ಕೃಷಿ ಸಂಶೋಧನೆ, ಶಿಕ್ಷಣ ಮತ್ತು ವಿಸ್ತರಣೆಯು ಕೃಷಿ ಮತ್ತು ಸಂಬಂಧಿತ ವಲಯಗಳ ಉತ್ಪಾದನೆ ಮತ್ತು ದಕ್ಷತೆಯನ್ನು ಉತ್ತೇಜಿಸಲು ಮಹತ್ವದ ಅಂಶಗಳಾಗಿವೆ. ರೈತರ ಆದಾಯ ದ್ವಿಗುಣಗೊಳಿಸುವಿಕೆ ಸಮಿತಿಯ ಪ್ರಕಾರ, ವಿಸ್ತರಣಾ ಕಾಯ೯ಕತ೯ರು ಹಾಗೂ ರೈತರ ಮಧ್ಯೆಯಿರುವ 1:1162 ಅನುಪಾತದಿಂದಾಗಿ ಮಾಹಿತಿ ಹಾಗೂ ಜ್ಞಾನದ ವ್ಯವಸ್ಥಿತ ವರ್ಗಾವಣೆ ತುಂಬಾ ಕಡಿಮೆಯಿದ್ದು, ಇದು ಬಹಳ ನಿರ್ಣಾಯಕವಾಗಿದೆ. ಇದಲ್ಲದೆ, ಪಶುಸಂಗೋಪನೆಯ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಪಡೆಯುವ ಕುಟುಂಬಗಳ ಪ್ರಮಾಣವು ಶೇಕಡಾ 8 ರಷ್ಟು ಕಡಿಮೆಯಿದೆಯೆಂದು ಅಂದಾಜಿಸಲಾಗಿದೆ (ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ, 2014).
ಈ ಸಂದರ್ಭದಲ್ಲಿ, ಮಾಹಿತಿ ಸಂಗ್ರಹಿಸಲು, ಕಲಿಯಲು, ಸಂವಹನ ನಡೆಸಲು, ಸೇವೆಗಳನ್ನು ಒದಗಿಸಲು ಮತ್ತು ಬಳಸಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಅತ್ಯಗತ್ಯ ಸಾಧನವಾಗಿದೆ. ಇದಲ್ಲದೇ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಚಯದೊಂದಿಗೆ, ಕೃಷಿ ಮತ್ತು ಸಂಬಂಧಿತ ವಲಯದ ಸಂಶೋಧಕರು, ವೃತ್ತಿಪರರು ಮತ್ತು ಇತರ ಪಾಲುದಾರರಲ್ಲಿ ಇಂತಹ ಮಾಹಿತಿಯ ಬಳಕೆಯಲ್ಲಿ ಹೆಚ್ಚಳವಾಗಿದೆ. ಈ ಸಂಗತಿಗಳನ್ನು ಆಧರಿಸಿ, ರೈತರು ಮತ್ತು ಇತರ ಪಾಲುದಾರರ ಸಾಮರ್ಥ್ಯ ವೃದ್ಧಿಗಾಗಿ ವೆಬ್ಸೈಟ್ಗಳು, ಮೊಬೈಲ್ ಅಪ್ಲಿಕೇಶನ್ಗಳು ಮತ್ತು ವೀಡಿಯೊ ಕ್ಲಿಪ್ಗಳ ರೂಪದಲ್ಲಿ ಇ-ವಿಸ್ತರಣಾ ಮಾಡ್ಯೂಲ್ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.