಳೆಯರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಣಿಜ್ಯ ಕೋಳಿ ವಲಯದ ತ್ವರಿತ ಬೆಳವಣಿಗೆಯ ಹೊರತಾಗಿಯೂ, ಹಿತ್ತಲಿನ ಕೋಳಿ ಸಾಕಣೆ ಇನ್ನೂ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಇದು ಒಟ್ಟು ಮೊಟ್ಟೆ ಉತ್ಪಾದನೆಯ ಸುಮಾರು 18-20% ರಷ್ಟಿದೆ ಮತ್ತು ಲಕ್ಷಾಂತರ ಮನೆಗಳಿಗೆ ಪೂರಕ ಆದಾಯದ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ.
ಹಿತ್ತಲಿನ ಕೋಳಿ ಸಾಕಾಣಿಕೆಗೆ ಕನಿಷ್ಠ ಆರಂಭಿಕ ಹೂಡಿಕೆಯ ಅಗತ್ಯವಿರುತ್ತದೆ. ಈ ಪದದತಿಯಲ್ಲಿ ಪಕ್ಷಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳು ಮತ್ತು ಸ್ಕ್ಯಾವೆಂಜಿಂಗ್ ಫೀಡ್ ಗಳೊಂದಿಗೆ ಸಾಕಲಾಗುತ್ತದೆ.
ಇದರ ಫಲಿತಾಂಶಗಳು:
ಹಿತ್ತಲಿನ ಕೋಳಿ ಸಾಕಣೆ "ನಡೆದಾಡುವ ಬ್ಯಾಂಕ್" ಆಗಿ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಮೊಟ್ಟೆಗಳ ಮಾರಾಟ, ಜೀವಂತ ಪಕ್ಷಿಗಳು ಅಥವಾ ಮಾಂಸದ ಮಾರಾಟ ಮತ್ತು ಮರಿಗಳ ಮಾರಾಟ ಹಾಗೂ ಸಂತಾನೋತ್ಪತ್ತಿ ಸ್ಟಾಕ್ ಮೂಲಕ ತ್ವರಿತ ಹಣವನ್ನು ಒದಗಿಸುತ್ತದೆ.
ಕೋಳಿ ಸಾಕಣೆ ವಲಯವು ಭಾರತದ ಕೃಷಿ GDP ಮತ್ತು ಉದ್ಯೋಗಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.
ಸ್ಥಿರ ವೆಚ್ಚಗಳು:
ಅಸ್ಥಿರ ವೆಚ್ಚಗಳು:
ವಾಣಿಜ್ಯ ವ್ಯವಸ್ಥೆಗಳಿಗೆ ಹೋಲಿಸಿದರೆ, ಸ್ಕ್ಯಾವೆಂಜಿಂಗ್ನಿಂದಾಗಿ ಹಿತ್ತಲು ಪದ್ಧತಿಯಲ್ಲಿ ಮೇವಿನ ವೆಚ್ಚ ಗಣನೀಯವಾಗಿ ಕಡಿಮೆಯಾಗಿರುತ್ತದೆ.
ಲಾಭದಾಯಕತೆಯು ಈ ಕೆಳಗಿನ ಅಂಶಗಳ ಮೇಲೆ ಅವಲಂಬಿಸಿರುತ್ತದೆ.
ಗಿರಿರಾಜ, ವನರಾಜ ಮತ್ತು ಗ್ರಾಮಪ್ರಿಯದಂತಹ ಸುಧಾರಿತ ತಳಿಗಳು ಉತ್ತಮ ಮೊಟ್ಟೆ ಉತ್ಪಾದನೆ ಮತ್ತು ಬೆಳವಣಿಗೆಯ ಕಾರ್ಯಕ್ಷಮತೆಯಿಂದಾಗಿ ಹೆಚ್ಚಿನ ಲಾಭವನ್ನು ನೀಡುತ್ತವೆ.
ಹಿತ್ತಲಿನ ಕೋಳಿ ಸಾಕಣೆಯಲ್ಲಿ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತ, ಸ್ಥಳೀಯ ಹಾಗೂ ಗ್ರಾಹಕರಿಗೆ ನೇರವಾದ ಸಂಪಕ೯ ಹೊಂದಿರುತ್ತದೆ. ರೈತರು ಸಾಮಾನ್ಯವಾಗಿ ಮೊಟ್ಟೆಗಳು, ಜೀವಂತ ಪಕ್ಷಿಗಳು ಹಾಗೂ ಮಾಂಸವನ್ನು ಮಾರಾಟ ಮಾಡುತ್ತಾರೆ.
ಸಣ್ಣ ಪೂರೈಕೆ ಸರಪಳಿಗಳು ಗ್ರಾಹಕ ಬೆಲೆಯಲ್ಲಿ ಹೆಚ್ಚಿನ ಉತ್ಪಾದಕರ ಪಾಲು ಹಾಗೂ ಕಡಿಮೆ ಸಾರಿಗೆ ವೆಚ್ಚವನ್ನು ಖಚಿತಪಡಿಸುತ್ತವೆ.
ಹಿತ್ತಲಿನ ಕೋಳಿ ಉತ್ಪನ್ನಗಳು (ವಿಶೇಷವಾಗಿ "ದೇಸಿ" ಮೊಟ್ಟೆಗಳು ಮತ್ತು ಮಾಂಸ) ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೆಲೆಗಳನ್ನು ಪಡೆಯುತ್ತವೆ. ಏಕೆಂದರೆ,
ನಗರ ಗ್ರಾಹಕರು ಹೆಚ್ಚಾಗಿ ಸ್ಥಳೀಯ ಕೋಳಿಗಳನ್ನು ಬಯಸುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಬೆಲೆ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.
ಭಾರತವು ಪ್ರೋಟೀನ್ ಕೊರತೆಯನ್ನು ಹೊಂದಿದ್ದು, ಮೊಟ್ಟೆ ಮತ್ತು ಕೋಳಿ ಮಾಂಸದ ಬೇಡಿಕೆ ಹೆಚ್ಚುತ್ತಿದೆ.
ಸರ್ಕಾರಿ ಯೋಜನೆಗಳು ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುವ ಮೂಲಕ ಮರುಖರೀದಿ ವ್ಯವಸ್ಥೆಗಳೊಂದಿಗೆ ಹಿತ್ತಲಿನ ಕೋಳಿ ಘಟಕಗಳನ್ನು ಉತ್ತೇಜಿಸುತ್ತವೆ.
ಹಿತ್ತಲಿನ ಕೋಳಿ ಸಾಕಣೆಯನ್ನು ಪ್ರಧಾನವಾಗಿ ಗ್ರಾಮೀಣ ಮಹಿಳೆಯರು ನಿರ್ವಹಿಸುತ್ತಿದ್ದಾರೆ̤ ಇದರಿಂದ,
ಸ್ವಸಹಾಯ ಗುಂಪು ಆಧಾರಿತ ಕೋಳಿ ಸಾಕಣೆ ಮಾದರಿಗಳು ಈ ಕೆಳಗಿನವುಗಳನ್ನು ವರ್ಧಿಸುತ್ತವೆ.
ವಿವಿಧ ಸರ್ಕಾರಿ ಕಾಯ೯ಕ್ರಮಗಳು ಹಿತ್ತಲಿನ ಕೋಳಿ ಸಾಕಣೆಯನ್ನು ಬೆಂಬಲಿಸುತ್ತವೆ̤
ಈ ಮಧ್ಯಸ್ಥಿಕೆಗಳು ಉತ್ಪಾದಕತೆ, ಮಾರುಕಟ್ಟೆ ಮತ್ತು ರೈತರ ಆದಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
ಹಿತ್ತಲಿನ ಕೋಳಿ ಸಾಕಣೆಯು ಬಲವಾದ ಭವಿಷ್ಯದ ಸಾಮರ್ಥ್ಯವನ್ನು ಹೊಂದಿದೆ̤
ವೈಜ್ಞಾನಿಕ ನಿರ್ವಹಣೆ, ತಳಿ ಸುಧಾರಣೆ ಮತ್ತು ಮಾರುಕಟ್ಟೆ ಸಂಯೋಜಿಸಿದಾಗ, ಇದು ಸುಸ್ಥಿರ ಜೀವನೋಪಾಯ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ
ಭಾರತದಲ್ಲಿ ಹಿತ್ತಲಿನ ಕೋಳಿ ಸಾಕಣೆ ಕಡಿಮೆ ವೆಚ್ಚದ, ಹೆಚ್ಚಿನ ಪ್ರಭಾವ ಬೀರುವ ಉದ್ಯಮವಾಗಿದ್ದು, ಗಮನಾರ್ಹ ಆರ್ಥಿಕ ಮತ್ತು ಮಾರುಕಟ್ಟೆ ಸಾಮರ್ಥ್ಯವನ್ನು ಹೊಂದಿದೆ. ಇದು ಆದಾಯ ಉತ್ಪಾದನೆ, ಪೌಷ್ಠಿಕ ಭದ್ರತೆ ಮತ್ತು ಮಹಿಳಾ ಸಬಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೂ, ಅದರ ಆರ್ಥಿಕ ಪ್ರಯೋಜನಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಮಾರುಕಟ್ಟೆ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು ಅತ್ಯಗತ್ಯ. ಸೂಕ್ತ ನೀತಿ ಮಧ್ಯಸ್ಥಿಕೆಗಳು ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಯೊಂದಿಗೆ, ಹಿತ್ತಲಿನ ಕೋಳಿ ಸಾಕಣೆಯು ಗ್ರಾಮೀಣ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬಹುದು.